ಆ್ಯಪ್ನಗರ

ರಾಜ್ಯ ಸರ್ವೋದಯವಾಗಿಲ್ಲ : ಸಿಪಿಕೆ ವಿಷಾದ

ಕರ್ನಾಟಕ ಏಕೀಕರಣಗೊಂಡು 60 ವರ್ಷಗಳಾದರೂ, ರಾಜ್ಯ ಸರ್ವೋದಯವಾಗಿಲ್ಲ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ವಿಷಾದಿಸಿದರು.

Vijaya Karnataka 1 Dec 2018, 5:00 am
ಮೈಸೂರು: ಕರ್ನಾಟಕ ಏಕೀಕರಣಗೊಂಡು 60 ವರ್ಷಗಳಾದರೂ, ರಾಜ್ಯ ಸರ್ವೋದಯವಾಗಿಲ್ಲ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ವಿಷಾದಿಸಿದರು.
Vijaya Karnataka Web kannada rajyotsava
ರಾಜ್ಯ ಸರ್ವೋದಯವಾಗಿಲ್ಲ : ಸಿಪಿಕೆ ವಿಷಾದ


ನಗರದ ವೀಣೆ ಶೇಷಣ್ಣ ಭವನದಲ್ಲಿ (ಗಾನಭಾರತಿ) ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

''ರಾಜ್ಯ ಸರ್ವೋದಯವಾಗದಿರುವುದಕ್ಕೆ ನಮ್ಮಲ್ಲಿ ಒಗ್ಗಟ್ಟಿನ ಅಭಾವವೇ ಪ್ರಮುಖ ಕಾರಣ. ನಮ್ಮಲ್ಲಿ ಇತರೆ ಸಮಸ್ಯೆಗಳ ಜತೆಗೆ ಜಾತಿ-ಮತದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುವುದರಿಂದ ಒಗ್ಗಟ್ಟು ಕೊರತೆ ಎದುರಾಗಿದ್ದು, ಪಗ್ರತಿ ಸಾಧಿಸಲು ಆಗುತ್ತಿಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.

''ಕನ್ನಡ ಭಾಷೆ, ಸಾಹಿತ್ಯಕ್ಕೀರುವ ಇತಿಹಾಸ, ಶ್ರೀಮಂತ ಪರಂಪರೆ ಇಂಗ್ಲಿಷ್‌ ಸೇರಿದಂತೆ ಬೇರೆ ಯಾವ ಭಾಷೆಗೂ ಇಲ್ಲ. ಹಾಗಾಗಿ ನಾವು ಹೆಮ್ಮೆ ಪಡಬೇಕು, ಆದರೆ, ಅನಗತ್ಯವಾಗಿ ನಾವು ಇಂಗ್ಲಿಷ್‌ಗೆ ಸ್ಥಾನಮಾನ ನೀಡುತ್ತಿದ್ದೇವೆ. ಇಂಗ್ಲಿಷ್‌ ವ್ಯಾಮೋಹ ತಾಯಂದಿರಲ್ಲಿ, ಮಹಿಳೆಯರಲ್ಲಿ ಹೆಚ್ಚಾಗಿದೆ. ಇಂಗ್ಲಿಷ್‌ ಒಂದು ಭಾಷೆಯಾಗಬೇಕು ಹೊರತು ಮಾಧ್ಯಮವಾಗಬಾರದು,'' ಎಂದು ಹೇಳಿದರು.

''ತಾಯಂದಿರು ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು. ಮಹಿಳೆಯರು ಮೊದಲು ಕನ್ನಡವನ್ನು ಹೆಚ್ಚು ಪ್ರೀತಿಸುವಂತಾಗಬೇಕು. ಇಂದು ನಾವು ಸಂಭ್ರಮದೊಂದಿಗೆ ಭಾಷೆ ಕುರಿತು ಚಿಂತನೆ ಮಾಡಲು ಮುಂದಾಗಬೇಕಿದೆ,'' ಎಂದು ತಿಳಿಸಿದರು.

ಇದೇ ವೇಳೆ ಪೊಲೀಸ್‌ ಇಲಾಖೆಯ ರೇವಣ್ಣ, ಆಟೋ ಚಾಲಕಿ ವೀಣಾ, ಶಂಕರೇಗೌಡ, ಶಿವಕುಮಾರ್‌ ಶಂಕರರಾಜು ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಚ್‌.ಪಿ.ಜನಾರ್ದನ್‌, ಬಿಐಟಿ ನಿರ್ದೇಶಕ ಮಹೇಂದ್ರ ಸಾಲಿಯಾನ್‌, ಸಂಘದ ಗೌರವಾಧ್ಯಕ್ಷ ಬಿ.ಎಸ್‌.ಪ್ರಶಾಂತ್‌, ಅಧ್ಯಕ್ಷ ಎಸ್‌.ನಾಗರಾಜು, ಸಿ.ಎ.ಜಯಕುಮಾರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ