ಆ್ಯಪ್ನಗರ

RSSನ ರಾಜು ಹತ್ಯೆ: ಆರೋಪಿ ಹಬೀಬ್ ಪಾಷಾಗೆ ಗಡೀಪಾರು ಆದೇಶ

ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಬೀಬ್ ಪಾಷಾಗೆ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.

Vijaya Karnataka Web 16 Mar 2018, 9:19 am
ಮೈಸೂರು: ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಬೀಬ್ ಪಾಷಾಗೆ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.
Vijaya Karnataka Web deportation for habib pasha
RSSನ ರಾಜು ಹತ್ಯೆ: ಆರೋಪಿ ಹಬೀಬ್ ಪಾಷಾಗೆ ಗಡೀಪಾರು ಆದೇಶ


ಆರೋಪಿ ಹಬೀಬ್ ಪಾಷಾನಿಗೆ ಮುಂದಿನ ಆರು ತಿಂಗಳಗಳ ಕಾಲ ಮೈಸೂರು, ಮಂಡ್ಯ, ಹುಣಸೂರು, ಮಂಗಳೂರು ಹಾಗೂ ಚಾಮರಾಜ ನಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.

ಎಸ್‌ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹುಣಸೂರು ಮೂಲದ ಹಬೀಬ್, ಸುಮಾರು ಎಂಟು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಆರ್.ಎಸ್.ಎಸ್.ಹಾಗು ಬಿಜೆಪಿ ಮುಖಂಡನ ಹತ್ಯೆ ಪ್ತಕರಣದಲ್ಲಿ ಇತ್ತೀಚೆಗಷ್ಟೆ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಈ ವೇಳೆ ಈತನಿಗೆ ಅದ್ದೂರಿ ಸ್ವಾಗತವೂ ದೊರೆತಿತ್ತು.

ಆರೋಪಿಯನ್ನು ಗಡೀಪಾರು ಮಾಡಿ ಆದೇಶ ಹೊರಡಿಸಿದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ