ಆ್ಯಪ್ನಗರ

ಮೋದಿ ಕಾರಿಗೆ ಅಡ್ಡ ಬಂದಿದ್ದ ಯುವಕ ವಶಕ್ಕೆ

ಕಳೆದ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಕಾರಿಗೆ ಅಡ್ಡವಾಗಿ ಬಂದಿದ್ದ ಯುವಕನನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.

Vijaya Karnataka 10 Apr 2019, 5:00 am
ಮೈಸೂರು: ಕಳೆದ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಕಾರಿಗೆ ಅಡ್ಡವಾಗಿ ಬಂದಿದ್ದ ಯುವಕನನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.
Vijaya Karnataka Web crossed the modi car youth has been arrested
ಮೋದಿ ಕಾರಿಗೆ ಅಡ್ಡ ಬಂದಿದ್ದ ಯುವಕ ವಶಕ್ಕೆ


ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ 2016ರ ಜನವರಿಯಲ್ಲಿ ನಡೆದ ಸುತ್ತೂರು ಕ್ಷೇತ್ರದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮೋದಿ ಅವರು ವಾಪಸ್‌ ತೆರಳುವಾಗ ಮೈಸೂರು ವಿವಿ ಕ್ರಾಫರ್ಡ್‌ ಹಾಲ್‌ ಎದುರು ಮೈಸೂರು ತಾಲೂಕಿನ ವರಕೋಡು ಗ್ರಾಮದ ವಿನಯ್‌ ಎಂಬಾತ ರಕ್ಷ ಣಾ ವ್ಯವಸ್ಥೆ ಭೇದಿಸಿ ಕಾರಿಗೆ ಅಡ್ಡವಾಗಿ ಬಂದಿದ್ದ. ಇದರಿಂದ ಸುಮಾರು 20 ಸೆಕೆಂಡ್‌ಗಳ ಕಾಲ ಕಾಲ ಪ್ರಧಾನಿಯವರ ಸಂಚಾರದಲ್ಲಿ ವಿಳಂಬವಾಗಿತ್ತು. ಸದ್ಯ, ಈತನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮಂಗಳವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಅವರು ಪಾಲ್ಗೊಂಡು ತೆರಳಿದ ಬಳಿಕ ಯುವಕ ವಿನಯ್‌ನನ್ನು ಬಿಡಲಾಯಿತು ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಹಸಿರು ಯೋಜನೆ: 2 ವರ್ಷಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಾಪಸ್‌ ತೆರಳುತ್ತಿದ್ದಾಗ ವಿನಯ್‌, ಪ್ರಧಾನಿ ಅವರ ಕಾರಿಗೆ ಅಡ್ಡ ಬಂದಿದ್ದ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ವಿಚಾರಣೆ ವೇಳೆ ವಿನಯ್‌ ದೇಶದಲ್ಲಿ ಹಸಿರೀಕರಣ ಸಂಬಂಧ ರೂಪಿಸಿದ್ದ ಯೋಜನೆಯ ಮಾಹಿತಿ ನೀಡಲು ಕಾರಿಗೆ ಅಡ್ಡ ಬಂದಿರುವುದಾಗಿ ತಿಳಿಸಿದ್ದ. ಈ ವಿಷಯ ವಿಜಯ ಕರ್ನಾಟಕ ಸೇರಿದಂತೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಕೊನೆಗೆ ಪೊಲೀಸರೇ ವಿನಯ್‌ಗೆ ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಿದ್ದರು. ಈಗ ಮತ್ತೆ ವಿನಯ್‌ ಪ್ರಧಾನಿ ಅವರ ಕಾರಿಗೆ ಅಡ್ಡ ಬಂದು ಗೊಂದಲವಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ