ಆ್ಯಪ್ನಗರ

ಮೈಸೂರು: ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಣಕು ಹರಾಜು ನಡೆಸಿ ಕಾಂಗ್ರೆಸ್ ಪ್ರತಿಭಟನೆ

ಮೈಸೂರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರಕಾರಿ ಹುದ್ದೆ ನೇಮಕದಲ್ಲಿ ಅಕ್ರಮ ನಡೆಸಿರುವುದನ್ನು ಖಂಡಿಸಿದರು. ಸರಕಾರಿ ಹುದ್ದೆ ಹರಾಜು ಅಣಕು ಪ್ರದರ್ಶನ ಮಾಡಿದರು

Lipi 10 May 2022, 7:54 pm
ಮೈಸೂರು: ಸಾಲು ಸಾಲು ಹಗರಣಗಳಿಂದ ಬಿಜೆಪಿ ಸರಕಾರ ಕಂಗೆಟ್ಟಿದೆ. ಒಂದೆಲ್ಲಾ ಒಂದು ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿ ಸಚಿವರು ಹಾಗೂ ಬಿಜೆಪಿ ನಾಯಕರನ್ನ ಮುಜುಗರಕ್ಕೀಡು ಮಾಡ್ತಿದೆ.
Vijaya Karnataka Web congress protest against bjp govt at mysore over corruption and psi exam scam
ಮೈಸೂರು: ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಣಕು ಹರಾಜು ನಡೆಸಿ ಕಾಂಗ್ರೆಸ್ ಪ್ರತಿಭಟನೆ

ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಾಂಗ್ರೆಸ್ ಪ್ರತಿನಿತ್ಯ ಒಂದೆಲ್ಲಾ ಒಂದು ವಿಚಾರಕ್ಕೆ ಪ್ರತಿಭಟಿಸಿ ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಳ್ತಿದ್ದಾರೆ.

ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿರುವುದನ್ನು ಖಂಡಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿತು.

ಮೈಸೂರಿನಲ್ಲಿ 3 ದಿನ 'ಟೆಕ್‌ ಭಾರತ'..! ಮೇ 19 ರಿಂದ 3 ದಿನ ನಡೆಯಲಿದೆ ಕಾರ್ಯಕ್ರಮ

ಮೈಸೂರು ನಗರ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರಕಾರಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿರುವುದನ್ನು ಖಂಡಿಸಿದರು. ಸರಕಾರಿ ಹುದ್ದೆಗಳ ಹರಾಜು ಅಣಕು ಪ್ರದರ್ಶನವನ್ನು ನಡೆಸಿದರು. ಹರಾಜು ಪ್ರಕ್ರಿಯೆ ನಡೆಸಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.


ಸರಕಾರ ಹದಿಮೂರು ಇಲಾಖೆಗಳ ಹುದ್ದೆಗಳ ಹರಾಜು ಪ್ರಕ್ರಿಯೆನ್ನು ನಡೆಸಿದರು. ಹದಿಮೂರು ಇಲಾಖೆಗಳ ಹುದ್ದೆಗಳನ್ನು ಸಚಿವರ ಮುಖವಾಡ ಧರಿಸಿ ಹರಾಜು ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಕೋಟಿ ಕೋಟಿ ಹಣಕ್ಕೆ ಸರ್ಕಾರದ ಹುದ್ದೆಗಳು ಬಿಕರಿಯಾಗಿವೆ ಎಂದು ಆರೋಪಿಸಿ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ ನಡೆದಿದ್ದು ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಫೈನಾನ್ಸ್ ಇಲಾಖೆಯ ಅನುಮೋದನೆ ಮೇರೆಗೆ ಸಂಬಂಧ ಪಟ್ಟ 13 ಇಲಾಖೆಗಳ ಹುದ್ದೆಗಳ ನೇಮಕಾತಿ ಹರಾಜು ಇಲಾಖೆ ಪ್ರಕ್ರಿಯೆ ಆರಂಭವಾಗಿದೆ. ಸಂಬಂಧಪಟ್ಟ ನೋಡಲ್ ಆಫೀಸರ್ ಹರಾಜು ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಕೇಳಿಕೊಳ್ಳುತ್ತಿದ್ದಂತೆಯೇ ಆರ್. ಮೂರ್ತಿಯವರು ಗಂಟೆಯ ಸದ್ದು ಮಾಡಿದರು. ಬಳಿಕ ಹರಾಜು ಪ್ರಕ್ರಿಯೆ ಆರಂಭವಾಯಿತು.

ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಇರುವ ಜಾಗ್ವಾರ್‌, ಚಿರತೆಗೆ ಮೈಸೂರು ಝೂನಲ್ಲಿ ಆಶ್ರಯ..!

ಇದೇ ವೇಳೆ ಮಹಿಳಾ ಕಾರ್ಯಕರ್ತರು ಗ್ಯಾಸ್ ಮತ್ತು ದಿನಬಳಕೆಯ ವಸ್ತುಗಳ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ