ಆ್ಯಪ್ನಗರ

ದಸರಾ ಗಜಪಡೆ 2ನೇ ತಂಡ ಆಗಮನ

ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ಮೊದಲ ತಂಡದ ಗಜಪಡೆ ತಾಲೀಮು ಆರಂಭಿಸಿದ್ದು, ಸೋಮವಾರ ಎರಡನೇ ತಂಡದ ಆನೆಗಳು ಅರಮನೆ ಪ್ರವೇಶಿಸಿವೆ.

Vijaya Karnataka 10 Sep 2019, 5:00 am
ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ಮೊದಲ ತಂಡದ ಗಜಪಡೆ ತಾಲೀಮು ಆರಂಭಿಸಿದ್ದು, ಸೋಮವಾರ ಎರಡನೇ ತಂಡದ ಆನೆಗಳು ಅರಮನೆ ಪ್ರವೇಶಿಸಿವೆ.
Vijaya Karnataka Web dasara gajapade 2nd team arrival
ದಸರಾ ಗಜಪಡೆ 2ನೇ ತಂಡ ಆಗಮನ


ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಂಭ್ರಮ ಕಳೆಗಟ್ಟಿದೆ. ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಆ.26ರಂದೇ ನಗರಕ್ಕೆ ಆಗಮಿಸಿದ್ದವು. ಮಂಗಳವಾರ ಬೆಳಗ್ಗೆ ಏಳು ಆನೆಗಳ ಗಜಪಡೆ ಅಂಬಾವಿಲಾಸ ಅರಮನೆಗೆ ಆವರಣದಲ್ಲಿ ಬೀಡು ಬಿಟ್ಟಿವೆ. ದುಬಾರೆಯಿಂದ ಕಾವೇರಿ, ವಿಕ್ರಮ, ಗೋಪಿ, ಕೆ. ಗುಡಿಯಿಂದ ದುರ್ಗಾ ಪರಮೇಶ್ವರಿ, ಬಂಡೀಪುರದಿಂದ ಜಯಪ್ರಕಾಶ, ಲಕ್ಷ್ಮೀ ಆಗಮಿಸಿವೆ. ಬಂಡೀಪುರದಿಂದ ಆಗಮಿಸುತ್ತಿರುವ ಮೂರು ಆನೆಗಳು ದಸರಾ ಹಬ್ಬಗೆ ಇದೇ ಮೊದಲ ಬಾರಿ ತಾಲೀಮಿನಲ್ಲಿ ಭಾಗಿಯಾಗಲಿವೆ. ಮೊದಲ ಹಂತದ ಆನೆಗಳಲ್ಲಿ ಈಶ್ವರನಿಗೆ ಇದು ಮೊದಲ ಬಾರಿ ದಸರಾ ಸಂಭ್ರಮ.

''ಕಳೆದ ತಿಂಗಳು ಮೊದಲ ಹಂತದಲ್ಲಿ 6 ಆನೆಗಳನ್ನು ಕರೆತರಲಾಗಿತ್ತು. ಇದೀಗ ಎರಡನೇ ಹಂತದಲ್ಲಿ 7 ಆನೆಗಳು ಅರಮನೆ ಅಂಗಳವನ್ನು ಸೇರಿಕೊಂಡಿವೆ. ಮೊದಲ ಹಂತದ ಆನೆಗಳು ಈಗಾಗಲೇ ತಾಲೀಮಿನಲ್ಲಿ ಪಾಲ್ಗೊಂಡಿವೆ. ಎರಡನೇ ಹಂತದ ಆನೆಗಳು ಶೀಘ್ರದಲ್ಲೇ ಈ ತಾಲೀಮಿನಲ್ಲಿ ಸೇರಿಕೊಳ್ಳಲಿವೆ,'' ಎಂದು ಡಿಸಿಎಫ್‌ (ವನ್ಯಜೀವಿ) ಅಲೆಕ್ಸಾಂಡರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ