ಆ್ಯಪ್ನಗರ

ಪಾರಂಪರಿಕ ಕಟ್ಟಡ: ಜನರೊಂದಿಗೆ ಚರ್ಚಿಸಿ ನಿರ್ಧಾರ

ಪಾರಂಪರಿಕ ಕಟ್ಟಡದ ಅಭದ್ರತೆ ಸರಿಪಡಿಸಲು ಸದ್ಯದಲ್ಲೇ ಜಿಲ್ಲೆಯ ನಾಗರಿಕರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Vijaya Karnataka 20 Feb 2019, 5:00 am
ಮೈಸೂರು : ಪಾರಂಪರಿಕ ಕಟ್ಟಡದ ಅಭದ್ರತೆ ಸರಿಪಡಿಸಲು ಸದ್ಯದಲ್ಲೇ ಜಿಲ್ಲೆಯ ನಾಗರಿಕರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.
Vijaya Karnataka Web heritage build discuss with people
ಪಾರಂಪರಿಕ ಕಟ್ಟಡ: ಜನರೊಂದಿಗೆ ಚರ್ಚಿಸಿ ನಿರ್ಧಾರ


ಮಂಗಳವಾರ ಬೆಳಗ್ಗೆ ಮೈಸೂರಿನ ಹೃದಯ ಭಾಗದ ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

''ಲ್ಯಾನ್ಸ್‌ಡೌನ್‌ ಕಟ್ಟಡ, ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡಗಳಾಗಿದ್ದು, ಇವುಗಳ ಜತೆಯಲ್ಲಿ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ನಾನು ಏಕಾಏಕಿ ನಿರ್ಧಾರ ಕೈಗೊಳ್ಳುವುದಿಲ್ಲ. ಇಂದು ಕಟ್ಟಡ ವೀಕ್ಷ ಣೆ ಮಾಡಿದ್ದೇನೆ. ಕಟ್ಟಡ ನೆಲಸಮ ಮಾಡುವ ಸಂಬಂಧ ಯಾವುದೇ ವರದಿ ನನ್ನ ಕೈ ಸೇರಿಲ್ಲ. ನಾನು ಕಟ್ಟಡವನ್ನು ಖುದ್ದು ವೀಕ್ಷ ಣೆ ಮಾಡಿದ್ದೇನೆ. ಅಲ್ಲಲ್ಲಿ ಕಟ್ಟಡ ಶಿಥಿಲವಾಗಿದೆ. ಹೀಗಾಗಿ ಸದ್ಯದಲ್ಲೇ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಗರಿಕರ ಸಭೆ ಕರೆದು ಸಾಧಕ-ಬಾಧಕಗಳನ್ನು ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ,'' ಎಂದು ತಿಳಿಸಿದರು.

ಸಿಎಂ ಭೇಟಿ ಏಕೆ?

ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್‌ ಕಟ್ಟಡ ಪುನರ್‌ ನಿರ್ಮಿಸುವ ಕುರಿತು ಭಿನ್ನಾಭಿಪ್ರಾಯವಿದೆ.

ಎಂಜಿನಿಯರ್‌ಗಳನ್ನು ಒಳಗೊಂಡ ಸಮಿತಿ ''ಈ ಕಟ್ಟಡಗಳು ತುಂಬಾ ಹಳೆಯದಾಗಿರುವುದರಿಂದ ಅವುಗಳನ್ನು ಕೆಡವಿ ಹೊಸದಾಗಿ ನಿರ್ಮಿಸಬೇಕು,'' ಎಂದು ವರದಿ ನೀಡಿದೆ. ಪಾರಂಪರಿಕ ತಜ್ಞರನ್ನು ಒಳಗೊಂಡ ಮತ್ತೊಂದು ತಂಡ ''ಈ ಕಟ್ಟಡವನ್ನು ಇರುವ ಸ್ಥಿತಿಯಲ್ಲೇ ಉಳಿಸಿಕೊಂಡು ಜೀರ್ಣೋದ್ಧಾರಗೊಳಿಸಬೇಕು,'' ಎಂದು ವರದಿ ನೀಡಿದೆ. ಪಾಲಿಕೆ ಕೌನ್ಸಿಲ್‌ ಸಭೆಯು ಕಟ್ಟಡವನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ, ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಶಿಫಾರಸು ಮಾಡಿದೆ. ಪಾಲಿಕೆಯ ಈ ನಿರ್ಧಾರಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಏನೇನು ಕಾಮಗಾರಿ?

ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸುವುದು. (ಮುಖ್ಯಮಂತ್ರಿಗಳ 100 ಕೋಟಿ ರೂ. ವಿಶೇಷ ಅನುದಾನದಡಿ ಪಾರಂಪರಿಕ ಕಟ್ಟಡಗಳು ಹಾಗೂ ವೃತ್ತಗಳ ಅಭಿವೃದ್ಧಿ-2014)

ದೇವರಾಜ ಮಾರುಕಟ್ಟೆ ವಿವರ: ದೇವರಾಜ ಮಾರುಕಟ್ಟೆಯನ್ನು 1886ರಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದರು.(133 ವರ್ಷ)

ವಿಸ್ತೀರ್ಣ: 14887.10 ಚ.ಮೀ.(3.67 ಎಕರೆ), ಮಾರುಕಟ್ಟೆಯಲ್ಲಿರುವ ಒಟ್ಟು ಮಳಿಗೆಗಳ ಸಂಖ್ಯೆ-724

ಮಂಜೂರಾದ ಅಂದಾಜು ಮೊತ್ತ: 9 ಕೋಟಿ ರೂ.

ಕಾಮಗಾರಿ ಆದೇಶ ಮೌಲ್ಯ: 8,88,03,824 ರೂ.

ಸ್ಥಗಿತಗೊಳಿಸಲು ಕಾರಣ: ದೇವರಾಜ ಮಾರುಕಟ್ಟೆಯ ಉತ್ತರ ಭಾಗದಲ್ಲಿ (2016ರ ಆ.28ರಂದು) ಕಾಮಗಾರಿ ಪ್ರಗತಿಯಲ್ಲಿರುವಾಗಲೆ ಕುಸಿದುಬಿದ್ದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ