ಆ್ಯಪ್ನಗರ

‘ಅಣ್ಣಾವ್ರ’ ಮಾದರಿಯಲ್ಲೇ ಹೋರಾಟ ನಡೆಸಲಿ ‘ಅಣ್ಣಾವ್ರ ಮಕ್ಕಳು’! ಮತ್ತೊಂದು ಗೋಕಾಕ್ ಚಳವಳಿಗೆ ಆಗ್ರಹ

ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು, ಕರ್ನಾಟಕದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳವಳಿ ನಡೆಯಬೇಕು, ಆ ಹೋರಾಟದ ನೇತೃತ್ವವನ್ನು ನಟ ಶಿವರಾಜ್ ಕುಮಾರ್ ವಹಿಸಬೇಕು ಅನ್ನೋದು ಹೋರಾಟಗಾರರ ಆಗ್ರಹ.

Vijaya Karnataka Web 30 Oct 2019, 6:50 pm
ಮೈಸೂರು: ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕೆಂದು ಕದಂಬ ಸೈನ್ಯ ಆಗ್ರಹಿಸಿದೆ. ಇದಕ್ಕಾಗಿ ಮೈಸೂರಿನಲ್ಲಿ ಅಂಚೆ ಚಳವಳಿ ಆರಂಭವಾಗಿದೆ.
Vijaya Karnataka Web raj family



ಮೈಸೂರಿನಲ್ಲಿ ಮೈಲಾರಿ ದೋಸೆ ಸವಿದ ರಚಿತಾ ರಾಮ್ ಅಂಡ್ ಟೀಂ

ಮೈಸೂರು ನಗರದ ಲಷ್ಕರ್ ಪೋಲಿಸ್ ಠಾಣೆ ಎದುರು ಇರುವ ಅಂಚೆ ಕಛೇರಿ ಮುಂದೆ ಪ್ರತಿಭಟನಾಕಾರರು ಅಂಚೆ ಪ್ರತಿಭಟನೆ ನಡೆಸಿದರು. ನಟ ಶಿವರಾಜ್ ಕುಮಾರ್ ಅವರಿಗೆ ಅಂಚೆ ಮೂಲಕ ಮನವಿ ಪತ್ರ ಕಳುಹಿಸಲಾಯಿತು. ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗುತ್ತಿಲ್ಲ. ಹಾಗಾಗಿ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು. ಕರ್ನಾಟಕದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳವಳಿ ನಡೆಯಬೇಕು. ಆ ಹೋರಾಟದ ನೇತೃತ್ವವನ್ನು ನಟ ಶಿವರಾಜ್ ಕುಮಾರ್ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ಇಂತಹ ಚಳವಳಿ ಅಗತ್ಯವಾಗಿದೆ ಎಂದು ಕದಂಬ ಸೈನ್ಯದ ಪ್ರತಿಭಟನಾಕಾರರು ಒತ್ತಾಯಿಸಿದರು. ಶಿವರಾಜ್ ಕುಮಾರ್ ಜೊತೆಯಲ್ಲೇ ಕನ್ನಡದ ಹೆಸರಾಂತ ನಟರಾದ ಪುನೀತ್ ರಾಜ್‌ಕುಮಾರ್, ದರ್ಶನ್, ಯಶ್, ಗಣೇಶ್ ಹಾಗೂ ಹಿರಿಯ ನಟರಾದ ರವಿಚಂದ್ರನ್ ಉಪೇಂದ್ರ ಸೇರಿದಂತೆ ಇಡೀ ಕನ್ನಡ ಚಲನಚಿತ್ರ ಸಮೂಹವೇ ಬೆಂಬಲ ನೀಡಿ ಭಾಗವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಕನ್ನಡಕ್ಕಾಗಿ ಮತ್ತೊಂದು ಗೋಕಾಕ್ ಚಳವಳಿ ನಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ