ಆ್ಯಪ್ನಗರ

ದಸರೆಗೆ ಹಾಫ್‌ ಮ್ಯಾರಥಾನ್‌ ರಂಗು

ಬೆಳಗಿನ ಚುಮುಚುಮು ಚಳಿ, ಡಿಜೆ ಸೌಂಡ್‌ನಿಂದ ಉತ್ಸುಕರಾದ ಯುವ ಸಮೂಹ ನಗರದ ಪ್ರಮುಖ ರಸ್ತೆಗಳಲ್ಲಿ ಓಡಿ ದಸರೆಗೆ ರಂಗು ತಂದರು.

Vijaya Karnataka Web 25 Sep 2017, 5:15 am

ಮೈಸೂರು: ಬೆಳಗಿನ ಚುಮುಚುಮು ಚಳಿ, ಡಿಜೆ ಸೌಂಡ್‌ನಿಂದ ಉತ್ಸುಕರಾದ ಯುವ ಸಮೂಹ ನಗರದ ಪ್ರಮುಖ ರಸ್ತೆಗಳಲ್ಲಿ ಓಡಿ ದಸರೆಗೆ ರಂಗು ತಂದರು.

ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮ್ಯಾರಾಥಾನ್‌ಗೆ ಯುವಜನರು ಉತ್ಸಾಹದಿಂದ ಆಗಮಿಸಿದರು.

ಮೈಸೂರು ವಿಶ್ವವಿದ್ಯಾಲಯದ ಓವೆಲ್‌ ಮೈದಾನದಲ್ಲಿ ಭಾನುವಾರ ಬೆಳಗ್ಗೆ ಮ್ಯಾರಥಾನ್‌ಗೆ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ನವನೀತ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟ್‌ ರೀನಾ 13ನೇ ಮೈಸೂರು ದಸರಾ ಹಾಫ್‌ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರೊಂದಿಗೆ ಮ್ಯಾರಥಾನ್‌ ನಡೆಸಿದರು. ರಂದೀಪ್‌ ಅವರು 10 ಕಿ.ಮೀ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದರು.

ಗದಗ, ಬೆಲ್ಲಕೆರೆ, ಬೆಂಗಳೂರು, ಮೈಸೂರು, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ, ಬೇಗೂರು, ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗ ಹಾಗೂ ಹೊರ ರಾಜ್ಯದ 3500 ಕ್ಕೂ ಅಧಿಕ ಮಂದಿ 6 ವಿಭಾಗಗಳಲ್ಲಿ ಪಾಲ್ಗೊಂಡರು.

21. ಕಿ.ಮೀ. ಓಟವು ಓವೆಲ್‌ ಮೈದಾನದಿಂದ ಪ್ರಾರಂಭಗೊಂಡು ಹುಣಸೂರು ರಸ್ತೆ, ಕೆಆರ್‌ಎಸ್‌ ರಸ್ತೆ, ಹಿನಕಲ್‌ ರಿಂಗ್‌ ರಸ್ತೆ, ಬೋಗಾದಿ ರಿಂಗ್‌ ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ ಮೂಲಕ ಅಗ್ನಿ ಶಾಮಕ ಠಾಣೆ ಬಳಿಯಿಂದ ಓವೆಲ್‌ ಮೈದಾನದಲ್ಲಿ ಕೊನೆಗೊಂಡಿತು. 10ಕೆ ಮ್ಯಾರಥಾನ್‌ ಓವೆಲ್‌ ಮೈದಾನದಿಂದ ಆರಂಭಗೊಂಡು ಹುಣಸೂರು ರಸ್ತೆ, ಪ್ರೀಮಿಯರ್‌ ಸ್ಟುಡಿಯೊ, ಎಸ್‌ಜೆಸಿಇ, ಮಾನಸ ಗಂಗೋತ್ರಿ ಕ್ಯಾಂಪಸ್‌, ಕುಕ್ಕರಹಳ್ಳಿ ಕೆರೆ ರಸ್ತೆ ಮೂಲಕ ಓವೆಲ್‌ ಮೈದಾನ, 3ಕೆ ಮ್ಯಾರಥಾನ್‌ ಹುಣಸೂರು ರಸ್ತೆ, ಮಾನಸಗಂಗೋತ್ರಿ ಮೂಲಕ ಓವೆಲ್‌ ಮೈದಾನದಲ್ಲಿ ಕೊನೆಗೊಂಡಿತು.

ಝೇಂಕರಿಸಿದ ಡಿಜೆ: ಭಾಗವಹಿಸಿದವರಲ್ಲಿ ಹುಮ್ಮಸ್ಸು ತುಂಬುವ ಸಲುವಾಗಿ ಡಿಜೆ ಮ್ಯೂಸಿಕ್‌ ಏರ್ಪಡಿಸಲಾಗಿತ್ತು. ಓವೆಲ್‌ ಮೈದಾನದಿಂದ ಸುತ್ತಮುತ್ತಲ 2 ಕಿ.ಮೀ. ಪ್ರದೇಶಗಳಿಗೆ ಡಿಜೆ ಸಂಗೀತ ಝೇಂಕರಿಸಿತು. ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದ ಯುವ ಸಮೂಹಕ್ಕೆ ಲವಲವಿಕೆ ಮೂಡಿಸುವಲ್ಲಿ ಡಿಜೆ ಯಶಸ್ವಿಯಾಯಿತು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

---

ವಿಜೇತರ ಪಟ್ಟಿ

---

ಓಟ 21. ಕಿ.ಮೀ.

ಪುರುಷರ ವಿಭಾಗ

---

ಸ್ಥಾನ ಹೆಸರು- ಊರು- ಕ್ರಮಿಸಿದ ಸಮಯ

1.ಗೋವಿಂದಸಿಂಗ್‌ - ಊಟಿ - 1.7 ಗಂಟೆ

2.ಪರ್ವಿಶ್‌- ಬೆಂಗಳೂರು-1.8.

3.ನಾಗೇಶ್‌ ಪಾವರ್‌-ಬಿಜಾಪುರ- 1.8

4.ಪ್ರವೀಣ್‌ ಕಂಬೈ-ಬೆಂಗಳೂರು- 1.8

5.ಕುಲಪುದಿಯಾರಿ-ಊಟಿ-1.8

---

ಮಹಿಳೆಯರ ವಿಭಾಗ

1.ಅಕ್ಷತಾ ಎ-ದಾವಣಗೆರೆ- 1.25

2.ಕುಮಾರಿ ಮಮತ- ಬೆಂಗಳೂರು -1.27

3.ಕವನ-ಮೈಸೂರು-1.36.

4.ಅಶ್ವಿನಿ-ಮೈಸೂರು- 1.37.

---

10 ಕಿ.ಮೀ ಓಟ

ಹುಡುಗರ ವಿಭಾಗ

1.ಮಹಾಕುಟೇಶ್ವರ- ಬಾದಾಮಿ, 34.15 ನಿ.

2.ಚೇತನ್‌ -ಮೈಸೂರು-35.45

3.ಮಲ್ಲೇಶ್‌ ಪಾಟೀಲ್‌ - ಬೆಳಗಾಂ -36.20

---

6 ಕಿ.ಮೀ ಓಟ

ಮಹಿಳೆಯರ ವಿಭಾಗ

1.ಸ್ವಪ್ನ -ಬೆಂಗಳೂರು- 22.41 ನಿ.

2.ಚೈತ್ರ ದೇವಾಂಗ್‌- 22.51

3.ತಿಪ್ಪವ್ವ ಸಣ್ಣಕ್ಕಿ -ಮೈಸೂರು- 22.58

---

3 ಕಿ.ಮೀ ಓಟ

ಬಾಲಕರ ವಿಭಾಗ

1.ರಾಹುಲ್‌ ಎಸ್‌.ಆರ್‌.- ಮೈಸೂರು-10.25 ನಿ.

2.ಹೇಮಂತ್‌ ಎಚ್‌.ಎಸ್‌- ಕೆ.ಆರ್‌.ನಗರ-10.50

3.ವಿಠ್ಠಲ-ಆಳ್ವಾಸ್‌-11.25

---

3 ಕಿ.ಮೀ ಓಟ

ಬಾಲಕಿಯರ ವಿಭಾಗ

1.ಮಾಲಾಶ್ರೀ- ಆಳ್ವಾಸ್‌-13.10 ನಿ.

2.ರಾಶಿ-ಕೊಡಗು-13.30

3.ಚೈತ್ರ-ತಿ.ನರಸೀಪುರ -13.40

Vijaya Karnataka Web half marathon dye for dusk
ದಸರೆಗೆ ಹಾಫ್‌ ಮ್ಯಾರಥಾನ್‌ ರಂಗು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ