ಆ್ಯಪ್ನಗರ

ಎಚ್‌ಸಿವಿ ಸೋಂಕು: ವಾರದಲ್ಲಿ ಪರೀಕ್ಷಾ ವರದಿ

ನಿಖರವಾದ ಚಿಕಿತ್ಸೆ ನೀಡುವ ಹಾಗೂ ಹೆಪಟೈಟಿಸ್‌ ಸಿ ವೈರಸ್‌ (ಎಚ್‌ಸಿವಿ)ಸೋಂಕು ಯಾವ ಮೂಲದಿಂದ ಹರಡಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ರಕ್ತದ ಮಾದರಿಯನ್ನು ಉಡುಪಿಯ ಮಣಿಪಾಲ್‌ ಆಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಒಂದು ವಾರದೊಳಗೆ ವರದಿ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌. ವೆಂಕಟೇಶ್‌ ತಿಳಿಸಿದರು.

Vijaya Karnataka 29 Jun 2019, 5:00 am
ಮೈಸೂರು: ನಿಖರವಾದ ಚಿಕಿತ್ಸೆ ನೀಡುವ ಹಾಗೂ ಹೆಪಟೈಟಿಸ್‌ ಸಿ ವೈರಸ್‌ (ಎಚ್‌ಸಿವಿ)ಸೋಂಕು ಯಾವ ಮೂಲದಿಂದ ಹರಡಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ರಕ್ತದ ಮಾದರಿಯನ್ನು ಉಡುಪಿಯ ಮಣಿಪಾಲ್‌ ಆಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಒಂದು ವಾರದೊಳಗೆ ವರದಿ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌. ವೆಂಕಟೇಶ್‌ ತಿಳಿಸಿದರು.
Vijaya Karnataka Web hcv infectiontest report within weekly
ಎಚ್‌ಸಿವಿ ಸೋಂಕು: ವಾರದಲ್ಲಿ ಪರೀಕ್ಷಾ ವರದಿ


''ಎಚ್‌ಸಿವಿ ಸೋಂಕಿನಿಂದ ತಕ್ಷಣಕ್ಕೆ ಯಾವುದೇ ಅಪಾಯಕಾರಿ ಪರಿಣಾಮವಾಗುವುದಿಲ್ಲ. ಮಾತ್ರವಲ್ಲದೆ ಈ ವೈರಾಣುವಿಗೆ ಪೂರ್ಣಪ್ರಮಾಣದ ಚಿಕಿತ್ಸೆ ಇದೆ. ಹಾಗಾಗಿ ಸೋಂಕಿತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ,'' ಎಂದರು.

''ಈಗ ನಮ್ಮ ಬಳಿ ಇರುವುದು ಖಾಸಗಿಯವರು ನೀಡಿರುವ ವರದಿಗಳಾಗಿದ್ದು, ಅದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಹಾಗಾಗಿ ಮಣಿಪಾಲ್‌ ಪರೀಕ್ಷಾ ಕೇಂದ್ರದಲ್ಲಿ, ಎಷ್ಟು ಪ್ರಮಾಣದ ಸೋಂಕು ಹರಡಿದೆ, ಅದಕ್ಕೆ ಎಷ್ಟು ಪ್ರಮಾಣದ ಚಿಕಿತ್ಸೆ ನೀಡಬಹುದು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ಸೋಂಕು ಯಾವ ಮಾದರಿಯದ್ದಾಗಿದೆ ಎಂದು ತಿಳಿದುಕೊಳ್ಳುವುದಲ್ಲದೆ, ಅದು ಹೇಗೆ ಹರಡಿದೆ ಎಂಬುದನ್ನು ಸಹ ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ಪರೀಕ್ಷೆ ಸಹಕಾರಿಯಾಗುತ್ತದೆ. ಈ ಕಾರಣಕ್ಕಾಗಿಯೇ ಉನ್ನತ ಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದೆ,'' ಎಂದರು.

ತಂಡ ರವಾನೆಗೆ ಮನವಿ: ಗುರುವಾರ ರಕ್ತದ ಮಾದರಿಯನ್ನು ಮಣಿಪಾಲ್‌ ಆಸ್ಪತ್ರೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಒಂದು ವಾರದಲ್ಲಿ ವರದಿ ಬರಲಿದೆ. ಅದನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮಣಿಪಾಲ್‌ ಆಸ್ಪತ್ರೆಯ ಸಂಶೋಧನಾ ಕೇಂದ್ರದಿಂದ ತಜ್ಞರ ತಂಡವೊಂದನ್ನು ಕೆ.ಆರ್‌.ನಗರಕ್ಕೆ ಕಳುಹಿಸಿಕೊಟ್ಟು ಘಟನೆಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ಸಹಕರಿಸುವಂತೆ ಅಲ್ಲಿನ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ