ಆ್ಯಪ್ನಗರ

Crocodile in Mysuru: ಮೈಸೂರಲ್ಲಿ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸೆರೆ; ಜನರು ನಿರಾಳ

ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ. ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿ ಚರಂಡಿ ನೀರಿನಲ್ಲಿ ಕಣ್ಣಾಮುಚ್ಚಾಲೆ ಹಾಡುತ್ತಿದ್ದ ಮೊಸಳೆಯನ್ನು ಅರಣ್ಯ ಇಲಾಖೆ, ಮೈಸೂರು ಮೃಗಾಲಯ, ಪಾಲಿಕೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಕರುವನ್ನು ಎಳೆದೊಯ್ದಿದ್ದ ಮೊಸಳೆ ಬಲೆಗೆ ಬಿದ್ದಿದ್ದು, ಕಬಿನಿ ಜಲಾಶಯದಲ್ಲಿ ಸುರಕ್ಷಿತವಾಗಿ ಬಿಡಲಾಗುತ್ತದೆ.

Edited byಅವಿನಾಶ ವಗರನಾಳ | Vijaya Karnataka Web 17 Nov 2022, 11:07 pm
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಕಳೆದ ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ. ಅರಣ್ಯ ಇಲಾಖೆ, ಮೈಸೂರು ಮೃಗಾಲಯ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯರ ನೆರವಿನಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಗುರುವಾರ ನಡೆದ ಇಡೀ ದಿನದ ಕಾರ್ಯಾಚರಣೆಯಲ್ಲಿ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ಮೊಸಳೆ ಸೆರೆ ಸಿಕ್ಕಿದೆ.
Vijaya Karnataka Web Crocodile


ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿ ಚರಂಡಿ ನೀರಿನಲ್ಲಿ ಕಳೆದ ಒಂದು ತಿಂಗಳಿಂದ ಹತ್ತಾರು ಬಾರಿ ಕಾಣಿಸಿಕೊಂಡಿದ್ದ ಮೊಸಳೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು.ಕೆಲವು ದಿನಗಳ ಹಿಂದೆ ಕರುವೊಂದನ್ನ ಬಲಿ ಪಡೆದಿತ್ತು. ಮೊಸಳೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ತೀವ್ರ ಒತ್ತಡ ಹೇರಿದ್ದರು. ಅರಣ್ಯಾಧಿಕಾರಿಗಳು ನಡೆಸಿದ ಕೆಲವು ಪ್ರಯತ್ನಗಳು ವಿಫಲವಾಗಿದ್ದವು. ಚಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಾಮುಚ್ಚಾಲೆ ಆಟವಾಡಿಸುತ್ತಿತ್ತು. ಗುರುವಾರ ಕಾರ್ಯಾಚರಣೆಯನ್ನ ತೀವ್ರಗೊಳಿಸಿದ ಸಿಬ್ಬಂದಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕ ರಾಮದಾಸ್ ಸಹ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ್ದರು.ಇದೀಗ ಮೊಸಳೆ ಸೆರೆಸಿಕ್ಕಿದ್ದು ಸ್ಥಳೀಯರಲ್ಲಿ ಆತಂಕ ನಿವಾರಣೆಯಾದಂತಾಗಿದೆ. ಸೆರೆ ಸಿಕ್ಕ ಮೊಸಳೆಯನ್ನ ಕಬಿನಿ ಜಲಾಶಯದಲ್ಲಿ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಾನುಜ ರಸ್ತೆಯ 9ನೇ ಕ್ರಾಸ್‌ ಬಳಿ ಎಲೆತೋಟದಲ್ಲಿ ಆಗಿಂದಾಗ್ಗೆ ಈ ಮೊಸಳೆ ಕಾಣಿಸಿಕೊಳ್ಳುತ್ತಿತ್ತು. ಚರಂಡಿಯಲ್ಲಿ ಹರಿಯುವ ನೀರು ನಿಲ್ಲಿಸಿ, ಇದಕ್ಕೆ ಹೊಂದಿಕೊಂಡಂತೆ ಸೃಷ್ಟಿಯಾಗಿರುವ ಕೊಳಚೆ ನೀರಿನ ಹೊಂಡಗಳನ್ನು ಮುಚ್ಚಿಸಿದಲ್ಲಿ ಮಾತ್ರ ಸೆರೆ ಹಿಡಿದು ಸಂರಕ್ಷಣೆ ಸಾಧ್ಯ ಅಂತ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದರು. ಈಗ ಕಡೆಗೂ ಮೊಸಳೆ ಸೆರೆಯಾಗಿದೆ.

Crocodile In Mysuru - ಮೈಸೂರಲ್ಲಿ ಮೊಸಳೆ ಕಣ್ಣಾಮುಚ್ಚಾಲೆ: 3 ಬಾರಿ ಅರಣ್ಯ ಇಲಾಖೆ ಕಾರ್ಯಾಚರಣೆ ವಿಫಲ
ಜನರು ಗಡ ಗಡ..!
15 ದಿನದಿಂದ ಮೂರು ಬಾರಿ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು. ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದ ವೇಳೆ 2 ಬಾರಿ ತಪ್ಪಿಸಿಕೊಂಡಿತ್ತು. ಎಲೆ ತೋಟದ ರಸ್ತೆ ಸೇತುವೆಯ ಮೇಲೆ ಬಾಯ್ತೆರೆದು ಮಲಗಿರುವ ಚಿತ್ರವನ್ನು ಸ್ಥಳೀಯರು ಇತ್ತೀಚೆಗೆ ಸೆರೆ ಹಿಡಿದಿದ್ದರು. ಜತೆಗೆ ಸೆರೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೂ ದೂರು ನೀಡಿದ್ದರು. ಮೂರು ಬಾರಿ ಮೊಸಳೆ ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನ ವಿಫಲಗೊಂಡಿತ್ತು. ಗುರುವಾರ ಮೊಸಳೆ ಸೆರೆಸಿಕ್ಕಿದೆ.

ಕೆ.ಆರ್.ಎಸ್.ನಲ್ಲಿ ಓಡಾಡುತ್ತಿರುವ ಚಿರತೆ; ಪ್ರವೇಶಕ್ಕೆ ನಿರ್ಬಂಧ; ಚಿರತೆ ಹಿಡಿಯಲು ಹೊಸ ತಂತ್ರ
ಜನರು ನಿರಾಳ..!
ಕಳೆದ ಭಾನುವಾರ ರಾಮಾನುಜ ರಸ್ತೆ 9ನೇ ಕ್ರಾಸ್‌ಗೆ ಹೊಂದಿಕೊಂಡಂತಿರುವ ಎಲೆತೋಟದ ಬಳಿ ಮೇಯುತ್ತಿದ್ದ ಕರು ಮೇಲೆ ದಾಳಿ ಮಾಡಿದ್ದ ಮೊಸಳೆ ಅದನ್ನು ಕೊಂದು ಸಮೀಪದಲ್ಲೇ ನೀರು ತುಂಬಿದ್ದ ಹೊಂಡಕ್ಕೆ ಎಳೆದೊಯ್ದಿತ್ತು. ಈ ಘಟನೆ ನಂತರ ಜನರು ಸಾಕಷ್ಟು ಬೆದರಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೆಚ್ಚಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೂರು ಮೋಟಾರ್‌ ಬಳಸಿ ಹೊಂಡದಲ್ಲಿದ್ದ ನೀರನ್ನು ಹೊರ ಹಾಕುವ ಕೆಲಸಕ್ಕೆ ಮುಂದಾಗಿದ್ದರು. ಗುರುವಾರ ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ಸಂಜೆಯವರೆಗೂ ನಿರಂತರವಾಗಿ ಮುಂದುವರೆಸಲಾಗಿತ್ತು. ಕೊನೆಗೂ ಆಪರೇಷನ್ ಸಕ್ಸಸ್ ಆಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ