ಆ್ಯಪ್ನಗರ

ಮೇಲುಕೋಟೆಯಲ್ಲಿ ರಾಷ್ಟ್ರೀಯ ಭಾವೈಕ್ಯ ಶಿಬಿರ ಆರಂಭ

ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ ವಿಚಾರ ಉಡುಗೆ ತೊಡುಗೆ ಹೊಂದಿದ ಭಾರತದ ಯುವ ಜನತೆಯಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸರಕಾರ 'ಏಕ ಭಾರತ ಶ್ರೇಷ್ಠಭಾರತ' ಎಂಬ ಭಾವೈಕ್ಯ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತಿದೆ ಎಂದು ಕೇಂದ್ರ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಉಪಾಧ್ಯಕ್ಷ ವಿಷ್ಣುವರ್ಧನ್‌ ರೆಡ್ಡಿ ತಿಳಿಸಿದರು.

Vijaya Karnataka 19 Feb 2020, 5:00 am
25ಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳಿಂದ ಜಾನಪದ ಸಾಂಸ್ಕೃತಿಕ ಕಲರವ
Vijaya Karnataka Web 18MLK1_17
ಮೇಲುಕೋಟೆಯಲ್ಲಿ ನೆಹರೂ ಯುವಕೇಂದ್ರ ಹಮ್ಮಿಕೊಂಡಿರುವ 5 ದಿನಗಳ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯ ಶಿಬಿರ ಮತ್ತು ಜಾನಪದ ಸಾಂಸ್ಕೃತಿಕ ಹಬ್ಬವನ್ನು ಕೇಂದ್ರ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಉಪಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ಉದ್ಘಾಟಿಸಿದರು. ಮಂಡ್ಯ ಡಿಸಿ ಡಾ.ಎಂ.ವಿ ವೆಂಕಟೇಶ್ ಇದ್ದಾರೆ.


ಮೇಲುಕೋಟೆ (ಮಂಡ್ಯ):
ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ ವಿಚಾರ ಉಡುಗೆ ತೊಡುಗೆ ಹೊಂದಿದ ಭಾರತದ ಯುವ ಜನತೆಯಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸರಕಾರ 'ಏಕಭಾರತ ಶ್ರೇಷ್ಠಭಾರತ' ಎಂಬ ಭಾವೈಕ್ಯ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತಿದೆ ಎಂದು ಕೇಂದ್ರ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಉಪಾಧ್ಯಕ್ಷ ವಿಷ್ಣುವರ್ಧನ್‌ ರೆಡ್ಡಿ ತಿಳಿಸಿದರು.

ಅವರು ಮೇಲುಕೋಟೆಯಲ್ಲಿ ನೆಹರೂ ಯುವ ಕೇಂದ್ರ ಹಮ್ಮಿಕೊಂಡಿರುವ 5 ದಿನಗಳ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯ ಶಿಬಿರ ಮತ್ತು ಜಾನಪದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.

''ಗ್ರಾಮೀಣ ಹಾಗೂ ಬುಡಕಟ್ಟು ಜನಾಂಗವೂ ಸೇರಿದಂತೆ ಭಾರತದ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯ ಜನಾಂಗದವರೂ ಒಂದೆಡೆ ಸೇರಿ ತಮ್ಮ ಕಲೆ ಅನಾವರಣ ಮಾಡುವ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಪ್ರಮುಖಪಾತ್ರ ವಹಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ. ದೇಶಾದ್ಯಂತ 268 ಸ್ಥಳಗಳಲ್ಲಿ ಜಿಲ್ಲಾಮಟ್ಟದ ಭಾವೈಕ್ಯ ಶಿಬಿರ ನಡೆಸಲಾಗಿದೆ. ಭಾರತದ ಭವ್ಯ ಇತಿಹಾಸವಿರುವ ಮೇಲುಕೋಟೆಯಂತಹ 28 ಕೇಂದ್ರಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರತಿ ಶಿಬಿರದಲ್ಲೂ25ಕ್ಕೂ ಹೆಚ್ಚು ರಾಜ್ಯಗಳ ಯುವಪ್ರತಿನಿಧಿಗಳು ಕಲಾ ನೈಪುಣ್ಯದೊಂದಿಗೆ ಭಾಗವಹಿಸುತ್ತಿದ್ದಾರೆ,''ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಮಾತನಾಡಿ, ''ನಾವು ವಿಭಿನ್ನ ಭಾಷೆ, ಕಲೆ, ಆಚಾರ ವಿಚಾರಗಳನ್ನು ಹೊಂದಿದ್ದರೂ ಭಾವೈಕ್ಯದಿಂದಿರಬೇಕು. ಮೊದಲು ನಾನೊಬ್ಬ ಭಾರತೀಯ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಶಿಬಿರದಲ್ಲಿ ಮೇಲುಕೋಟೆ ಹಾಗೂ ಮಂಡ್ಯ ಜಿಲ್ಲೆಯ ಸಂಸ್ಕೃತಿ ಪರಿಚಯಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ,'' ಎಂದರು.

ಪು.ತಿ.ನ ಕಲಾಮಂದಿರದಲ್ಲಿನಡೆದ ಸಮಾರಂಭದಲ್ಲಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಯಾಲಕ್ಕಿ ಗೌಡ, ಎನ್‌.ವೈ.ಕೆ ರಾಜ್ಯ ನಿರ್ದೇಶಕ ಅತುಲ್‌ ಜೆ. ನಿಕಮ್‌, ಮಂಡ್ಯ ಜಿಲ್ಲಾಸಮನ್ವಯಾಧಿಕಾರಿ ಅನಂತಪ್ಪ, ಮೈಸೂರು ಜನಸಂಪರ್ಕ ಕೇಂದ್ರದ ಉಪನಿರ್ದೇಶಕಿ ಡಾ.ಪೂರ್ಣಿಮಾ, ಹಿರಿಯ ಐಎಎಸ್‌ ಅಧಿಕಾರಿ ನಾಗೇಂದ್ರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಲಕ್ಷಿತ್ರ್ಮೕತಾತಾಚಾರ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ