ಆ್ಯಪ್ನಗರ

ಮೈಸೂರು: ಜಿಲ್ಲೆಯ 3 ಕೇಂದ್ರಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್‌‌..! ತಲಾ 25 ಮಂದಿಗೆ ಅಣಕು ವ್ಯಾಕ್ಸಿನ್‌

ಇಡೀ ದೇಶಾದ್ಯಂತ ಶನಿವಾರ ಕೊರೊನಾ ವೈರಸ್‌ ಲಸಿಕೆ ವಿತರಣೆಯ ಡ್ರೈ ರನ್‌ ನಡೆಯುತ್ತಿದ್ದು, ಅದರಂತೆ ಮೈಸೂರಿನ ಮೂರು ಕೇಂದ್ರಗಳನ್ನು ಲಸಿಕಾ ವಿತರಣಾ ತಾಲೀಮು ನಡೆಯುತ್ತಿದೆ. ಮೂರು ಕೇಂದ್ರಗಳಲ್ಲಿ ತಲಾ 25 ಮಂದಿಗೆ ಅಣಕು ವ್ಯಾಕ್ಸಿನ್‌ ನೀಡಲಾಗುತ್ತಿದೆ.

Vijaya Karnataka Web 2 Jan 2021, 11:03 am
ಮೈಸೂರು: ಜಿಲ್ಲೆಯಲ್ಲಿ ಶನಿವಾರ ಕೊರೊನಾ ನಿಯಂತ್ರಣ ಲಸಿಕೆ ಸಂಗ್ರಹ ಹಾಗೂ ಹಂಚಿಕೆ ವ್ಯವಸ್ಥೆಯ 'ಡ್ರೈ ರನ್‌' (ತಾಲೀಮು) ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆವರೆಗೆ ಡ್ರೈ ರನ್‌ ನಡೆಯಲಿದೆ. ಜಿಲ್ಲೆಯ ಮೂರು ಕೇಂದ್ರಗಳಲ್ಲಿ ತಲಾ 25 ಮಂದಿಗೆ ಅಣಕು ಲಸಿಕೆ ನೀಡಲಾಗುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಅಣಕು ಲಸಿಕೆ ನೀಡುವ ತಾಲೀಮು ನಡೆಯುತ್ತಿದೆ.
Vijaya Karnataka Web Vaccine Dry Run
ಸಾಂದರ್ಭಿಕ ಚಿತ್ರ


ಮೈಸೂರು ನಗರದಲ್ಲಿರುವ ಜಯನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಣಸೂರು ಬಿಳಿಕೆರೆಯ ಆರೋಗ್ಯ ಕೇಂದ್ರ ಹಾಗೂ ಕೆ.ಆರ್‌.ನಗರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಯ ಡ್ರೈ ರನ್ ನಡೆಯುತ್ತಿದೆ. ಮೈಸೂರು ಹೊರತುಪಡಿಸಿದರೆ ರಾಜ್ಯದಲ್ಲಿ ಬೆಂಗಳೂರು ನಗರ, ಕಲಬುರಗಿ, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಲಸಿಕೆಯ ಡ್ರೈ ರನ್‌ಗೆ ಆಯ್ಕೆ ಮಾಡಲಾಗಿದೆ.

ಒಂದು ತಿಂಗಳಿನಿಂದ ವಿವಿಧ ಹಂತದ ವೈದ್ಯಾಧಿಕಾರಿಗಳು, ಸಿಬ್ಬಂದಿಗೆ ಕೋವಿಡ್‌-19 ಲಸಿಕೆ ನೀಡುವ ಕುರಿತು ತರಬೇತಿ ನೀಡಲಾಗಿದೆ. ಕೋವಿಡ್‌-19 ಮಾರ್ಗಸೂಚಿಯನ್ವಯ ಪ್ರಾಯೋಗಿಕವಾಗಿ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳ ಲಾಗಿದೆ. ಮೊದಲ ಹಂತದಲ್ಲಿ 25 ಮಂದಿ ಆರೋಗ್ಯ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕತೆರ್ಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡುವ ತಾಲೀಮು ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಅಣುಕು ಕೊರೊನಾ ಲಸಿಕೆ ವಿತರಣೆ ಆರಂಭ, 25 ಮಂದಿಗೆ ಲಸಿಕೆ!

ಪ್ರತಿ ಲಸಿಕಾ ಕೇಂದ್ರದಲ್ಲಿಯೂ ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳಿರುತ್ತವೆ. ಲಸಿಕೆ ಪಡೆದ ನಂತರ 30 ನಿಮಿಷ ನಿಗಾ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ನಿಜವಾದ ಲಸಿಕೆ ನೀಡಲಾಗುವುದಿಲ್ಲ. ಕೇವಲ ತಾಲೀಮು ಮಾತ್ರ. ಈ ಹಿನ್ನೆಲೆಯಲ್ಲಿ ಜನರು ವದಂತಿಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

ವರ್ಷದ ಮೊದಲ ಸಿಹಿ ಸುದ್ದಿ: ಆಕ್ಸ್‌ಫರ್ಡ್ ಕೊರೊನಾ ಲಸಿಕೆಗೆ ಕೇಂದ್ರ ತಜ್ಞ ಸಮಿತಿ ಅನುಮತಿ!

ಲಸಿಕೆ ತಯಾರಿಕೆ ಬೆಳವಣಿಗೆ ವಿವಿಧ ಹಂತದಲ್ಲಿದೆ. ಮುಂಚೂಣಿಯಲ್ಲಿ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ, ಭಾರತ್‌ ಬಯೋಟೆಕ್‌, ಫೈಜರ್‌ ಮುಂತಾದ ಸಂಸ್ಥೆಗಳಿವೆ. ಶೀಘ್ರ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಲಸಿಕೆ ಪೂರೈಕೆಗೆ ಅನುಗುಣವಾಗಿ ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಸೇವಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ ಅವರ ವಿವರವನ್ನು ಸಂಗ್ರಹಿಸಿ ಕೋವಿಡ್‌ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲರಿಗೂ ಸಿಗಲ್ಲ ಉಚಿತ ಕೊರೊನಾ ಲಸಿಕೆ, ಕಾರಣವೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ