ಆ್ಯಪ್ನಗರ

ವಿದೇಶಿಗರಿಗೆ ವ್ಯಾಸಂಗ ಪ್ರಮಾಣ ಪತ್ರ: ಪ್ರಿನ್ಸಿಪಾಲ್‌ ಬಂಧನಕ್ಕೆ ಶೋಧ

ವಾಸದ ಅವಧಿ ವಿಸ್ತರಣೆಗಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಸುಳ್ಳು ಡಿಪ್ಲೊಮಾ ವ್ಯಾಸಂಗ ಪ್ರಮಾಣ ಪತ್ರ ನೀಡುತ್ತಿದ್ದ ಶ್ರೀಕಾಂತ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್‌ ಚಂದ್ರಬಾಬು ಬಂಧನಕ್ಕೆ ಕೆ.ಆರ್‌. ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Vijaya Karnataka 4 Jul 2018, 5:00 am
ಮೈಸೂರು: ವಾಸದ ಅವಧಿ ವಿಸ್ತರಣೆಗಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಸುಳ್ಳು ಡಿಪ್ಲೊಮಾ ವ್ಯಾಸಂಗ ಪ್ರಮಾಣ ಪತ್ರ ನೀಡುತ್ತಿದ್ದ ಶ್ರೀಕಾಂತ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್‌ ಚಂದ್ರಬಾಬು ಬಂಧನಕ್ಕೆ ಕೆ.ಆರ್‌. ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Vijaya Karnataka Web examination certificate for foreigners investigating principal arrest
ವಿದೇಶಿಗರಿಗೆ ವ್ಯಾಸಂಗ ಪ್ರಮಾಣ ಪತ್ರ: ಪ್ರಿನ್ಸಿಪಾಲ್‌ ಬಂಧನಕ್ಕೆ ಶೋಧ


ಜೂ.25 ರಂದು ಮೈಸೂರು ನಗರ ಸಿಎಸ್‌ಬಿ( ಸಿಟಿ ಸ್ಪೆಷಲ್‌ ಬ್ರಾಂಚ್‌) ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಚಂದ್ರಬಾಬು ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಎಸ್‌ಬಿ ಘಟಕದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಐಪಿಸಿ 420 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಮಧ್ಯೆ ಪ್ರಿನ್ಸಿಪಾಲ್‌ ನಡೆಸಿದ ಅಕ್ರಮಕ್ಕೂ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಪನೆ ನೀಡಿದ್ದು, ಚಂದ್ರಬಾಬು ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ