ಆ್ಯಪ್ನಗರ

ಹೈದರಾಲಿಯ ಮತ್ತೊಂದು ವ್ಯಕ್ತಿತ್ವ ಪರಿಚಯ: ಶ್ಲಾಘನೆ

ಪ್ರೊ.ಡಿ.ಎಸ್‌.ಅಚ್ಚುತರಾವ್‌ ಅವರು ಲೇಖನಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಾನಸಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೆ.ಸದಾಶಿವ ಶ್ಲಾಘಿಸಿದರು.

ವಿಕ ಸುದ್ದಿಲೋಕ 20 Apr 2017, 9:00 am

-'ಪ್ರೊ.ಡಿ.ಎಸ್‌.ಅಚ್ಚುತರಾವ್‌ರವರ ಬರವಣಿಗೆ ; ವರ್ತಮಾನದಲ್ಲಿ ಅದರ ಪ್ರಸ್ತುತತೆ' ವಿಚಾರ ಸಂಕಿರಣ

Vijaya Karnataka Web hyder another personality introduction acclaim
ಹೈದರಾಲಿಯ ಮತ್ತೊಂದು ವ್ಯಕ್ತಿತ್ವ ಪರಿಚಯ: ಶ್ಲಾಘನೆ

ಮೈಸೂರು: ಪ್ರೊ.ಡಿ.ಎಸ್‌.ಅಚ್ಚುತರಾವ್‌ ಅವರು ಲೇಖನಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಾನಸಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೆ.ಸದಾಶಿವ ಶ್ಲಾಘಿಸಿದರು.

ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗ ಹಾಗೂ ಪ್ರೊ.ಡಿ.ಎಸ್‌.ಅಚ್ಚುತರಾವ್‌ ಅವರ ಶತಮಾನೋತ್ಸವ ಕಾರ್ಯಕ್ರಮ ಸಮಿತಿ ಸಹಯೋಗದಲ್ಲಿ ಬುಧವಾರ ಮಹಾರಾಜ ಕಾಲೇಜು ಜೂನಿಯರ್‌ ಬಿ.ಎ. ಹಾಲ್‌ನಲ್ಲಿ ಆಯೋಜಿಸಿದ್ದ 'ಪ್ರೊ.ಡಿ.ಎಸ್‌.ಅಚ್ಚುತರಾವ್‌ರವರ ಬರವಣಿಗೆ ; ವರ್ತಮಾನದಲ್ಲಿ ಅದರ ಪ್ರಸ್ತುತತೆ ' ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

''ಅಚ್ಚುತರಾವ್‌ ಅವರು ಮೈಸೂರು ಇತಿಹಾಸವನ್ನು ಕುರಿತು ಬರೆದಿರುವ ಪುಸ್ತಕದಲ್ಲಿ 12 ಲೇಖನಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾದ ಈ ಲೇಖನಗಳು ಇತಿಹಾಸದ ದೃಷ್ಟಿಯಿಂದ ಅತ್ಯುಪಯುಕ್ತವಾಗಿವೆ. ಇವರು ಹೈದರಾಲಿಯ ಕುರಿತು ಬರೆದಿರುವ ಲೇಖನವು ಹೈದರಾಲಿಯ ಮತ್ತೊಂದು ವ್ಯಕ್ತಿತ್ವವನ್ನು ತೆರೆದಿಡುತ್ತದೆ. ಹೈದರಾಲಿಯು ಹಿಂದು ಸಂಘ ಸಂಸ್ಥೆಗಳ ಬಗ್ಗೆ ಹೊಂದಿದ್ದ ಗೌರವ, ಶ್ರೀರಂಗಪಟ್ಟಣದ ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ನಾನಾ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಿದ ಬಗ್ಗೆ ಉಲ್ಲೇಖವಿದೆ,'' ಎಂದರು. ಇದಲ್ಲದೆ ಅಚ್ಚುತರಾವ್‌ ಅವರ ಇನ್ನಿತರ ಲೇಖನಗಳು ಹಾಗೂ ಅವುಗಳ ಮಹತ್ವ, ಪ್ರಸ್ತುತತೆ ಕುರಿತು ಮಾಹಿತಿ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ವಿಶ್ವನಾಥ್‌ ಅವರು ಅಚ್ಚುತರಾವ್‌ ಅವರು ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಬಗ್ಗೆ ಪ್ರಕಟಿಸಿರುವ ಲೇಖನಗಳ ಬಗ್ಗೆ, ಪ್ರಾಧ್ಯಾಪಕ ಡಾ.ಸಿ.ಗುರುಸಿದ್ದಯ್ಯ ರಕ್ಷಣೆ ಮತ್ತು ನ್ಯಾಯಾಂಗ ವ್ಯವಸ್ಥೆ ಕುರಿತು, ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್‌.ಅನಿತಾ, ಡಾ.ಆರ್‌.ಡಿ.ಪವಮಾನ ಅವರು ಶಿಕ್ಷಣ ಮತ್ತು ಸಾಹಿತ್ಯ, ಡಾ.ಎಸ್‌.ನರೇಂದ್ರ ಅವರು ಕಲೆ, ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಕುರಿತು ಮಾತನಾಡಿದರು.

ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಶ್ರೀಕಂಠ, ಪ್ರೊ.ಡಿ.ಎಸ್‌.ಅಚ್ಚುತರಾವ್‌ ಶತಮಾನೋತ್ಸವ ಕಾರ್ಯಕ್ರಮಗಳ ಸಮಿತಿ ಸಂಚಾಲಕ ಡಿ.ಎ.ಪ್ರಸನ್ನ, ಸಹಾಯಕ ಪ್ರಾಧ್ಯಾಪಕ ಡಾ.ಆರ್‌.ಡಿ.ಪವಮಾನ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ