ಆ್ಯಪ್ನಗರ

ಅರೆಕಾಲಿಕ ಡಾಟಾ ಆಪರೇಟರ್‌ ವಿರುದ್ಧ ಎಫ್‌ಐಆರ್‌

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಶೌಚಗೃಹ ಪ್ರೋತ್ಸಾಹ ಧನ ದುರುಪಯೋಗ ಆರೋಪದಡಿ ಹೊರಳವಾಡಿ ಗ್ರಾಪಂ ಅರೆಕಾಲಿಕ ಡಾಟಾ ಆಪರೇಟರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Vijaya Karnataka 24 Jul 2018, 5:00 am
ನಂಜನಗೂಡು : ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಶೌಚಗೃಹ ಪ್ರೋತ್ಸಾಹ ಧನ ದುರುಪಯೋಗ ಆರೋಪದಡಿ ಹೊರಳವಾಡಿ ಗ್ರಾಪಂ ಅರೆಕಾಲಿಕ ಡಾಟಾ ಆಪರೇಟರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web fir against part time data operator
ಅರೆಕಾಲಿಕ ಡಾಟಾ ಆಪರೇಟರ್‌ ವಿರುದ್ಧ ಎಫ್‌ಐಆರ್‌


ಅರೆಕಾಲಿಕ ಡಾಟಾ ಎಂಟ್ರಿ ಆಪರೇಟರ್‌ ಡಿ.ಎಸ್‌.ಚಾಂದಿನಿ ಕರ್ತವ್ಯಲೋಪ ಎಸಗಿದ್ದು, ತನ್ನ ತಂದೆ ಹಾಗೂ ಸಹೋದರನ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿಕೊಂಡಿದ್ದಾರೆ ಎಂದು ಪಿಡಿಒ ಜ್ಯೋತಿ ಅವರು, ಬಿಳಿಗೆರೆ ಪೊಲೀಸ್‌ ಠಾಣೆಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

2016ನೇ ಸಾಲಿನ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಶೌಚಗೃಹ ನಿರ್ಮಿಸಿದ ಫಲಾನುಭವಿಗಳಿಗೆ ಪೋ›ತ್ಸಾಹ ಧನ ಮಂಜೂರು ಮಾಡುವ ಬದಲಾಗಿ ಡಾಟಾ ಆಪರೇಟರ್‌ ಡಿ.ಎಸ್‌. ಚಾಂದಿನಿ ಫಲಾನುಭವಿ ಮಹದೇವ್‌ ಹಾಗೂ ಪವಿತ್ರ ಫಲಾನುಭವಿಗಳ ಹೆಸರಿನಲ್ಲಿ ತನ್ನ ಸಹೋದರನ ಬ್ಯಾಂಕ್‌ ಖಾತೆಗೆ 24 ಸಾವಿರ ರೂ., ಬಸವರಾಜು ಹಾಗೂ ಸುಧಾಮಣಿ ಹೆಸರಿನಲ್ಲಿ ತನ್ನ ತಂದೆ ಬ್ಯಾಂಕ್‌ ಖಾತೆಗೆ 27 ಸಾವಿರ ರೂ., ಹಾಗೂ ಮಾದಶೆಟ್ಟಿ ಫಲಾನುಭವಿಗೆ ಹೆಚ್ಚುವರಿಯಾಗಿ 12 ಸಾವಿರ ರೂ. ಸೇರಿದಂತೆ ಒಟ್ಟು 63 ಸಾವಿರ ರೂ. ಅನುದಾನವನ್ನು ಪಿಡಿಒ ಹಾಗೂ ಅಧ್ಯಕ್ಷರ ಗಮನಕ್ಕೆ ತರದೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜತೆಗೆ ಎನ್‌.ಡಿ. ಪರಶಿವಮೂರ್ತಿ ಫಲಾನುಭವಿಯ ಪೋ›ತ್ಸಾಹಧನವನ್ನು ಸಹೋದರನ ಖಾತೆಗೆ ಜಮಾ ಮಾಡಲು ಯತ್ನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಕುರಿತು ಸ್ಪಷ್ಟೀಕರಣ ನೀಡುವಂತೆ ನೀಡಿದ್ದ ನೋಟಿಸ್‌ಗೆ ಉತ್ತರಿಸಿರುವ ಡಿ.ಎಸ್‌.ಚಾಂದಿನಿ ಕೆಲಸದ ಒತ್ತಡ ಹಾಗೂ ಕಣ್ತಪ್ಪಿನಿಂದ ಲೋಪವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ಇದರ ಆಧಾರದ ಮೇಲೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚಾಂದಿನಿ ಅವರನ್ನು ಅರೆಕಾಲಿಕ ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ತೀರ್ಮಾನ ಕೈಗೊಂಡಿದ್ದಾರೆ. ಅಂತೆಯೇ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಿಳಿಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶೌಚಾಲಯ ನಿರ್ಮಾಣ ಪ್ರೋತ್ಸಾಹಧನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅರೆಕಾಲಿಕ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಬಿಳಿಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

-ಜ್ಯೋತಿ, ಪಿಡಿಒ, ಹೊರಳವಾಡಿ ಗ್ರಾಪಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ