ಆ್ಯಪ್ನಗರ

ಕೆಸರಲ್ಲಿ ಸಿಲುಕಿದ್ದ ಆನೆ ಸಾವು

ಕೆಸರಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಕಾಡಾನೆ ಬದುಕಿಸುವ ಅರಣ್ಯ ಇಲಾಖೆಯೆ ಎಲ್ಲ ಪ್ರಯತ್ನಗಳು ವಿಫಲವಾಗಿ ಆನೆ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣದ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka Web 23 Mar 2017, 10:29 am
ಪಿರಿಯಾಪಟ್ಟಣ: ಕೆಸರಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಕಾಡಾನೆ ಬದುಕಿಸುವ ಅರಣ್ಯ ಇಲಾಖೆಯೆ ಎಲ್ಲ ಪ್ರಯತ್ನಗಳು ವಿಫಲವಾಗಿ ಆನೆ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣದ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web elephant dead
ಕೆಸರಲ್ಲಿ ಸಿಲುಕಿದ್ದ ಆನೆ ಸಾವು


ಪಿರಿಯಾಪಟ್ಟಣದ ಸಿಪಿಟಿ 7ರ ಮುತ್ತೂರು ಶಾಖೆಗೆ ಸೇರಿದ ವರ್ತಿ ಹಾಡಿ ಬಳಿಯ ಕಾಡಿನಲ್ಲಿ ಇರುವ ಕೆರೆಯ ಕೆಸರಿನಲ್ಲಿ ಹೆಣ್ಣಾನೆಯೊಂದು ಸಿಲುಕಿತ್ತು. ಆನೆಯನ್ನು ಬಿದಿರು ಬೊಂಬುಗಳು, ಮರದ ಕೊಂಬೆಗಳ ಮೂಲಕ ಮೇಲೆತ್ತಲು ಅರಣ್ಯ ಸಿಬ್ಬಂದಿ ಪ್ರಯತ್ನ ನಡೆಸಿದರು. ಇದು ಸಫಲವಾಗಲಿಲ್ಲ. ನಂತರ ಸಾಕಾನೆ ಅಭಿಮನ್ಯುವನ್ನು ಕರೆತರಲಾಯಿತು. ಅಭಿಮನ್ಯು ಮೂಲಕ ಹಗ್ಗಕಟ್ಟಿ ಕಾಡಾನೆ ಹೊರಗೆ ಎಳೆಯಲಾಯಿತು. ನೀರು ಆಹಾರವಿಲ್ಲದ ನಿತ್ರಾಣಗೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಉಮಾಶಂಕರ್ ಔಷಧೋಪಚಾರ ನಡೆಸಿ ಗ್ಲೂಕೋಸ್ ಸಹ ನೀಡಿದರು. ಸ್ಪಲ್ಪ ಚೇತರಿಸಿಕೊಳ್ಳುತ್ತಿದೆ ಎಂದು ರಾತ್ರಿಯವರೆಗೂ ಕಾದ ಸಿಬ್ಬಂದಿ ಎಲೆ ಕೊಂಬೆಗಳನ್ನು ಆಹಾರವಾಗಿ ಅದರ ಪಕ್ಕದಲ್ಲಿ ಇಟ್ಟು ಶಕ್ತಿ ಬಂದಾಗ ಎದ್ದು ಹೋಗುತ್ತದೆ ಎಂದು ಎಲ್ಲರೂ ಹೊರಬಂದರು.

ಬುಧವಾರ ಬೆಳಗ್ಗೆ ಆನೆ ಬಳಿ ತೆರಳಿದಾಗ ನಿತ್ರಾಣಗೊಂಡಿದ್ದ ಆನೆ ಮೇಲೇಳು ಸಾಧ್ಯವಾಗದೆ ಸೋತಿತ್ತು. ಬೆಳಗ್ಗೆಯೂ ಔಷಧೋಪಚಾರ ಮಾಡಲಾಯಿತಾದರೂ ಚೇತರಿಕೆ ಕಾಣಲಿಲ್ಲ. ಬೆಳಗ್ಗೆ 9ರ ವೇಳೆಗೆ ಆನೆ ಕೊನೆಯುಸಿರೆಳೆಯಿತು.

ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಡಾ.ಉಮಾಶಂಕರ್ ಆನೆ 15ರಿಂದ 20 ವರ್ಷ ವಯಸ್ಸಿನದಾಗಿದೆ ಎಂದು ತಿಳಿಸಿದ್ದಾರೆ. ಡಿಸಿಎಫ್ ಡಾ.ಬಾಲಚಂದ್ರ ಮತ್ತು ಆರ್‌ಎಫ್‌ಒ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

6 ತಿಂಗಳ ಹಿಂದೆ: ಕೆಲ ತಿಂಗಳ ಹಿಂದೆಯಷ್ಟೆ ಹೊಸಕೆರೆ ಹಾಡಿಯ ಬಳಿ ಇದೆ ರೀತಿ ಆನೆಯೊಂದು ಕೆಸರಿನಲ್ಲಿ ಕೆರೆಯ ಮಧ್ಯೆ ಸಿಲುಕಿಕೊಂಡು ಸಾವಿಗೀಡಾಗಿತ್ತು. ಈಗ ಪಿರಿಯಾಪಟ್ಟಣ ಅರಣ್ಯವಲಯದ ವ್ಯಾಪ್ತಿಯಲ್ಲಿ ಈ ರೀತಿ ಮೃತಪಟ್ಟ 2ನೇ ಆನೆ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ