ಆ್ಯಪ್ನಗರ

ಮನೆ ದರೋಡೆಗೆ ಸಂಚು: ಐವರ ಸೆರೆ

ದಸರಾ ಜಂಬೂ ಸವಾರಿ ದಿನ ಮನೆಯೊಂದರ ದರೋಡೆಗೆ ಹೊಂಚು ಹಾಕಿದ್ದ ಐವರು ಕಳ್ಳರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 14 Oct 2019, 5:00 am
ಮೈಸೂರು: ದಸರಾ ಜಂಬೂ ಸವಾರಿ ದಿನ ಮನೆಯೊಂದರ ದರೋಡೆಗೆ ಹೊಂಚು ಹಾಕಿದ್ದ ಐವರು ಕಳ್ಳರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web conspiracy to commit house robbery five arrested
ಮನೆ ದರೋಡೆಗೆ ಸಂಚು: ಐವರ ಸೆರೆ


ಶಾರೂಕ್‌ ಅಮ್ಜದ್‌, ಸಿದ್ದಿಕ್‌ ಪಾಷ ಅಬ್ಬುಲಿ, ಟಿ.ಕೆ.ಇಮ್ರಾನ್‌, ಎಜಾಜ್‌ ಕುರೈಸಿ, ಫೈರೋಜ್‌ ಪಾಷ ಬಂಧಿತ ಆರೋಪಿಗಳು. ವಂದೇ ಮಾತರಂ ನಗರ ವಿನಾಯಕ ಸುಬ್ರಮಣ್ಯೇಶ್ವರ ದೇವಸ್ಥಾನದ ಮುಂದೆ ಐವರು ಕಾರು ನಿಲ್ಲಿಸಿಕೊಂಡು ಕಳವಿಗೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯ ಪ್ರವೃತರಾದ ಪೊಲೀಸರು ಮಧ್ಯರಾತ್ರಿ 2.15ಕ್ಕೆ ಕಾರನ್ನು ಸುತ್ತುವರಿದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ನಂತರ ಠಾಣೆಯಲ್ಲಿ ಈ ಬಗ್ಗೆ ಕೂಲಂಕುಶವಾಗಿ ವಿಚಾರಣೆ ಮಾಡಿದಾಗ, ತಮ್ಮನ್ನು ರಾಮನಗರ ನಿವಾಸಿ ಇರ್ಫಾನ್‌ ಎಂಬುವವನು ಮೈಸೂರಿನಲ್ಲಿ ಜಂಬೂಸವಾರಿ ವೇಳೆ ಸಾರ್ವ ಜನಿಕರ ನೂಕು ನುಗ್ಗಲಿನಲ್ಲಿಮೊಬೈಲ್‌, ಪಿಕ್‌ ಪಾಕೆಟ್‌, ಕಳ್ಳತನ ಮಾಡಲು ಜಂಬೂ ಸವಾರಿ ದಿನ ಕರೆದುಕೊಂಡು ಬಂದಿದ್ದ. ನಾವೆಲ್ಲರೂ ಸಿಟಿ ಬಸ್‌ ನಿಲ್ದಾಣದಲ್ಲಿ7 ಮೊಬೈಲ್‌ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮೊಬೈಲ್‌ಗಳನ್ನು ಇಟ್ಟು, ವಾಪಸ್‌ ಬಂದು ಸೇರುತ್ತೇನೆ. ನಾವೆಲ್ಲರೂ ಮೈಸೂರಿನ ಯಾವುದಾದರೂ ಮನೆಯಲ್ಲಿದರೋಡೆ ಮಾಡಿಕೊಂಡು ಹೋಗೋಣವೆಂದು ತಿಳಿಸಿ ಇರ್ಫಾನ್‌ ಅದೇ ದಿನ ಬೆಂಗಳೂರಿಗೆ ಹೋಗಿದ್ದಾನೆ. ನಾವು ಅವನ ಬರುವಿಕೆಗಾಗಿ ಕಾಯುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನ ಡ್ಯಾಶ್‌ ಬೋರ್ಡ್‌ ನಲ್ಲಿ2 ಪ್ಯಾಕೆಟ್‌ ಕಾರದ ಪುಡಿ, 3 ಮೊಬೈಲ್‌, 3 ವಿಕೆಟ್‌, 2 ಲಾಂಗ್‌ಗಳು ದೊರೆತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಡಿ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ