ಆ್ಯಪ್ನಗರ

ಸಾ.ರಾ. ಮಹೇಶ್‌, ತನ್ವೀರ್‌ ಸೇಠ್‌ಗಿತ್ತು ರವಿ ಪೂಜಾರಿ ಬೆದರಿಕೆ!

ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿ 14 ದಿನಗಳ ಕಾಲ ಕಸ್ಟಡಿ ಸೇರಿರುವ ಭೂಗತ ಪಾತಕಿ ರವಿ ಪೂಜಾರಿ ಅವರಿಂದ ಶಾಸಕರಾದ ಸಾ.ರಾ. ಮಹೇಶ್‌, ತನ್ವೀರ್‌ ಸೇಠ್‌ ಮುಂತಾದವರಿಗೆ ಬೆದರಿಕೆ ಇತ್ತು ಎಂಬುದು ತಿಳಿದು ಬಂದಿದೆ.

Vijaya Karnataka Web 25 Feb 2020, 7:35 am
ಮೈಸೂರು: ಭೂಗತ ಡಾನ್‌ ರವಿ ಪೂಜಾರಿ ತಮಗೆ ಹಾಗೂ ಶಾಸಕ ಸಾ.ರಾ. ಮಹೇಶ್‌ ಅವರಲ್ಲದೇ ಇನ್ನೂ ಅನೇಕ ಶಾಸಕರಿಗೆ ಬೆದರಿಕೆ ಇತ್ತು. ಯಾವ ಶಾಸಕರಿಗೆ ಬೆದರಿಕೆ ಇತ್ತು ಎಂಬುದು ತನಿಖೆಯಿಂದ ಬಯಲಾಗಬೇಕಿದೆ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.
Vijaya Karnataka Web Sa Ra Mahesh


ದುಬೈನಲ್ಲಿ ಚಿಕಿತ್ಸೆ ಪಡೆದು ಸೋಮವಾರ ಮಾಸೂರಿಗೆ ವಾಪಾಸಾದ ತನ್ವೀರ್‌ ಸೇಠ್‌ ಸುದ್ದಿಗಾರರ ಜತೆ ಮಾತನಾಡಿ, ''ನಾನು ಹಾಗೂ ಸಾ.ರಾ. ಮಹೇಶ್‌ ಪೊಲೀಸರಿಗೆ ದೂರು ನೀಡಿದ್ದೆವು. ಇನ್ನು ಯಾವ ಶಾಸಕರಿಗೆ ರವಿ ಪೂಜಾರಿಯಿಂದ ಬೆದರಿಕೆ ಇತ್ತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ,'' ಎಂದರು.

''ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಹಂತಹಂತವಾಗಿ ಸರಿಯಾಗುತ್ತಿದೆ. ಧ್ವನಿ ಸರಿಯಾಗಲು ಥೆರಪಿ ನಡೆಯುತ್ತಿದೆ. ಇನ್ನು ಮುಂದೆ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ವಿಧಾನಸಭೆಯ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ,'' ಎಂದರು.

ಡಾನ್‌ ರವಿ ಪೂಜಾರಿ: ಇಲ್ಲಿ ಸಮಾಜಘಾತುಕ, ಅಲ್ಲಿ ಸಮಾಜ ಸೇವಕ!

ಮೈಸೂರಿನಲ್ಲಿ ಕೆಲವು ತಿಂಗಳ ಹಿಂದೆ ತನ್ವೀರ್‌ ಸೇಠ್‌ ಅವರ ಕೊಲೆ ಯತ್ನ ನಡೆದು ಅವರು ತೀವ್ರವಾಗಿ ಗಾಯಗೊಂಡಿದ್ದರು. ಇಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತಂದಿದ್ದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ