ಆ್ಯಪ್ನಗರ

ಒತ್ತುವರಿ ತೆರವು ಕಾರ್ಯಾಚರಣೆ

ನಗರದ ಬಹಳಷ್ಟು ರಸ್ತೆಗಳ ಪುಟ್ಪಾತ್‌ನಲ್ಲಿ ಸಾರ್ವಜನಿಕರು ಸಂಚರಿಸುವುದೇ ದುಸ್ತರ,ಅಷ್ಟರಮಟ್ಟಿಗೆ ಅಂಗಡಿಗಳ ವ್ಯಾಪಾರಸ್ಥರು ಒತ್ತುವರಿಮಾಡಿಕೊಂಡಿರುತ್ತಾರೆ.ಇಂತಹದ್ದೊಂದು ದೂರು ಬಹಳಷ್ಟು ದಿನಗಳಿಂದ ಕೇಳಿ ಬಂದಿತ್ತು.ಈ ಹಿನ್ನಲೆಯಲ್ಲಿ ನಗರ ಸಂಚಾರ ಪೊಲೀಸರು'ಆಪರೇಷನ್‌ ಫುಟ್ಪಾತ್‌'ಆರಂಭಿಸಿದ್ದಾರೆ.

ವಿಕ ಸುದ್ದಿಲೋಕ 12 Jan 2017, 9:00 am

-ಸಂಚಾರ ಪೊಲೀಸರು, ಪಾಲಿಕೆಯಿಂದ 'ಆಪರೇಷನ್‌ ಫುಟ್ಪಾತ್‌' ಆರಂಭ

Vijaya Karnataka Web encroachment clearance operation
ಒತ್ತುವರಿ ತೆರವು ಕಾರ್ಯಾಚರಣೆ

ಮೈಸೂರು: ನಗರದ ಬಹಳಷ್ಟು ರಸ್ತೆಗಳ ಪುಟ್ಪಾತ್‌ನಲ್ಲಿ ಸಾರ್ವಜನಿಕರು ಸಂಚರಿಸುವುದೇ ದುಸ್ತರ, ಅಷ್ಟರಮಟ್ಟಿಗೆ ಅಂಗಡಿಗಳ ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿರುತ್ತಾರೆ. ಇಂತಹದ್ದೊಂದು ದೂರು ಬಹಳಷ್ಟು ದಿನಗಳಿಂದ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಮೈಸೂರು ನಗರ ಸಂಚಾರ ಪೊಲೀಸರು 'ಆಪರೇಷನ್‌ ಫುಟ್ಪಾತ್‌' ಆರಂಭಿಸಿದ್ದಾರೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಬೆಳಗ್ಗೆ ನಗರದ ಪ್ರಮುಖ ರಸ್ತೆಗಳಾದ ಸಯ್ಯಾಜಿರಾವ್‌ ರಸ್ತೆ, ಡಿ.ದೇವರಾಜ ಅರಸ್‌ ರಸ್ತೆ, ನಾರಾಯಣ ಶಾಸ್ತ್ರೀ ರಸ್ತೆ, ಶಿವರಾಂಪೇಟೆಯ ರಸ್ತೆಗಳಲ್ಲಿ ಪಾಲಿಕೆಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಒತ್ತುವರಿಯಾಗಿದ್ದ ಪುಟ್ಪಾತ್‌ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಕೆಲ ಅಂಗಡಿಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಯಾವುದಕ್ಕೂ ಮಣಿಯದೇ ತಮ್ಮ ತೆರವು ಕಾರ್ಯಾಚರಣೆ ಮುಂದುವರಿಸಿದರು.

''ಮುಂದಿನ ದಿನಗಳಲ್ಲಿ ಮತ್ತೆ ಒತ್ತುವರಿಯಾಗಿರುವುದು ಕಂಡು ಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು,'' ಎಂದು ಎಚ್ಚರಿಕೆ ನೀಡಿದರು.

ನಗರ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಸಂಚಾರ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ಸಿ.ಕಿರಣ್‌ ಕುಮಾರ್‌, ಸಂದೇಶ್‌ ಕುಮಾರ್‌, ವಿವೇಕಾನಂದ, ನಾಗೇಗೌಡ, ಹರೀಶ್‌ ಕುಮಾರ್‌ ಮತ್ತು ಸಿಬ್ಬಂದಿಯೊಂದಿಗೆ ಪಾಲಿಕೆಯ ಅಭಯ ತಂಡ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ