ಆ್ಯಪ್ನಗರ

ಆನೆ ದಂತ ಮಾರಾಟ ಯತ್ನ: ನಾಲ್ವರ ಬಂಧನ

ವಿಕ ಸುದ್ದಿಲೋಕ ಎಚ್‌ಡಿಕೋಟೆ ತಾಲೂಕಿನ ಯರಹಳ್ಳಿ ಹ್ಯಾಂಡ್‌ಪೋಸ್ಟ್‌ ಗ್ರಾಮದಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ...

Vijaya Karnataka 16 Dec 2018, 5:00 am
ಎಚ್‌.ಡಿ.ಕೋಟೆ: ತಾಲೂಕಿನ ಯರಹಳ್ಳಿ ಹ್ಯಾಂಡ್‌ಪೋಸ್ಟ್‌ ಗ್ರಾಮದಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web elephant dental sales initiative four arrested
ಆನೆ ದಂತ ಮಾರಾಟ ಯತ್ನ: ನಾಲ್ವರ ಬಂಧನ


ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಿಜಯ್‌ (19), ಕಿರಣ್‌ (21), ಮಹದೇವಪ್ಪ (20)ಮತ್ತು ಮೈಸೂರು ನಗರದ ಪ್ರದೀಪ್‌ (23) ಬಂಧಿತರು.

ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಯರಹಳ್ಳಿ ಹ್ಯಾಂಡ್‌ಪೋಸ್ಟ್‌ ಗ್ರಾಮದ ವೃತ್ತದ ಹೋಟೆಲ್‌ ಬಳಿ ಈ ನಾಲ್ವರು ತುಂಡಾಗಿರುವ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಆನೆ ದಂತವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷ ಕ ಹರೀಶ್‌ಕುಮಾರ್‌, ಪಿಎಸ್‌ಐ ವಿ.ಸಿ. ಅಶೋಕ್‌, ಮುಖ್ಯ ಪೇದೆ ಶಿವಕುಮಾರ್‌, ಪೇದೆಗಳಾದ ಗುರು, ಲತೀಫ್‌, ಶ್ರೀನಿವಾಸ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ