ಆ್ಯಪ್ನಗರ

ಬಹುರೂಪಿಯಲ್ಲಿ ಸಾಂಸ್ಕೃತಿಕ ಲೋಕ ಅನಾವರಣ

ಬಹುರೂಪಿ ನಾಟಕೋತ್ಸವದಲ್ಲಿಶನಿವಾರ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ತಮಿಳುನಾಡಿನ ತಪ್ಪಟಕಲ್ಲುತಮಟೆ ನೃತ್ಯ ಮತ್ತು ಸಾಹಸ, ಆಂಧ್ರ ಪ್ರದೇಶದ ಕೊಮ್ಮು ಕೊಯಾ, ಬ್ಯಾರಿ ಮತ್ತು ಅರೇಬಿಯನ್‌ ನೃತ್ಯ ನೋಡುಗರಿಗೆ ರಸದೌತಣ ನೀಡಿತು.

Vijaya Karnataka 16 Feb 2020, 5:00 am
ತಮಿಳುನಾಡಿನ ತಪ್ಪಟಕಲ್ಲು ತಮಟೆ, ಆಂಧ್ರ ಪ್ರದೇಶದ ಕೊಮ್ಮು ಕೊಯಾ ನೃತ್ಯದ ವೈಭವಕ್ಕೆ ಪ್ರೇಕ್ಷಕರು ಫಿದಾ
Vijaya Karnataka Web MYSPHOTOS-39085229
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ 20ನೇ ಬಹುರೂಪಿ ನಾಟಕೋತ್ಸವದಲ್ಲಿ ಶುಕ್ರವಾರ ಕಿಂದರಿಜೋಗಿ ಜನಪದ ರಂಗದಲ್ಲಿ ತಮಿಳು ನಾಡಿನ ತಪಟ ಕಲ್ಲು ನೃತ್ಯ ಪ್ರದರ್ಶನವಾಯಿತು.


ಮೈಸೂರು:
ಬಹುರೂಪಿ ನಾಟಕೋತ್ಸವದಲ್ಲಿಶನಿವಾರ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು.

ತಮಿಳುನಾಡಿನ ತಪ್ಪಟಕಲ್ಲುತಮಟೆ ನೃತ್ಯ ಮತ್ತು ಸಾಹಸ, ಆಂಧ್ರ ಪ್ರದೇಶದ ಕೊಮ್ಮು ಕೊಯಾ, ಬ್ಯಾರಿ ಮತ್ತು ಅರೇಬಿಯನ್‌ ನೃತ್ಯ ನೋಡುಗರಿಗೆ ರಸದೌತಣ ನೀಡಿತು.

ಬಹುರೂಪಿ ನಾಟಕೋತ್ಸವದ ಪ್ರಯುಕ್ತ ಕಿಂದರಿ ಜೋಗಿ ಜನಪದ ರಂಗದಲ್ಲಿನಡೆಯುತ್ತಿರುವ ಬಹುರೂಪಿ ಜನಪದೋತ್ಸವದಲ್ಲಿಶನಿವಾರ ಜನಪದ, ಆದಿವಾಸಿ ಮತ್ತು ಅರೇಬಿಯನ್‌ ಶೈಲಿಯ ನೃತ್ಯಕ್ಕೆ ಪ್ರೇಕ್ಷಕ ವರ್ಗ ಫಿದಾ ಆಯಿತು. ನೃತ್ಯ ಭಾಷೆ ಅರ್ಥವಾಗದಿದ್ದರೂ ಜನರು ಎದ್ದು ಕುಣಿಯುವಂತೆ ಮಾಡಿತು. ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ತಮಿಳುನಾಡಿನ ಕಲಾವಿದರಿಂದ ತಪ್ಪಟಕಲ್ಲುಎಂಬ ತಮಟೆ ನೃತ್ಯ ಪ್ರದರ್ಶನದ ಮೂಲಕ 2ನೇ ದಿನದ ಜನಪದೋತ್ಸವ ಆರಂಭವಾಯಿತು. ಪರೈ, ತವಿಲ್‌ ಮತ್ತು ನಾದಸ್ವರ ವಾದ್ಯಗಳ ಹಿಡಿದ ಎಂಟಕ್ಕೂ ಹೆಚ್ಚು ಕಲಾವಿದರೂ ತಮಟೆ ಬಡಿಯುತ್ತಾ ನೃತ್ಯ ಆರಂಭಿಸಿದರು. 20 ನಿಮಿಷಕ್ಕೂ ಹೆಚ್ಚು ಕಾಲ ಜನರನ್ನು ತಮ್ಮ ನೃತ್ಯದ ಮೂಲಕ ರಂಜಿಸಿದರು. ನೃತ್ಯದ ಮೂಲಕ ಸಾಹಸ ಪ್ರದರ್ಶಿಸಿ ನೋಡುಗರನ್ನು ರೋಮಾಂಚನಗೊಳಿಸಿದರು. ಮಹಿಳಾ ಕಲಾವಿದರ ಸಾಹಸ ನೃತ್ಯಕ್ಕೆ ಪ್ರೇಕ್ಷಕರು ಸಿಳ್ಳೆ, ಕರತಾಡನದ ಸುರಿಮಳೆ ಆಯಿತು.

ಕೊಮ್ಮು ಕೊಯಾ: ಆಂಧ್ರಪ್ರದೇಶದ ಆದಿವಾಸಿಗಳ ಕೊಮ್ಮು ಕೊಯಾ ನೃತ್ಯ ಪ್ರದರ್ಶನ ಝೇಂಕಾರ ಜನಪದೋತ್ಸವ ಸಂಭ್ರಮವನ್ನು ಇಮ್ಮುಡಿಗೊಳಿಸಿತು. ಉದ್ದನೆಯ ಕೊಂಬಿನ ಮಾದರಿ ತೊಟ್ಟ ಜನ ವಾದ್ಯದ ನಾದಕ್ಕೆ ಹೆಜ್ಜೆ ಹಾಕಿದ ಕಲಾಸಕ್ತರು ಕರತಾಡನ ಮೊಳಗಿಸಿದರು. ಕೊಮ್ಮು ಎಂದರೆ ಕಡವೆ ಅಥವಾ ಪ್ರಾಣಿಯೊಂದರ ಕೊಂಬು ಎಂದರ್ಥ. ಕೊಯಾ ಎಂಬುದು ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿಆದಿವಾಸಿಗಳ ಹೆಸರು. ಕೊಮ್ಮು ಕೊಯಾ ಆದಿವಾಸಿ ಸಮುದಾಯಕ್ಕೆ ತೆಲುಗು ಭಾಷೆಯೂ ಬರುವುದಿಲ್ಲ. ತಮ್ಮದೆ ಆದ ಕೊಯಾ ಭಾಷೆಯಲ್ಲಿಸಂವಹನ ನಡೆಸುತ್ತಾರೆ. ಯಾವುದೇ ಸಾಹಿತ್ಯವಿಲ್ಲದೆ ಡೋಲು ಹೋಲುವ ದೊಡ್ಡ ವಾದ್ಯ ಬಳಸಿ ತಾಳಕ್ಕೆ ತಕ್ಕಂತೆ ಕುಣಿಸಿ ಚೀರುತ್ತಾ ನರ್ತಿಸಿದ ನರ್ತನ ಮೈಸೂರಿಗೆ ಹೊಸ ಅನುಭವ ನೀಡಿತು.

ಅರೇಬಿಯನ್‌ ನೃತ್ಯಕ್ಕೆ ಮನಸೋತ ಯುವಕರು: ಬಹುರೂಪಿಯ ಜನಪದೋತ್ಸವದಲ್ಲಿಕಣ್ಣೂರಿನ ರಹೀಸ್‌ ಇತ್ತಿ ಕಲಾವಿದರು ಅರೇಬಿಯನ್‌ ನೃತ್ಯ ಪ್ರದರ್ಶಿಸಿದರು. ಮೊದಲಿಗೆ ಬ್ಯಾರಿ ಹಾಡಿಗೆ ಹೆಜ್ಜೆ ಹಾಕಿದ ಬ್ಯಾರಿ ಅಕಾಡೆಮಿ ಕಲಾವಿದರೂ ಎಲ್ಲರೂ ಒಂದಾಗೋಣ ಬನ್ನಿ ಹಾಡುತ್ತಾ ಪ್ರೇಕ್ಷಕರನ್ನು ರಂಜಿಸಿದರು. ನಂತರ ಇದೇ ತಂಡ ಅರೇಬಿಯನ್‌ ಹಾಡಿಗೆ ನೃತ್ಯವನ್ನೂ ಪ್ರದರ್ಶಿಸಿ ಗಮನಸೆಳೆದರು.

ಈ ವೇಳೆ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಈ ಬಾರಿ ಎಲ್ಲಾಅಕಾಡೆಮಿಗಳ ನತ್ಯ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಣ್ಮರೆಯಾಗುತ್ತಿರುವ ಎಲ್ಲಾಸಮುದಾಯಗಳ ನೃತ್ಯ ಇಲ್ಲಿಅನಾವರಣವಾಗಲಿದೆ. ಬಹುರೂಪಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ಯಾರಿ ಅಕಾಡೆಮಿ ನೃತ್ಯ ಪ್ರದರ್ಶನ ಏರ್ಪಡಿಸಿದ್ದೇವೆ. ಇದೇ ರೀತಿ ನಾಳೆ ಕೊಡವ ಸೇರಿದಂತೆ ಇನ್ನಿತರ ಅಕಾಡೆಮಿಗಳು ನೃತ್ಯ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ