ಆ್ಯಪ್ನಗರ

ಫ್ರೀ ಕಾಶ್ಮೀರ ಫಲಕ ಪ್ರಕರಣ : ನಳಿನಿ ಪರ ವಾದಕ್ಕೆ ನಿಂತ ವಕೀಲರು, ಕೋರ್ಟ್‌ ಸುತ್ತ ಖಾಕಿ ಸರ್ಪಗಾವಲು

ಮೈಸೂರು ವಿವಿಯಲ್ಲಿ ಪ್ರತಿಭಟನೆ ನಡೆಯುವ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ ಸಂಬಂಧ ಆರೋಪಿ ನಳಿನಿ ಪರ ವಾದಿಸಲು ವಕೀಲರು ಒಂದಾಗಿದ್ದು, ಇಂದು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ. ನ್ಯಾಯಾಲಯದ ಸುತ್ತ ಬಿಗಿ ಭದ್ರತೆ ಹಾಕಲಾಗಿದೆ.

Vijaya Karnataka Web 24 Jan 2020, 3:22 pm
ಮೈಸೂರು: ಮೈಸೂರು ವಿವಿಯಲ್ಲಿ ಪ್ರತಿಭಟನೆ ನಡೆಯುವ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ ಸಂಬಂಧ ಆರೋಪಿ ನಳಿನಿ ಹಾಗೂ ಪ್ರತಿಭಟನೆ ಆಯೋಜಕರಾದ ಮರಿದೇವಯ್ಯ ಮತ್ತು ಇತರರ ಪರ ಸಲ್ಲಿಕೆಯಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಇಂದಿಗೆ ಮುಂದೂಡಿದ್ದು, ನ್ಯಾಯಾಲಯದ ಸುತ್ತ ಬಿಗಿ ಭದ್ರತೆ ಹಾಕಲಾಗಿದೆ.
Vijaya Karnataka Web Free Kashmir


ನ್ಯಾಯಾಲಯದ ಸುತ್ತಲೂ 70ಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ ಹಾಕಲಾಗಿದೆ. ಕಳೆದ ಸೋಮವಾರವಷ್ಟೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಆರೋಪಿಗಳ ಪರ ವಕಾಲತ್ತು ವಹಿಸಿ ಬೆಂಗಳೂರು, ಮಂಡ್ಯ, ದಾವಣಗೆರೆ, ಹಾಸನ ಹಾಗೂ ಮೈಸೂರಿನಿಂದ ಬಂದಿದ್ದ 165 ಮಂದಿ, ತಮ್ಮ ಸಹಿಯಿರುವ ವಕಾಲತ್ತು ಅರ್ಜಿಯನ್ನು ಕೋರ್ಟ್‌ಗೆ ನೀಡಿ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಅದೇ ದಿನ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಿತ್ತು. ಬಳಿಕ ಮಧ್ಯಾಹ್ನ 3ಕ್ಕೆ ಆರಂಭವಾದ ವಿಚಾರಣೆಯಲ್ಲಿ ನಳಿನಿ ಪರವಾಗಿ ಜಗದೀಶ್‌, ಅನಿಸ್‌ ಪಾಷ, ವಿಶ್ವನಾಥ್‌ ಮತ್ತು ಮರಿದೇವಯ್ಯ ರಘುನಾಥ್‌ ವಾದ ಮಂಡಿಸಿ ಇಂದಿಗೆ ಮುಂದೂಡಾಗಿತ್ತು.



ಇನ್ನು ನಳಿನಿ ಪರ ವಕೀಲರಾದ ಜಗದೀಶ್‌ ಪ್ರತಿಕ್ರಿಯಿಸಿ, ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ ಸಂಬಂಧ ಒಂದು ವೇಳೆ ನಳಿನಿ ದೇಶದ್ರೋಹಿ ಎಂದು ಸಾಬೀತಾದರೆ ನಾವು ಅದಕ್ಕಾಗಿ ಹೆಲ್ಪ್ ಮಾಡ್ತಿದ್ದೀವಿ ಅಂತ ನಮ್ಮನ್ನು ಪ್ರಶ್ನಿಸಬೇಕು. ನಳಿನಿ ದೇಶದ್ರೋಹಿ ಅಥವಾ ದೇಶದ್ರೋಹಿಯಲ್ಲ ಎಂಬುವುದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ನಳಿನಿ ಪರ ವಕಾಲತ್ತು ವಹಿಸಿದ್ದೇವೆ, ಈಗ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದರು. ನಾವು ಮೈಸೂರು ವಕೀಲರ ಸಂಘದ ತೀರ್ಮಾನದ ಕುರಿತು ಮಾತನಾಡುವುದಿಲ್ಲ. ನಾವೆಲ್ಲರೂ ಅಣ್ಣತಮ್ಮಂದಿರಿದ್ದಂತೆ. ನಮ್ಮ ವೃತ್ತಿ ಧರ್ಮ ನಾವು ಪಾಲಿಸುತ್ತಿದ್ದೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ