ಆ್ಯಪ್ನಗರ

ಇಂದಿನಿಂದ ಎಡತೊರೆ ಉತ್ಸವ

ಕೃಷ್ಣರಾಜನಗರ ತಾಲೂಕಿನ ಎಡತೊರೆ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಫೆ.9ರಿಂದ 11ರವರೆಗೆ ಎಡತೊರೆ ಉತ್ಸವ ಆಯೋಜಿಸಲಾಗಿದೆ.

Vijaya Karnataka 9 Feb 2019, 5:00 am
ಮೂರು ದಿನಗಳ ಕಾರ್ಯಕ್ರಮಕ್ಕೆ ಸಿಎಂ ಚಾಲನೆ | ಪ್ರತಿ ದಿನ ಸಂಜೆ ತಾರಾ ಮೆರುಗು
Vijaya Karnataka Web eadatore utshava
ಇಂದಿನಿಂದ ಎಡತೊರೆ ಉತ್ಸವ


ಮೈಸೂರು : ಕೃಷ್ಣರಾಜನಗರ ತಾಲೂಕಿನ ಎಡತೊರೆ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಫೆ.9ರಿಂದ 11ರವರೆಗೆ ಎಡತೊರೆ ಉತ್ಸವ ಆಯೋಜಿಸಲಾಗಿದೆ.

ಫೆ.9 ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅಧ್ಯಕ್ಷ ತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಚಾಲನೆ ನೀಡುವರು. ಸಂಸದರಾದ ಆರ್‌.ಧ್ರುವನಾರಾಯಣ್‌, ಎಲ್‌.ಆರ್‌.ಶಿವರಾಮೇಗೌಡ, ಪ್ರತಾಪ್‌ ಸಿಂಹ ಭಾಗವಹಿಸಲಿದ್ದಾರೆ.

ಪ್ರತಿದಿನ ಸಂಜೆ 4ಕ್ಕೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ ತಾರಾ ಮೆರುಗು ಕಾರ‍್ಯಕ್ರಮ ಇರಲಿದೆ. ಫೆ.9 ರಂದು ಸಂಜೆ 6.30ಕ್ಕೆ ನಂತರ ಸಂಜಯ್‌ ಅವರಿಂದ ಕರ್ನಾಟದ ದರ್ಶನ ನೃತ್ಯರೂಪಕ, ಸಂಜೆ 7ಕ್ಕೆ ನಟ ಶಿವರಾಜ್‌ ಕುಮಾರ್‌, ನಟಿ ರಚಿತಾರಾಮ… ಅವರಿಂದ ಮನೋರಂಜನಾ ಕಾರ‍್ಯಕ್ರಮ, ಗಾಯಕರಾದ ಹೇಮಂತ್‌, ಶಮಿತಾ ಮಲ್ನಾಡ್‌, ಕಾಮಿಡಿ ಗೋಪಿ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಫೆ.10ರಂದು ಸಂಜೆ 6ಕ್ಕೆ ತಬಲ ನಾನಿ ತಂಡದಿಂದ ನಗೆ ಹಬ್ಬ ಮತ್ತು ನಾಟಕ, ಸಂಜೆ 7ಕ್ಕೆ ಡಾಲಿ ಧನಂಜಯ…, ಶಾನ್ವಿ ಶ್ರೀವಾಸ್ತವ್‌, ಆಶಿಕಾ ರಂಗನಾಥ್‌, ಸಿಂಧು ಲೋಕನಾಥ್‌, ಭಾವನಾ ರಾವ್‌, ಹರ್ಷಿಕಾ ಪೂಣಚ್ಚ, ಅಗ್ನಿ ಸಾಕ್ಷಿಯ ಸನ್ನಿಧಿಧಿ, ಚಂದ್ರಿಕಾ, ಧನ್ಯಾ ಮತ್ತು ಉಷಾ ಕೋಕಿಲರ ಸ್ಯಾಂಡಲ್‌ವುಡ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ. ಫೆ.11ರಂದು ನಟ ಉಪೇಂದ್ರ, ಸಾಧುಕೋಕಿಲ ಗಾಯಕರಾದ ರಾಜೇಶ್‌ ಕೃಷ್ಣನ್‌, ಅನುರಾಧ ಭಟ್‌, ಕುಮಾರ ಗಂಗೋತ್ರಿ ಅವರಿಂದ ಸಂಗೀತ ರಸಸಂಜೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ