ಮೈಸೂರು: ಪ್ರವಾಸಿಗರ ಸ್ವರ್ಗ ಹಾಗೂ ಅರಮನೆಗಳ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ದಶಕಗಳ ರಸ್ತೆಗಿಳಿಯಲು ಡಬ್ಬಲ್ ಡೆಕ್ಕರ್ ಬಸ್ ಗಳು ತಯಾರಿ ನಡೆಸಿದೆ. ಹಾಗಾಗಿ ಮುಂದಿನ ದಿನದಲ್ಲಿ ಡಬಲ್ ಡೆಕ್ಕರ್ ಬಸ್ ನಲ್ಲಿ ಕುಳಿತು ಮೈಸೂರಿನ ಸಂಪೂರ್ಣ ಪ್ರವಾಸಿತಾಣಗಳ ಸವಿಯನ್ನು ಸವಿಯಬಹುದಾಗಿದೆ.
ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಇದೇ ಬೆನ್ನಲ್ಲೇ ಮೈಸೂರು ಹಾಗೂ ಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಕೆಲವೇ ದಿನದಲ್ಲಿ ಆರಂಭಿಸಲು ಸಜ್ಜಾಗಿದೆ. ಈ ಹಿಂದೆ ಕೇವಲ ನಾಡಹಬ್ಬ ದಸರಾ ವೇಳೆ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು ಆದರೆ ಇನ್ಮುಂದೆ ವರ್ಷವಿಡೀ ಡಬಲ್ ಡೆಕ್ಕರ್ ಬಸ್ ನ ಸೌಲಭ್ಯ ಪ್ರವಾಸಿಗರಿಗೆ ಸಿಗಲಿದೆ. ಸಾರ್ವಜನಿಕರ ಕೈಗೆಟಕುವ ದರದಲ್ಲೇ ನಗರದಲ್ಲಿ ಒಟ್ಟು 6 ಡಬಲ್ ಡೆಕ್ಕರ್ ಬಸ್ ಮುಂದಿನ ದಿನದಲ್ಲಿ ಸಂಚರಿಸಲಿವೆ. ಸದ್ಯಕ್ಕೆ ಒಂದು ಬಸ್ ಮೈಸೂರಿಗೆ ಆಗಮಿಸಿದ್ದು ಏಪ್ರಿಲ್ 1ರಿಂದ ರಸ್ತೆಯಲ್ಲಿ ಸಂಚಾರ ಆರಂಭಗೊಳ್ಳಲಿದೆ. ಉಳಿದ 5 ಬಸ್ಗಳು ಮಾರ್ಚ್ ಅಂತ್ಯಕ್ಕೆ ಮೈಸೂರಿಗೆ ಆಗಮಿಸಲಿವೆ.
ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡರ್ಸ್ ಸಂಸ್ಥೆ 6 ಡಬಲ್ ಡೆಕ್ಕರ್ ಬಸ್ಗಳ ಬಾಡಿ ತಯಾರು ಮಾಡಿದ್ದು, ಪ್ರತಿ ಬಸ್ಗಳು 40 ಸೀಟುಗಳ ಸಾಮರ್ಥ್ಯ ಹೊಂದಿವೆ. ಕೆಳಗೆ 20 ಹಾಗೂ ಮೇಲೆ 20 ಸೀಟುಗಳನ್ನು ಅಳವಡಿಕೆ ಮಾಡಲಾಗಿರುವುದು ವಿಶೇಷ.
ಈ ಬಸ್ ಮೂಲಕ ಪ್ರವಾಸೋದ್ಯಮಗಳ ಸ್ಥಳದ ಬಗ್ಗೆ ಬಸ್ ನಲ್ಲೇ ಮಾಹಿತಿ ನೀಡಲಾಗುತ್ತಿದ್ದು ಎಲ್ ಇಡಿ ಟಿವಿ ಮೂಲಕ ಪ್ರವಾಸಿ ತಾಣಗಳ ವಿಡಿಯೋ ಹಾಗೂ ಆಡಿಯೋದಲ್ಲಿ ಮಾಹಿತಿ ಸಿಗಲಿದೆ. ಮೈಸೂರು ನಗರದಾದ್ಯಂತ 35ಕಿ.ಲೋ ವ್ಯಾಪ್ತಿಯಲ್ಲಿ ಈ ಬಸ್ ಗಳು ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಇದೇ ಬೆನ್ನಲ್ಲೇ ಮೈಸೂರು ಹಾಗೂ ಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಕೆಲವೇ ದಿನದಲ್ಲಿ ಆರಂಭಿಸಲು ಸಜ್ಜಾಗಿದೆ. ಈ ಹಿಂದೆ ಕೇವಲ ನಾಡಹಬ್ಬ ದಸರಾ ವೇಳೆ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು ಆದರೆ ಇನ್ಮುಂದೆ ವರ್ಷವಿಡೀ ಡಬಲ್ ಡೆಕ್ಕರ್ ಬಸ್ ನ ಸೌಲಭ್ಯ ಪ್ರವಾಸಿಗರಿಗೆ ಸಿಗಲಿದೆ.