ಆ್ಯಪ್ನಗರ

ಪಟ್ಟಣಕ್ಕೆ ಬಂದ ಜಿಂಕೆ ರಕ್ಷಣೆ

ಕಾಡಿನಿಂದ ಹಾದಿ ತಪ್ಪಿ ಪಟ್ಟಣದ ಶಾಲೆಯೊಂದರ ಅಂಗಳಕ್ಕೆ ಬಂದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

Vijaya Karnataka 23 Jun 2018, 5:00 am
ಪಿರಿಯಾಪಟ್ಟಣ : ಕಾಡಿನಿಂದ ಹಾದಿ ತಪ್ಪಿ ಪಟ್ಟಣದ ಶಾಲೆಯೊಂದರ ಅಂಗಳಕ್ಕೆ ಬಂದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
Vijaya Karnataka Web deer protection from town
ಪಟ್ಟಣಕ್ಕೆ ಬಂದ ಜಿಂಕೆ ರಕ್ಷಣೆ


ಪಟ್ಟಣದ ಪುಷ್ಪಾ ವಿದ್ಯಾಸಂಸ್ಥೆಯ ಆವರಣದಲ್ಲಿರುವ ಆಟದ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ಜಿಂಕೆಯೊಂದು ಪ್ರತ್ಯಕ್ಷ ವಾಗಿದೆ. ಹಿಂಬದಿಯ ತೋಟದಿಂದ ಕಾಂಪೌಂಡ್‌ ಹಾರಿಬಂದ ಜಿಂಕೆ ದಾರಿಕಾಣದೆ ಅತ್ತಿತ್ತ ಓಡಾಡಿ ಗಾಬರಿಗೊಂಡಿತ್ತು. ನಂತರ ಶಾಲಾ ಆವರಣದಿಂದ ಹೊರಗೆ ದಾಟಿ ಪಟ್ಟಣದ ಒಳಗೆ ಓಡಿ ಬಂದಿತು. ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷ ಣ ಕಾರ್ಯಪ್ರವೃತ್ತರಾಗಿ ಜಿಂಕೆಯನ್ನು ಹಿಡಿದರು.

''ಸುಮಾರು 2 ವರ್ಷದ ಗಂಡು ಜಿಂಕೆ ಇದಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ನಿಶಕ್ತಗೊಂಡಿದ್ದರಿಂದ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ತಾಲೂಕಿನ ಆನೆಚೌಕೂರು ಅರಣ್ಯ ವಲಯದಲ್ಲಿ ಬಿಡಲಾಯಿತು,'' ಎಂದು ವಲಯ ಅರಣ್ಯಾಧಿಕಾರಿ ಗಿರೀಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ