ಆ್ಯಪ್ನಗರ

ಮೈವಿವಿ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್‌, ಫಾರ್ಮಸಿ ಕಾಲೇಜು

ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ಕಾಲೇಜು ಆರಂಭಿಸಲು ಮೈಸೂರು ವಿವಿ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ.

Vijaya Karnataka 24 Aug 2019, 5:00 am
ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ: ಸಿಂಡಿಕೇಟ್‌ ಸಭೆ ಒಪ್ಪಿಗೆ
Vijaya Karnataka Web college of engineering and pharmacy on the mysuru vv campus
ಮೈವಿವಿ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್‌, ಫಾರ್ಮಸಿ ಕಾಲೇಜು


ಮೈಸೂರು:
ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ಕಾಲೇಜು ಆರಂಭಿಸಲು ಮೈಸೂರು ವಿವಿ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ.

''ಮೈಸೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲೇ ಸುಮಾರು 10 ಎಕರೆ ಪ್ರದೇಶದಲ್ಲಿ ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ಕಾಲೇಜು ಆರಂಭಿಸಲಾಗುವುದು. ಮಾನಸ ಗಂಗೋತ್ರಿ ಕ್ಯಾಂಪಸ್‌ನ ಸ್ಕೂಲ್‌ ಆಫ್‌ ಆರ್ಕಿಟೆಕ್‌ ಸಮೀಪದ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ. ಇದೊಂದು ಯೂನಿಕ್‌ ಕಾಲೇಜಾಗಿ ನಿರ್ಮಿಸಲಾಗುವುದು. ಪ್ರವೇಶಾತಿಯಲ್ಲಿ ಶೇ.50 ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಉಳಿದ ಶೇ.50 ರಷ್ಟನ್ನು ರಾಷ್ಟ್ರೀಯ ಪರೀಕ್ಷೆ ಮೂಲಕ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನೀಡಲಾಗುವುದು,'' ಎಂದು ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತ್‌ ಕುಮಾರ್‌ ಪತ್ರಿಕೆಗೆ ತಿಳಿಸಿದರು.

''ಇದಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದೆ. ಅವರಿಂದ ವರದಿ ಪಡೆದು ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. 5 ವಿಭಾಗಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಆರಂಭಿಸಲು ಉದ್ದೇಶಿಸಲಾಗಿದೆ. ಮಾಮೂಲಿ ವಿಭಾಗಗಳ ಬದಲಿಗೆ ಪ್ರಸ್ತುತ ಚಾಲ್ತಿಯಲ್ಲಿರುವ, ಬೇಡಿಕೆಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ ಆರಂಭಿಸಲು ಸಭೆ ತೀರ್ಮಾನಿಸಲಾಗಿದೆ,'' ಎಂದರು.

ತಲೆ ಎತ್ತಲಿದೆ ಸಂಶೋಧಕರ ಹಾಸ್ಟೆಲ್‌: ವಿವಿಯಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸಲು ಕೂಡ ಶುಕ್ರವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಅನುಮತಿ ನೀಡಲಾಗಿದೆ. 150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ 75 ಕೊಠಡಿಗಳ ಹಾಸ್ಟೆಲ್‌ ನಿರ್ಮಾಣ ಮಾಡಲಾಗುತ್ತದೆ,'' ಎಂದರು.

''ಮೈಸೂರು ವಿವಿ ಆಡಳಿತ ವ್ಯವಸ್ಥೆಯನ್ನು ಪೇಪರ್‌ ರಹಿತವಾಗಿಸುವ ನಿಟ್ಟಿನಲ್ಲಿ ಇ-ಮೀಟಿಂಗ್‌ ಪದ್ಧತಿ ಜಾರಿಗೆ ತರಲು ಚಿಂತಿಸಲಾಗಿದೆ. ಮುಂದಿನ ಸಭೆಗಳಲ್ಲಿ ಟ್ಯಾಲ್‌, ಲ್ಯಾಪ್‌ ಟಾಪ್‌ ಗಳ ಮೂಲಕವೇ ಸಂಪರ್ಕ ಸಾಧಿಸಿ ಸಭೆಯ ನಡಾವಳಿ ದಾಖಲಿಸಲಾಗುತ್ತದೆ,''ಎಂದು ತಿಳಿಸಿದರು.

ಕೆರಿಯರ್‌ ಹಬ್‌:
''ವಿವಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ಲೆಸ್ಮೆಂಟ್‌ ತರಬೇತಿ ಕೇಂದ್ರ ಆರಂಭಿಸಲು ವಿಶ್ವವಿದ್ಯಾನಿಲಯ ಮುಂದಾಗಿದೆ. ಈ ಶೈಕ್ಷ ಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಕೇಂದ್ರ ಸರಕಾರದ 'ರೂಸ' ಅನುದಾನದಡಿ ಈ ಯೋಜನೆ ಜಾರಿಗೆ ಬರಲಿದೆ. ನಂತರ ವಿವಿಧ ಕೈಗಾರಿಕೋದ್ಯಮಿಗಳು, ಕಂಪನಿಗಳಿಗೆ ಆಹ್ವಾನ ನೀಡಿ ಕ್ಯಾಂಪಸ್‌ ಆಯ್ಕೆಗೆ ಅವಕಾಶ ನೀಡಲಾಗುತ್ತದೆ,''ಎಂದು ಕುಲಪತಿ ಪೊ›.ಹೇಮಂತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

--------------

ಕ್ಲಾಸ್‌ ರೂಂ ಕಾಂಪ್ಲೆಕ್ಸ್‌ !


ಮಂಡ್ಯ-ಹಾಸನ ಪಿಜಿ ಸೆಂಟರ್‌ನಲ್ಲಿ ಕ್ಲಾಸ್‌ ರೂಂ ಕಾಂಪ್ಲೆಕ್ಸ್‌ ತೆರೆಯಲಾಗುವುದು. ಈ ಎರಡು ಸೆಂಟರ್‌ನಲ್ಲಿ ಸಾಕಷ್ಟು ಕೋರ್ಸ್‌ಗಳಿವೆ. ಹಾಗಾಗಿ ಹೆಚ್ಚುವರಿ ಕ್ಲಾಸ್‌ ರೂಂ ನಿರ್ಮಾಣ ಮಾಡುವಂತೆ ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫ್ಲೋರ್‌ನಲ್ಲಿ ಹೆಚ್ಚುವರಿಯಾಗಿ ಕ್ಲಾಸ್‌ ರೂಂ ನೀಡಲಾಗುವುದು. ಒಂದೊಂದು ಕ್ಯಾಂಪಸ್‌ಗೆ ಹೆಚ್ಚುವರಿಯಾಗಿ ಎಂಟು ಕ್ಲಾಸ್‌ ರೂಂ ತಲೆ ಎತ್ತಲಿದೆ.
- ಪೊ›.ಜಿ. ಹೇಮಂತ್‌ ಕುಮಾರ್‌, ಮೈವಿವಿ ಕುಲಪತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ