ಆ್ಯಪ್ನಗರ

ಟಿಪ್ಪು ಜಯಂತಿಗೆ ಸಿಎಂ ಗೈರು ಶಾಸಕ ತನ್ವೀರ್‌ ಸೇಠ್‌ ಬೇಸರ

ಟಿಪ್ಪು ಜಯಂತಿಗೆ ಸಿಎಂ ಗೈರು ಶಾಸಕ ತನ್ವೀರ್‌ ಸೇಠ್‌ ಬೇಸರ ವಿಕ ಸುದ್ದಿಲೋಕ ಮೈಸೂರು ಮುಖ್ಯಮಂತ್ರಿ ಎಚ್‌ಡಿ...

Vijaya Karnataka 11 Nov 2018, 5:00 am
ಮೈಸೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಮುಸ್ಲಿಂ ಸಮುದಾಯಕ್ಕೆ ನೋವು ತಂದಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web cm kumaraswamy absent for tippu jayanthi celebration is not good tanveer sait
ಟಿಪ್ಪು ಜಯಂತಿಗೆ ಸಿಎಂ ಗೈರು ಶಾಸಕ ತನ್ವೀರ್‌ ಸೇಠ್‌ ಬೇಸರ


ಮೈಸೂರಿನಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಎಚ್‌.ಡಿ. ಕುಮಾರಸ್ವಾಮಿ ಅವರು ವಿಶ್ರಾಂತಿ ಪಡೆಯತ್ತಿದ್ದರೂ ಸಮೀಪದ ತಾಲೂಕಿನಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಿತ್ತು. ಆದರೆ ಕುಮಾರಸ್ವಾಮಿ ಅವರು ಜಯಂತಿಯಿಂದ ದೂರ ಉಳಿದಿರುವುದು ಮುಸ್ಲಿಂ ಸಮಾಜಕ್ಕೆ ನೋವುಂಟು ಮಾಡಿದೆ. ಅಲ್ಲದೇ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರೂ ಸಹ ಜಯಂತಿಯಿಂದ ದೂರ ಉಳಿದು, ಹೊರ ರಾಷ್ಟ್ರದ ಪ್ರವಾಸದಲ್ಲಿರುವುದು ಜನಾಂಗಕ್ಕೆ ಮಾಡಿದ ಅಪಮಾನವಾಗಿದೆ. ಹೊಸ ಸರಕಾರದ ಪ್ರಥಮ ಟಿಪ್ಪು ಜಯಂತಿ ಸಂದರ್ಭದಲ್ಲಿ ಈ ರೀತಿ ಬೆಳವಣಿಗೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನೊಬ್ಬ ರಾಜಕಾರಣಿಯ ಹೊರತಾಗಿಯೂ ನಾನು ನನ್ನ ಜನಾಂಗದ ಭಾವನೆಯನ್ನು ವ್ಯಕ್ತಪಡಿಸುವುದು ನನ್ನ ಕರ್ತವ್ಯವಾಗಿದೆ. ಸರಕಾರ ಅನ್ಯ ಜನಾಂಗದ ಜಯಂತಿಗಳಿಗೆ ತೋರುವ ಉತ್ಸಾಹವನ್ನು ಟಿಪ್ಪು ಜಯಂತಿ ಆಚರಣೆಯಲ್ಲಿ ತೋರುತ್ತಿಲ್ಲ. ಯಾರೋ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತಾರೆ ಎಂಬ ಕಾರಣಕ್ಕೆ ಮೆರವಣಿಗೆ ರದ್ದುಗೊಳಿಸುವುದು, ಕೆಲ ಆಚರಣೆಗಳನ್ನು ರದ್ದುಪಡಿಸುವುದು. ಸಂವಿಧಾನಿಕ ಅವಕಾಶದ ನಡುವೆಯೂ, ಸರಕಾರದಿಂದ ಆಚರಿಸುವ ಕಾರ್ಯಕ್ರಮ ಹೊರತಾಗಿ ಬೇರೆಲ್ಲೂ ಕಾರ್ಯಕ್ರಮ ಮಾಡಬಾರದು ಎಂಬ ಸುತ್ತೋಲೆ ಹೊರಡಿಸುವ ಮೂಲಕ ನಿರ್ಬಂಧ ಹೇರುವುದು ಸರಿಯಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ