ಆ್ಯಪ್ನಗರ

ಭಾರಿ ಮಳೆ : ಮನೆಗಳಿಗೆ ನುಗ್ಗಿದ ನೀರು

ಪಿರಿಯಾಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಪಟ್ಟಣದ ರುದ್ರಪ್ಪ ಬಡಾವಣೆಯ ಹಲವು ಮನೆಗಳು ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ಪರದಾಡುವಂತಾಯಿತು.

Vijaya Karnataka 28 Sep 2018, 5:00 am
ಪಿರಿಯಾಪಟ್ಟಣ: ಪಿರಿಯಾಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಪಟ್ಟಣದ ರುದ್ರಪ್ಪ ಬಡಾವಣೆಯ ಹಲವು ಮನೆಗಳು ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ಪರದಾಡುವಂತಾಯಿತು.
Vijaya Karnataka Web heavy rain water flowing to homes
ಭಾರಿ ಮಳೆ : ಮನೆಗಳಿಗೆ ನುಗ್ಗಿದ ನೀರು


ಪಟ್ಟಣದಲ್ಲಿ ಸಂಜೆ 6.30 ಗಂಟೆಯ ವೇಳೆಗೆ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಇದರಿಂದ ಪುಷ್ಪ ಕಾನ್ವೆಂಟ್‌ ರಸ್ತೆಯಲ್ಲಿ ಇರುವ ಕಟ್ಟೆಯೊಂದು ತುಂಬಿದ್ದು , ಇದರಿಂದ ಬಂದ ನೀರು ಏಕಾಏಕಿ ರುದ್ರಪ್ಪ ಬಡಾವಣೆಯ ಮನೆಗಳಿಗೆ ನುಗ್ಗಿದೆ. ಬ್ಯಾಂಕ್‌ ಪ್ರಕಾಶ್‌ ಮನೆ, ಲಾಯರ್‌ ಮಹದೇವಪ್ಪ ಅವರ ಮನೆ, ಸಂತೋಷ್‌, ಈರಣ್ಣ ಎಂಬುವವರ ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದವರು ಗಾಬರಿಗೊಂಡು ಮನೆಯಿಂದ ಹೊರಬೇಕಾಯಿತು. ರುದ್ರಪ್ಪ ಬಡಾವಣೆಯ ಹಲವು ಚರಂಡಿಗಳು ನೀರು ತುಂಬಿಕೊಂಡಿದ್ದರಿಂದ ರಸ್ತೆಗಳ ಮೇಲೆ ನೀರು ಹರಿದು ಚರಂಡಿಗಳು ತುಂಬಿ ಹರಿದವು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಈ ರೀತಿ ತೊಂದರೆ ಉಂಟಾಗಿದೆ.

ಪುರಸಭಾ ಸದಸ್ಯ ಭೇಟಿ : ಸ್ಥಳಕ್ಕೆ ನೂತನ ಪುರಸಭೆ ಸದಸ್ಯ ಕೆ.ಮಹೇಶ್‌ ಭೇಟಿ ನೀಡಿ ರುದ್ರಪ್ಪ ಬಡಾವಣೆಯಲ್ಲಿ ಉಂಟಾಗಿರುವ ತೊಂದರೆಯ ಬಗ್ಗೆ ಪುರಸಭೆ ಅಧ್ಯಕ್ಷ ಡಿ.ಪುಟ್ಟರಾಜು ಮತ್ತು ಶಾಸಕ ಕೆ.ಮಹದೇವ್‌ ಅವರೊಂದಿಗೆ ದೂರವಾಣಿ ಮೂಲಕ ತೊಂದರೆ ವಿವರಿಸಿದ್ದಾರೆ. ಬಡಾವಣೆಗೆ ಅಗತ್ಯ ವಿರುವ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ಕಟ್ಟೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

ರಸ್ತೆ ಬಂದ್‌ : ಪಿರಿಯಾಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಕಿರನಲ್ಲಿ ಬಳಿ ಬಾರಿಗಾತ್ರದ ಮರವೊಂದು ಉರುಳಿಬಿದ್ದು , ಕೆಲವು ಸಮಯ ಕಾಲ ಸಂಚಾರ ಬಂದ್‌ ಆಗಿತ್ತು. ತದ ನಂತರ ಮರವನ್ನು ತೆರುವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ