ಆ್ಯಪ್ನಗರ

ಸಿ.ವಿ.ರಾಮನ್ ಕೊಡುಗೆ ಸ್ಮರಣೆ

ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ 47ನೇ ಪುಣ್ಯಸ್ಮರಣೆಯ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಚಾಮುಂಡಿ ಪುರಂನಲ್ಲಿರುವ ಬಾಲಬೋಧಿನಿ ಸರಕಾರಿ ಶಾಲೆಯಲ್ಲಿ ವಿಜ್ಞಾನಕ್ಕೆ ಸಿ.ವಿ.ರಾಮನ್ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ವಿಕ ಸುದ್ದಿಲೋಕ 24 Nov 2016, 5:15 am
ಮೈಸೂರು: ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ 47ನೇ ಪುಣ್ಯಸ್ಮರಣೆಯ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಚಾಮುಂಡಿ ಪುರಂನಲ್ಲಿರುವ ಬಾಲಬೋಧಿನಿ ಸರಕಾರಿ ಶಾಲೆಯಲ್ಲಿ ವಿಜ್ಞಾನಕ್ಕೆ ಸಿ.ವಿ.ರಾಮನ್ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
Vijaya Karnataka Web cv gift memory
ಸಿ.ವಿ.ರಾಮನ್ ಕೊಡುಗೆ ಸ್ಮರಣೆ


ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘‘ಸರ್ ಸಿ.ವಿ.ರಾಮನ್ ಅವರು ಬೆಳಕಿನ ಮಹತ್ವವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಕಡು ಬಡತನ ಕುಟುಂಬ ವರ್ಗದಲ್ಲಿ ಜನಿಸಿ, ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜೀವಮಾನ ಸಾಧನೆ ಮಾಡಿದ್ದಾರೆ. ರಾಜ್ಯವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಭೌತವಿಜ್ಞಾನಿ, ಶಬ್ದ, ಬೆಳಕು, ಸ್ವರಗಳಿಗೆ ವಿಜ್ಞಾನ ಸೂತ್ರಗಳ ಮೂಲಕ ವಿನೂತನ ಆಯಾಮ ನೀಡಿದರು. ಭೌತ ವಿಜ್ಞಾನ ಕ್ಷೇತ್ರದಲ್ಲಿ ಅವರ ಸಂಶೋಧನೆಯಿಂದ ರಾಮನ್ ಎಫೆಕ್ಟ್ ಎಂದೇ ಜಗದ್ವಿಖ್ಯಾತಗೊಂಡದ್ದು ಭಾರತದ ಹಿರಿಮೆ’’ ಎಂದು ಸ್ಮರಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಉಪ ಕುಲಸಚಿವ ಡಾ.ಶಲ್ವಪಿಳೈ ಅಯ್ಯಂಗಾರ್ ಮಾತನಾಡಿ, ‘‘ಸರಕಾರಿ ಶಾಲೆಯೆಂದರೆ ಕೆಲವರು ನಿರ್ಲಕ್ಷ್ಯ ತೋರುತ್ತಾರೆ. ಆದರೆ ಭಾರತದಲ್ಲಿ ಸಾಧನೆ ಮಾಡಿದ ಅನೇಕರು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರೇ ಎಂಬುದನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸಬೇಕು’’ ಎಂದರು.

‘‘ಸದ್ಯದ ಶಿಕ್ಷಣ ಪಠ್ಯಕ್ರಮಗಳಿಗೆ ಹೋಲಿಸಿದರೇ ಹಿಂದಿನ ಕಾಲದ ಪಠ್ಯಪುಸ್ತಕಗಳು ತುಂಬಾ ಕ್ಲಿಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದೇ ಕಲಿಕಾ ಕೇಂದ್ರಗಳಿರಲಿಲ್ಲ. ಮಾರ್ಗದರ್ಶಕರು ವಿರಳವಾಗಿದ್ದರು. ಮಾಹಿತಿ ತಂತ್ರಜ್ಞಾನ ಸಂಪರ್ಕವಿರಲಿಲ್ಲ. ಸರ್ ಸಿ.ವಿ.ರಾಮನ್ ಅವರ ಕ್ರಿಯಾಶೀಲತೆ ವಿಜ್ಞಾನ ಕಾರ್ಯತಂತ್ರ ಇಂದಿನ ವಿದ್ಯಾರ್ಥಿಗಳ ಹೊಸ ಅನ್ವೇಷಣೆಗಳಿಗೆ ಮಾದರಿಯಾಗಿದೆ’’ ಎಂದರು.

ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಡಾ.ಶೆಲ್ವಪಿಳೈ ಅಯ್ಯಂಗಾರ್, ಉದ್ಯಮಿ ಅಪೂರ್ವ ಸುರೇಶ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ವಿಕ್ರಂ ಅಯ್ಯಂಗಾರ್, ಶ್ರೀಧರಮೂರ್ತಿ, ಅಜಯ್ ಶಾಸ್ತ್ರಿ ಕಶ್ಯಪ್, ವಿನಯ್ ಕಣಗಾಲ್, ಕಡಕೊಳ ಜಗದೀಶ್ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ