ಆ್ಯಪ್ನಗರ

ಮೈಸೂರು ಸೇರಿದಂತೆ 26 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ

ಮೈಸೂರು ಸೇರಿದಂತೆ ರೈಲು ನಿಲ್ದಾಣವನ್ನು ಕೇಂದ್ರ ರೈಲ್ವೆ ಸಚಿವಾಲಯ ಮರುವರ್ಗೀಕರಣ ಮಾಡಿದೆ..

Vijaya Karnataka Web 6 Mar 2018, 9:44 am

ಮೈಸೂರು: ಮೈಸೂರು ರೈಲು ನಿಲ್ದಾಣವನ್ನು ಕೇಂದ್ರ ರೈಲ್ವೆ ಸಚಿವಾಲಯ ಮರುವರ್ಗೀಕರಣ ಮಾಡಿದೆ. ಈ ವರ್ಗೀಕರಣದ ಪ್ರಕಾರ ಮೈಸೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಸೇರಲಿದ್ದು ಇನ್ನಷ್ಟು ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಿದೆ.

Vijaya Karnataka Web including mysuru railway station 26 in upgrade division
ಮೈಸೂರು ಸೇರಿದಂತೆ 26 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ


ಇದುವರೆಗೆ ಟಿಕೇಟ್‌ ಮಾರಾಟದ ಮೇಲೆ ರೈಲ್ವೆ ನಿಲ್ದಾಣಗಳನ್ನು ವರ್ಗಿಕರಣ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರೈಲ್ವೆ ಸಚಿವಾಲಯ ರೈಲ್ವೆ ನಿಲ್ದಾಣಗಳನ್ನು ವಾರ್ಷಿಕ ಆದಾಯ, ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ ವರ್ಗೀಕರಿಸಿದೆ. ಈ ವರ್ಗೀಕರಣದ ಪ್ರಕಾರ ಮೈಸೂರು ರೈಲ್ವೆ ನಿಲ್ದಾಣವನ್ನು ನಾನ್‌ ಸಬ್‌ಅರ್ಬನ್‌ ಗ್ರೂಪ್‌-2(ಎನ್‌ಎಸ್‌ಜಿ-2) ಕೆಟಗರಿಗೆ ಸೇರ್ಪಡೆಗೊಳಿಸಲಾಗಿದೆ.

ಇದರಿಂದ ಮೇಲ್ದರ್ಜೆಗೆ ಸೇರ್ಪಡೆಗೊಂಡಿರುವ ಮೈಸೂರು ರೈಲ್ವೆ ನಿಲ್ದಾಣ ಹೆಚ್ಚಿನ ಸೌಲಭ್ಯಗಳನ್ನು ಒಳಗೊಳ್ಳಲಿದೆ. ಎನ್‌ಎಸ್‌ಜಿ-2 ವರ್ಗಿಕರಣ ವ್ಯಾಪ್ತಿ ಸರಾಸರಿ ವಾರ್ಷಿಕ 107.46 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯ, ವಾರ್ಷಿಕ 10.71 ಮಿಲಿಯನ್‌ ಪ್ರಯಾಣಿಕರನ್ನು ಒಳಗೊಂಡಿದೆ. ಇದರ ಜತೆಗೆ ಮೈಸೂರು ವಿಭಾಗ ವ್ಯಾಪ್ತಿಗೆ ಬರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಹಾಸನ, ಹರಿಹರ, ಬೀರೂರು, ಸಾಗರಜಂಬಗರು, ಸುಬ್ರಮಣ್ಯ ರಸ್ತೆಯನ್ನು ಉನ್ನತೀಕರಿಸಲಾಗಿದ್ದು ,ಇವುಗಳನ್ನು ಎನ್‌ಎಸ್‌ಜಿ-4 ಎಂದು ಮರು ವರ್ಗೀಕರಿಸಲಾಗಿದೆ.

ಈ ವರ್ಗೀಕರಣದಿಂದ ಮೈಸೂರು ವಿಭಾಗದ 124 ರೈಲ್ವೆ ನಿಲ್ದಾಣದ ಪೈಕಿ ಮೈಸೂರು ಒಳಗೊಂಡಂತೆ 26 ರೈಲ್ವೆ ನಿಲ್ದಾಣಗಳು ಉನ್ನತೀಕರಣಗೊಳ್ಳಲಿವೆ. ಇಲ್ಲಿ ಹೆಚ್ಚುವರಿ ಲಿಫ್ಟ್‌, ಎಸ್ಕಲೇಟರ್‌, ಹೆಚ್ಚುವರಿ ಬುಕ್ಕಿಂಗ್‌ ಸೌಲಭ್ಯ, ವೈಟಿಂಗ್‌ ಹಾಲ್‌, ರೈಲು ಆಗಮನದ ಫಲಕ, ಶೌಚಾಲಯಗಳು ಮೊದಲಾದ ಸೌಲಭ್ಯಗಳು ಲಭಿಸಲಿವೆ.

ಈ ಹಿಂದೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗವನ್ನು ಎ1, ಎ, ಬಿ, ಡಿ ಎಂದು ವರ್ಗೀಕರಿಸಲಾಗುತ್ತಿತ್ತು. ಇನ್ನು ಮುಂದೆ ಎನ್‌ಎಸ್‌ಜಿ1, 2, 3, 4, 5 ಎಂದು ವರ್ಗೀಕರಣಗೊಳ್ಳಲಿವೆ ಎಂದು ಹಿರಿಯ ವಿಭಾಗೀಯ ಕಮರ್ಷಿಯಲ್‌ ಮ್ಯಾನೇಜರ್‌ ಡಾ.ಎಸ್‌.ಜಿ.ಯತೀಶ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ