ಆ್ಯಪ್ನಗರ

ಜಾವಿದ್‌ನನ್ನು ಪ್ರೀತಿಸಿ ವಿವಾಹವಾಗಿದ್ದೇನೆ: ಅನುಷಾ ಸ್ಪಷ್ಟನೆ

ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಲವ್‌ ಜಿಹಾದ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಅನ್ಯ ಕೋಮಿನ ವ್ಯಕ್ತಿಯನ್ನು ಮದುವೆಯಾದ ಅನುಷಾ, ನಾನು ಯಾವುದೇ ಲವ್‌ ಜಿಹಾದ್‌ಗೆ ಸಿಲುಕಿಲ್ಲ. ಇಷ್ಟಪಟ್ಟೇ ಜಾವಿದ್‌ ಅವರನ್ನು ವಿವಾಹವಾಗಿರುವುದಾಗಿ ಹೇಳಿದ್ದಾರೆ.

Vijaya Karnataka 20 Dec 2017, 5:00 am

ಮೈಸೂರು: ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಲವ್‌ ಜಿಹಾದ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಅನ್ಯ ಕೋಮಿನ ವ್ಯಕ್ತಿಯನ್ನು ಮದುವೆಯಾದ ಅನುಷಾ, ನಾನು ಯಾವುದೇ ಲವ್‌ ಜಿಹಾದ್‌ಗೆ ಸಿಲುಕಿಲ್ಲ. ಇಷ್ಟಪಟ್ಟೇ ಜಾವಿದ್‌ ಅವರನ್ನು ವಿವಾಹವಾಗಿರುವುದಾಗಿ ಹೇಳಿದ್ದಾರೆ.

ಮೈಸೂರಿನ ರಾಜೀವ್‌ ನಗರದಲ್ಲಿರುವ ಜಾವಿದ್‌ ಅವರ ಮನೆಯಲ್ಲಿರುವ ಅನುಷಾ, ಪೋಷಕರ ವಿರುದ್ಧವೇ ತಿರುಗಿ ಬಿದ್ದಿದ್ದು, ''ನಾನು ಜಾವಿದ್‌ ಅವರನ್ನು ವಿವಾಹವಾಗಿ ನೆಮ್ಮದಿಯಿಂದ ಇದ್ದೇನೆ,'' ಎಂದು ತಿಳಿಸಿದ್ದಾರೆ.

''ನಾನು ಸ್ವ ಇಚ್ಛೆಯಿಂದಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ. ನನಗೆ ಜಾವಿದ್‌ ಯಾವುದೇ ರೀತಿ ತೊಂದರೆ ನೀಡಿಲ್ಲ. ನಾನೇ ಅವರನ್ನು ಕಾಡಿ ಮದುವೆಯಾಗಿದ್ದೇನೆ. ಮದುವೆಯಾಗದಿದ್ದರೆ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಬೆದರಿಸಿದ್ದೆ. ನಾನು ಯಾರ ಒತ್ತಡದಿಂದ ಜಾವಿದ್‌ ಅವರನ್ನು ವಿವಾಹವಾಗಿಲ್ಲ. ಇದು ಲವ್‌ ಜಿಹಾದ್‌ ಕೂಡ ಇಲ್ಲ. ನಮ್ಮದು ಪ್ರೇಮ ವಿವಾಹ,'' ಎಂದು ಹೇಳಿದ್ದಾರೆ.

''ಜಾವಿದ್‌ಗೆ ಎರಡು ಮದುವೆ ಆಗಿರೋದು ಗೊತ್ತಿದ್ದೇ ವಿವಾಹವಾಗಿದ್ದೇನೆ. ನನ್ನ ಪಾಲಿಗೆ ಹೆತ್ತವರು ಇಲ್ಲ. ನನಗೆ ಗೊತ್ತಿಲ್ಲದೇ ಅಬಾರ್ಷನ್‌ ಮಾಡಿಸಿದ್ದಾರೆ. ಅವರನ್ನು ನೋಡಲು ನನಗೆ ಇಷ್ಟವಿಲ್ಲ. ನಾನು ಪತಿ ಜಾವಿದ್‌ನೊಂದಿಗೆ ನೆಮ್ಮದಿಯಿಂದ ಇದ್ದೇನೆ,'' ಎಂದು ಹೇಳಿದ್ದಾರೆ.

''ಒಂದು ವರ್ಷ ಸುಮ್ಮನಿದ್ದ ಅನುಷಾ ಪೋಷಕರು ಈಗ ಯಾಕೆ ವಿವಾದ ಮಾಡುತ್ತಿದ್ದಾರೆ ತಿಳಿದಿಲ್ಲ. ನಾನು ಮೊದಲು ಮದುವೆ ಆಗಿರೋದು ಅನುಷಾಗೆ ಗೊತ್ತು, ಕಾನೂನು ರೀತಿ ವಿಚ್ಛೇದನ ಪಡೆದು ಮದುವೆಯಾಗಿದ್ದೇನೆ. ಇದು ಯಾವುದೇ ಲವ್‌ ಜಿಹಾದ್‌ ಅಲ್ಲ. ಆಕೆಯೇ ಇಷ್ಟುಪಟ್ಟು ಮದುವೆಯಾಗಿದ್ದಾಳೆ,'' ಎಂದು ಅನುಷಾ ಪತಿ ಜಾವಿದ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ