ಆ್ಯಪ್ನಗರ

ಪೌರತ್ವ ಪ್ರತಿಭಟನೆ ಹತ್ತಿಕ್ಕುವ ಹಿಂದಿದೆ ರಾಜಕೀಯ ಹುನ್ನಾರ; ಯತೀಂದ್ರ ಸಿದ್ದರಾಮಯ್ಯ ಆಕ್ರೋಶ

ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನದ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Vijaya Karnataka Web 22 Dec 2019, 8:09 pm
ಮೈಸೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019 ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web citizenship amendment act protest dr yathindra siddaramaiah slams at bjp
ಪೌರತ್ವ ಪ್ರತಿಭಟನೆ ಹತ್ತಿಕ್ಕುವ ಹಿಂದಿದೆ ರಾಜಕೀಯ ಹುನ್ನಾರ; ಯತೀಂದ್ರ ಸಿದ್ದರಾಮಯ್ಯ ಆಕ್ರೋಶ


ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ರಾಜ್ಯ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರ ಈ ಕಾಯ್ದೆಯನ್ನ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ. ಕಾಯ್ದೆ ನಾವು ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಪೊಲೀಸರು ಅದನ್ನು ತಡೆದಿದ್ದಾರೆ ಎಂದು ದೂರಿದರು.

ಈ ಹಿಂದೆ ನಾವು ಹಿಂದೆ ಪ್ರತಿಭಟನೆ ಮಾಡಲು ಮುಂದಾದಾಗ 144 ಸೆಕ್ಷನ್ ಜಾರಿ ಮಾಡಿದ್ದರು. ಈಗಲೂ ಸಹ ಅದನ್ನೆ ಮಾಡಿದ್ದಾರೆ. ಇದು ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಪ್ರಯತ್ನ. ಮೈಸೂರಿಗೆ 144 ಸಕ್ಷನ್ ಅವಶ್ಯಕತೆ ಇಲ್ಲ.

‘ಎಚ್‌ಡಿಕೆಯಿಂದ ಮುಸ್ಲಿಮರ ದಾರಿ ತಪ್ಪಿಸುವ ಪ್ರಯತ್ನ’ : ಬಿಎಸ್‌ವೈ ಕಿಡಿ

ಪ್ರತಿಭಟನೆ ಮಾಡುವವರೆಲ್ಲಾ ಹಿಂಸಾಚಾರಿಗಳಲ್ಲ, ರೌಡಿ ಶೀಟರ್ ಗಳಲ್ಲ. ಇದು ನಮ್ಮ ಪ್ರಜೆಗಳಿಗೆ ಮಾಡುತ್ತಿರುವ ಅವಮಾನ. ಇದು ನೂರಕ್ಕೆ ನೂರರಷ್ಟು ರಾಜಕೀಯ ಹುನ್ನಾರ ಎಂದು ಹರಿಹಾಯ್ದರು

ವಿಡಿಯೋ: ಮುಸ್ಲಿಮರಲ್ಲಿ ಭಯ ಬಿತ್ತಲು ಕಾಂಗ್ರೆಸ್‌ನಿಂದ ವದಂತಿ: 'ನಗರ ನಕ್ಸಲ'ರ ವಿರುದ್ಧವೂ ಮೋದಿ ಗುಡುಗು..!

ಕೇಂದ್ರದ ಈ ಕಾಯ್ದೆಯಲ್ಲಿ ಕೇವಲ 3 ದೇಶಗಳಿಗೆ ಮಾತ್ರ ಪೌರತ್ವ ಕಾಯ್ದೆಯಲ್ಲಿ ಜಾರಿ ಮಾಡಿದ್ದಾರೆ. ಬೇರೆಲ್ಲೂ ಮುಸ್ಲೀಂಯೇತರ ನಿರಾಶ್ರಿತರು ಇಲ್ಲವೇ ಎಂದು ಇದೇ ವೇಳೆ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ