ಆ್ಯಪ್ನಗರ

ಮೈಸೂರು ವಿವಿಯಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ

ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯನ್ನು ಪ್ರಧಾನ ಉದ್ದೇಶವನ್ನಾಗಿ ಇರಿಸಿಕೊಂಡು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿವಿ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ.

Vijaya Karnataka Web 26 Nov 2020, 9:54 am
ಮೈಸೂರು: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿವಿ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ. ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯನ್ನು ಪ್ರಧಾನ ಉದ್ದೇಶವನ್ನಾಗಿ ಇರಿಸಿಕೊಂಡು ಸಂಗೀತದ ಎಲ್ಲಾ ಪ್ರಕಾರಗಳ ಬಹುಮುಖ ಬೆಳವಣಿಗೆಗಾಗಿ ಪೀಠವನ್ನು ಭೂಮಿಕೆಯಾಗಿ ಅಳವಡಿಸಿಕೊಂಡು ಇದರ ಕಾರ್ಯ ವ್ಯಾಪ್ತಿಯನ್ನು ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸುವುದು ಉದ್ದೇಶ.
Vijaya Karnataka Web SP Balasubrahmanyam


ವಿವಿಯ ಲಲಿತಕಲೆಗಳ ಕಾಲೇಜಿನಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಯಾಗಲಿದ್ದು, ಪೀಠದ ಆರಂಭಕ್ಕೆ ವಾರ್ಷಿಕವಾಗಿ ಐದು ಲಕ್ಷ ರೂ. ಮೀಸಲು ಇರಿಸಲಾಗಿದೆ. ಈ ಅನುದಾನದಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ ಮುಂತಾದ ಶೈಕ್ಷಣಿಕ ಕಾರ್ಯಗಳನ್ನು ಆಯೋಜಿಸುವುದು. ಇವೆಲ್ಲವನ್ನು ನಿರ್ವಹಿಸಲು ಕ್ಷೇತ್ರ ತಜ್ಞರೊಬ್ಬರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ(ವಾರ್ಷಿಕ) ನೇಮಿಸಿಕೊಳ್ಳುವುದು, ಗೌರವ ಸಂಭಾವನೆ ನೀಡಲು ನಿರ್ಧರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ