ಆ್ಯಪ್ನಗರ

ಮೈಸೂರು ಮಹಾರಾಜರು ಬಿಟ್ಟರೆ ಹೆಚ್ಚು ಲೀಡ್ ಬಂದಿದ್ದು ನನಗೆ, ಅಭಿವೃದ್ಧಿ ಮಾಡಿದ್ದು ನಾನೇ: ಪ್ರತಾಪ್ 'ಸಿಂಹ' ಘರ್ಜನೆ

ಶಾಸಕ ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂಪಾಯಿ ಕೆಲಸ ಅಂತ ಹೇಳ್ತಾರೆ. ಎಲ್ಲಿದೆ 300 ಕೋಟಿ? ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ.

Lipi 29 Jan 2022, 5:27 pm
ಮೈಸೂರು: ಗ್ಯಾಸ್ ಪೈಪ್ ಲೈನ್ ಯೋಜನೆ ವಿಚಾರವಾಗಿ ಮೈಸೂರಲ್ಲಿ ಭುಗಿಲೆದ್ದಿರೋ ಅಸಮಾಧಾನ ಸದ್ಯಕ್ಕೆ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ಬಿಜೆಪಿ vs ಬಿಜೆಪಿಗೆ ಬೇಗುದಿಗೆ ಸಂಸದ ಪ್ರತಾಪ್ ಸಿಂಹ ಮತ್ತೆ ತುಪ್ಪ ಸುರಿದಿದ್ದಾರೆ. ಮೈಸೂರಲ್ಲಿ ಶಾಸಕ ರಾಮದಾಸ್ ಹಾಗೂ ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web i have done development work in mysore more than others says mp pratap simha
ಮೈಸೂರು ಮಹಾರಾಜರು ಬಿಟ್ಟರೆ ಹೆಚ್ಚು ಲೀಡ್ ಬಂದಿದ್ದು ನನಗೆ, ಅಭಿವೃದ್ಧಿ ಮಾಡಿದ್ದು ನಾನೇ: ಪ್ರತಾಪ್ 'ಸಿಂಹ' ಘರ್ಜನೆ


ಮೈಸೂರಲ್ಲಿ ಮಹಾರಾಜರನ್ನ ಬಿಟ್ಟರೆ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದು ನಾನೇ ನಾನೇ. ಹೆಚ್ಚು ಲೀಡ್‌ನಲ್ಲಿ ಜನರು ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ತಮ್ಮಿಂದಲೇ ಮೈಸೂರು ಅಭಿವೃದ್ಧಿ ಆಗ್ತಿರೋದು ಅಂತ ಹೇಳುವುದರ ಮೂಲಕ ಶಾಸಕದ್ವಯರ ವಿರುದ್ಧ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ: ಯೋಜನೆ ಹೆಸರಲ್ಲಿ ರಾಮದಾಸ್ - ಪ್ರತಾಪ್ ಸಿಂಹ ಫೈಟ್..!

ಶಾಸಕ ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂಪಾಯಿ ಕೆಲಸ ಅಂತ ಹೇಳ್ತಾರೆ. ಎಲ್ಲಿದೆ 300 ಕೋಟಿ? ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ. ಚಾಮರಾಜ ಕ್ಷೇತ್ರದ ಕೆ.ಆರ್. ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೋರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್. ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ, ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್‌ ಕೊಟ್ಟರು.

ರಸ್ತೆ ಬಾಳಕೆ ಬರಲ್ಲ..!

ಚಾಮರಾಜ ಕ್ಷೇತ್ರದಲ್ಲಿ ಈಗ ನೀವು ಹಾಕಿರುವ ರಸ್ತೆಗಳು ಒಂದು ವರ್ಷವೂ ಬಳಕೆ ಬರುವುದಿಲ್ಲ. ಸುಮ್ಮನೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಮಾತು ಬರುತ್ತದೆ ಅಂತಾ ಏನೇನೋ ಮಾತಾಡಬೇಡಿ.ಮನೆ ಮನೆಗೆ ಗ್ಯಾಸ್ ಕೊಟ್ಟರು ಅಂತಾ ನಾಗೇಂದ್ರ ಅವರ ಹೆಸರನ್ನೇ ಹೇಳ್ತೀನಿ. ಮೋದಿ ಅವರಿಗಿಂತಲೂ ರಾಮದಾಸ್, ನಾಗೇಂದ್ರ ಅವರು ರಾಜಕೀಯದಲ್ಲಿ ಸಿನೀಯರ್‌. ಅವರಿಬ್ಬರು ಮೋದಿ ಅವರಿಗೆ ಪತ್ರ ಬರೆದು ಈ ಯೋಜನೆ ಸರಿ ಇಲ್ಲ ಅಂತಾ ಪತ್ರ ಬರೆಯಲಿ. ಆಗ ನಾನು ಸುಮ್ಮನಾಗುತ್ತೇನೆ ಎಂದು ಸಂಸದ ಪ್ರತಾಪ್‌ಸಿಂಹ ವಾಗ್ದಾಳಿ ನಡೆಸಿದರು.

ಗ್ಯಾಸ್ ಪೈಪ್‌ಲೈನ್ ಯೋಜನೆ: ಮೈಸೂರಿನಲ್ಲಿ ಸಿಂಹ VS ರಾಮದಾಸ್!

ಇನ್ನೂ ಪಾಲಿಕೆ ಸದಸ್ಯರು, ಶಾಸಕರ ಶ್ರಮದಿಂದ ಸಂಸದ ಪ್ರತಾಪ್ ಸಿಂಹ ಗೆದ್ದಿದ್ದಾರೆಂಬ ಶಾಸಕ ನಾಗೇಂದ್ರ ಹೇಳಿಕೆಗೆ ಟಾಂಗ್ ನೀಡಿದ ಪ್ರತಾಪ್ ಸಿಂಹ, ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ನಾನು ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಜೆಡಿಎಸ್, ಕಾಂಗ್ರೆಸ್‌ನಲ್ಲಿರುವ ಮೋದಿ ಅಭಿಮಾನಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರ ಬೆಂಬಲದಿಂದ ನಾನು ಮರು ಆಯ್ಕೆಯಾಗಿದ್ದೇನೆ. ಶಾಸಕ ನಾಗೇಂದ್ರ ಅವರು ವಾಸಿಸುತ್ತಿರುವ ಕೆ.ಜಿ.ಕೊಪ್ಪಲಿನಲ್ಲಿ ನನಗೆ ಲೀಡ್ ಸಿಕ್ಕಿಲ್ಲ, ಕೆ.ಜಿ.ಕೊಪ್ಪಲಿನಲ್ಲಿ ನನಗೆ ಹಿನ್ನೆಡೆಯಾಗಿದೆ. ಪಾಲಿಕೆ ಚುನಾವಣೆಯಲ್ಲೂ ಕೆ.ಜಿ. ಕೊಪ್ಪಲಿನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಅಲ್ಲಿ ಹರೀಶ್ ಗೌಡ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ನಾಗೇಂದ್ರಗೆ ಸಾಧ್ಯವಾಗಿಲ್ಲ ಎಂದು ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ