ಆ್ಯಪ್ನಗರ

ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರಿನಲ್ಲೂ ಪ್ರತಿಭಟನೆಯ ಕಿಡಿ

ಕೃಷಿ, ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಿರುವ ಬಂದ್ ಗೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Vijaya Karnataka Web 28 Sep 2020, 10:42 am
ಮೈಸೂರು: ಕೃಷಿ, ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಿರುವ ಬಂದ್ ಗೆ ಮೈಸೂರಿನಲ್ಲೂ ಬೆಂಬಲ ವ್ಯಕ್ತವಾಗಿದೆ.. ಈ ಹಿನ್ನೆಲೆ ಇಂದು ಬೆಳ್ಳಂಬೆಳಿಗ್ಗೆ ಪ್ರತಿಭಟನಾಕಾರರು ರಸ್ತೆಗಳಿದಿದ್ದಾರೆ. ನಗರದಲ್ಲಿ ಕೃಷಿ ಹಾಗೂ ಕಾರ್ಮಿಕ ಮಸೂದೆಗಳನ್ನು ವಿರೋಧಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ, ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಳಿಗ್ಗೆಯೇ ಪ್ರತಿಭಟನೆಗೆ ಮುಂದಾದ ಪ್ರತಿಭಟನಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
Vijaya Karnataka Web mysuru


ಈ ಹಿನ್ನೆಲೆ ಬಂದ್‌ಗೆ ಹೋಟೆಲ್ ಮಾಲೀಕರ ಸಂಘ, ಕ್ಯಾಬ್, ಟ್ಯಾಕ್ಸಿ, ಲಾರಿ ಮಾಲೀಕರು ಸೇರಿ ಹಲವರಿಂದ ಬೆಂಬಲ ವ್ಯಕ್ತವಾಗಿದೆ. ರೈತರೇ ಬಾರದ ಹಿನ್ನೆಲೆ ಬಂಡಿಪಾಳ್ಯದ ಎಪಿಎಂಸಿ ಬಂದ್ ಮಾಡಲಾಗಿದೆ. ವರ್ತಕರ ಸಂಘ, ಕಾರ್ಮಿಕರ ಸಂಘಟನೆ, ದಸಂಸ ಸಹ ಬಂದ್‌ಗೆ ಬೆಂಬಲ ಸೂಚಿಸಿದೆ.

ಬೆಳ್ಳಂಬೆಳಿಗ್ಗೆ ಬೆಂಗಳೂರಿಗೆ ತೆರಳಲು ಸಜ್ಜಾಗಿದ ಬಸ್ ತಡೆದ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು. ಸಬ್‌ ಅರ್ಬನ್‌ ನಿಲ್ದಾಣದಲ್ಲಿದ್ದ ಎರಡು ಬಸ್‍ಗಳನ್ನ ತಡೆದರು. ಈ ಪ್ರತಿರೋಧದ ನಡುವೆಯೂ ಒಂದು ಬಸ್ ಕಳುಹಿಸಿದ ಪೊಲೀಸರ ನಿಲುವನ್ನು ಖಂಡಿಸಿ ಏಕಾಏಕಿ ಮತ್ತೊಂದು ಬಸ್ ಮುಂದೆ ಕುಳಿತು ಪ್ರತಿಭಟನೆ ಸಹ ನಡೆಸಿದರು. ತಲೆ ಮೇಲೆ ಕಲ್ಲು ಚಪ್ಪಡಿ ಹೊತ್ತುಕೊಂಡು, ಹೆಗಲಿಗೆ ಗುದ್ದಲಿ, ಪಿಕಾಸಿ ಹಿಡಿದು ಬಸ್‌ ಮುಂದೆ ಬಿಡದಂತೆ ಎಚ್ಚರಿಕೆ ನೀಡಿದರು.

ಮೈಸೂರಿನ ಜೆಎಸ್‌ಎಸ್‌ನಲ್ಲಿ ಮತ್ತೊಂದು ಕೋವಿಡ್‌ ಲಸಿಕೆ ಪ್ರಯೋಗ

ಆಟೋ ಹಾಗೂ ಟಾಕ್ಸಿ ಚಾಲಕರ ಅನಗತ್ಯ ಸಂಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಿಮಗೆ ಮಾನ ಮರ್ಯಾದೆ ಇಲ್ವ' ನಿಮಗೆ ತಾನೇ ಹೇಳ್ತಿರೋದು ಎಂದು ಪ್ರತಿಭಟನಾ ಸ್ಥಳದಿಂದಲೇ ಮೈಕ್‌ನಲ್ಲೇ ಅವಾಜ್ ಹಾಕಿದರು. ಅನ್ನದಾತರಿಗೆ ಒಂದು ದಿನ ಸಹಕಾರ ಕೊಡೋದಕ್ಕೆ ಆಗಲ್ವ? ಎಂದು ಏರು ಧ್ವನಿಯಲ್ಲೇ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ