ಆ್ಯಪ್ನಗರ

ಎರಡೇ ಬೆರಳಿನ ಕೀ ಬೋರ್ಡ್‌ ಸಾಧಕನಿಗೆ ಒಲಿದ ವಿಶೇಷ ಪ್ರಶಸ್ತಿ..! ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಮೈಸೂರಿನ ಅಪರೂಪದ ಸಾಧಕನಿಗೆ ಈ ಬಾರಿಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ ಒಲಿದಿದೆ. ಎರಡೇ ಬೆರಲ್ಲಿ ಕೀ ಬೋರ್ಡ್‌ ನುಡಿಸುವ ಗಣೇಶ ಈಶ್ವರ್‌ ಭಟ್‌ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ಅವರ ಸಾಧನೆಗೆ ಅಂಗವೈಕಲ್ಯ ಅಡ್ಡಿಬಂದಿಲ್ಲ.

Vijaya Karnataka Web 2 Jan 2021, 12:35 pm
ಮೈಸೂರು: ತಮಗಿದ್ದ ವೈಕಲ್ಯ ಮೆಟ್ಟಿ ನಿಂತು ಎರಡು ಬೆರಳಿನಲ್ಲೇ ಕೀ ಬೋರ್ಡ್‌ ನುಡಿಸುವ ಅಪರೂಪದ ಸಾಧಕ ಮೈಸೂರಿನ ಗಣೇಶ ಈಶ್ವರ್‌ ಭಟ್‌ ಅವರಿಗೆ ಈ ಬಾರಿಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವರ್ಷದ ವಿಶೇಷ ಪ್ರಶಸ್ತಿ ಒಲಿದಿದೆ.
Vijaya Karnataka Web Ganesh Ishwar Bhat
ಗಣೇಶ ಈಶ್ವರ್‌ ಭಟ್‌, ಕೀ‌ ಬೋರ್ಡ್ ವಾದಕ (ಸಂಗ್ರಹ ಚಿತ್ರ)


ನಗರದ ಗಂಗೋತ್ರಿ ಬಡಾವಣೆಯ ನಿವಾಸಿ ಗಣೇಶ ಈಶ್ವರ್‌ ಭಟ್‌ ಅವರಿಗೆ ಹುಟ್ಟಿನಿಂದಲೇ ಎರಡು ಕೈಗಳಲ್ಲಿ ಎರಡೇ ಬೆರಳಿವೆ. ಇದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡ ಅವರು ಬೆರಳುಗಳೇ ಪ್ರಧಾನವಾಗಿ ಬೇಕಿರುವ ಕೀ ಬೋರ್ಡ್‌ ವಾದ್ಯ ಸಿದ್ಧಿಸಿಕೊಂಡರು. 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಗಣೇಶ ಈಶ್ವರ್‌ ಭಟ್‌ ಅವರನ್ನು ಗುರುತಿಸಿ ರಾಜ್ಯ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2021ನೇ ಸಾಲಿನ ವರ್ಷದ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಫೆಬ್ರವರಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈಶ್ವರ್‌ ಭಟ್‌ ಮೂಲತಃ ಉತ್ತರ ಕನ್ನಡದ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದವರು. ಇವರ ತಂದೆ ಸಂಗೀತ ಶಿಕ್ಷಕರು. ಸಂಗೀತದ ಕುಟುಂಬ ಪರಿಸರದಿಂದ ಸಾಮಾನ್ಯವಾಗಿಯೇ ಹಿಂದೂಸ್ತಾನಿ ಸಂಗೀತ ಕಲಿತರು. ತರುವಾಯು ವ್ಯಾಸಂಗಕ್ಕಾಗಿ ಮೈಸೂರಿನ ಜೆಎಸ್‌ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ಕಾಲೇಜಿಗೆ ಸೇರಿದರು. ಶಿಕ್ಷಣದ ನಂತರ ಮೈಸೂರಿನಲ್ಲೇ ನೆಲೆಸಿದರು.

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಆರ್.ಪಿ. ಅಸುಂಡಿ, ರಮಾ ಅರವಿಂದ ಆಯ್ಕೆ

ಹಿಂದೂಸ್ತಾನಿ ಗಾಯನ ಮೈಗೂಡಿಸಿಕೊಂಡಿದ್ದ ಅವರು, ತಮಗೆ ಸವಾಲಾಗಿರುವ ಕೀಬೋರ್ಡ್‌ ಕಲಿಯಬೇಕೆಂದು ಛಲ ಬಿಡದೆ ಅಭ್ಯಸಿಸಿ ಕರಗತ ಮಾಡಿಕೊಂಡರು. ನೂರಾರು ವೇದಿಕೆಗಳಲ್ಲಿ ಕಾರ‍್ಯಕ್ರಮ ನೀಡುವ ಮೂಲಕ ಗಮನ ಸೆಳೆದರು. ಗಾಯಕರಾದ ಅಶ್ವಥ್‌, ಶಂಕರ್‌ ಶಾನುಭೋಗ್‌, ಬಿ.ಕೆ.ಸುಮಿತ್ರ ಮುಂತಾದವರ ಸಂಗೀತಕ್ಕೆ ಕೀ ಬೋರ್ಡ್‌ ಸಾಥ್‌ ನೀಡಿದ್ದಾರೆ.

ಮೈಸೂರು: ಚುಂಚನಕಟ್ಟೆ ದನದ ಜಾತ್ರೆ ರದ್ದತಿಗೆ ವಿರೋಧ..! ಸರಳವಾಗಿಯಾದರೂ ನಡೆಸಲು ಒತ್ತಾಯ

ನೂರಕ್ಕೂ ಹೆಚ್ಚಿನ ಧ್ವನಿ ಸುರುಳಿಗಳಿಗೆ ವಾದ್ಯ ಸಂಯೋಜನೆ ಮಾಡಿದ್ದಾರೆ. ಶಂಭೋ ಮಹಾದೇವ ಎಂಬ ಚಲನಚಿತ್ರ ಮತ್ತು ನಂಜನಗೂಡು ಶ್ರೀಕಂಠೇಶ್ವರ ಮಹಾತ್ಮೆ ಕಿರುಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಭಾರತ ಸರಕಾರದಿಂದ ರಾಷ್ಟ್ರಪತಿ ಪ್ರಶಸ್ತಿ, ರಾಜ್ಯ ಸರಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಮೈಸೂರು: ಜಿಲ್ಲೆಯ 3 ಕೇಂದ್ರಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್‌‌..! ತಲಾ 25 ಮಂದಿಗೆ ಅಣಕು ವ್ಯಾಕ್ಸಿನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ