ಆ್ಯಪ್ನಗರ

ಮೈಸೂರು ಸದ್ಯಕ್ಕಂತೂ ಸೀಲ್ ಡೌನ್ ಆಗಲ್ಲ: ನೂತನ ಉಸ್ತುವಾರಿ ಸಚಿವರ ಸ್ಪಷ್ಟನೆ

ಮೈಸೂರಿನಲ್ಲಿ ಸದ್ಯಕ್ಕಂತೂ ಯಾವುದೇ ಸೀಲ್ ಡೌನ್ ಮಾಡುವ ಬಗ್ಗೆ ರಾಜ್ಯ ಸರಕಾರದ ಮುಂದೆ ಪ್ರಸ್ತಾಪ ಇಲ್ಲ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Vijaya Karnataka Web 11 Apr 2020, 4:20 pm
ಮೈಸೂರು: ನಗರದಲ್ಲಿ ಸದ್ಯಕ್ಕಂತೂ ಸರಕಾರದ ಮುಂದೆ ಸೀಲ್‌ಡೌನ್ ಪ್ರಸ್ತಾಪ ಇಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಜನ ಭಯಪಡುವುದು ಬೇಡ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದರು.
Vijaya Karnataka Web st somashekar


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಂಜನಗೂಡಿನಲ್ಲಿ‌ ಎರಡು ಬಡಾವಣೆ ಮಾತ್ರ ಮಾಡಿದ್ದೇವೆ. ಮುಂದೆ ಪರಿಸ್ಥಿತಿ ನೋಡಿ ಬೇರೆಡೆಗೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ತರಕಾರಿ, ದಿನಸಿ, ಮೆಡಿಕಲ್‌ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದೇ ಇರುತ್ತದೆ. ಯಾವುದನ್ನೂ ಮುಚ್ಚುವ ಆದೇಶ ಬಂದಿಲ್ಲ. ಕೊರೊನಾ ವೈರಸ್ ಸೋಂಕು ತಡೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದೇನೆ. ಜನಪ್ರತಿನಿಧಿಗಳಿಂದ ಇನ್ನಷ್ಟು ಮಾಹಿತಿ ಪಡೆದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನಗೆ ಮೈಸೂರಿನ ಉಸ್ತುವಾರಿ ಹೊಣೆ ಕೊಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರನ್ನು ಭೇಟಿಯಾಗಿ ನೇರವಾಗಿ ಮೈಸೂರಿಗೆ ಬಂದಿದ್ದೇನೆ. ಉಸ್ತುವಾರಿ ಸಚಿವನಾಗಿರುವ ನಾನೂ ಅಧಿಕಾರಿಗಳಂತೆ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಬಹುದಾಗಿದೆ ಎಂದು ಜನತೆಗೆ ಎಸ್‌.ಟಿ.ಸೋಮಶೇಖರ್‌ ಮಾತು ಕೊಟ್ಟರು.

ವಲಸೆ ಕೂಲಿಗಾರರ ಗೋಳು ಕೇಳೋರಿಲ್ಲ, ಊರಲ್ಲಿ ಇರೋ ಮಕ್ಕಳಿಗೆ...

ಇನ್ನು ಲಾಕ್‌ಡೌನ್‌ನಿಂದ ರೈತರು ಹಾಗೂ ವರ್ತಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತವು ವ್ಯವಸ್ಥೆ ಮಾಡಿದ್ದಾರೆ,ಈಗಾಗಲೇ ರಾಜ್ಯದಾದ್ಯಂತ 2.5 ಲಕ್ಷ ಜನ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ್ದಾರೆ. ಅವರಿಗೂ ಪಡಿತರ ವಿತರಿಸಲು ಸರಕಾರ ವ್ಯವಸ್ಥೆ ಮಾಡಿದೆ ಎಂದರು.

ಮತ್ತೆ 5 ಪ್ರಕರಣ ಬೆಳಕಿಗೆ, ಮೈಸೂರಿನಲ್ಲಿ 47ಕ್ಕೇರಿದ ಸೋಂ...

ನೂತನ ಸಚಿವರಿಂದ ಜಿಲ್ಲೆಯ ಪ್ರದಕ್ಷಿಣೆ: ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಹಿನ್ನೆಲೆ ಶನಿವಾರ ಮುಂಜಾನೆಯಿಂದಲೇ ಸಚಿವ ಎಸ್‌ ಟಿ ಸೋಮಶೇಖರ್‌ ನಗರ ಪ್ರದಕ್ಷಿಣೆ ಹಾಕಿದರು. ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು ಕೇಳಿದರು. ಅಲ್ಲದೇ ಸೋಂಕು ನಿವಾರಕ ಟನಲ್ ನಲ್ಲೇ ಸ್ವತಃ ಸಚಿವರೇ ಆಗಮಿಸಿ ಉದ್ಘಾಟನೆ ಮಾಡಿದರು. ಇದೇ ವೇಳೆ ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಿದರು.

ಮೈಸೂರು ಸೀಲ್‌ ಡೌನ್‌ ಆಗಲಿದ್ಯಾ ? ಜಿಲ್ಲಾಧಿಕಾರಿಗಳ ಸ್ಪಷ...

ಇನ್ನು ತಾವು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುವ ವೇಳೆ ಚೆಕ್ ಪೋಸ್ಟ್ ಸೇರಿದಂತೆ ಎಲ್ಲೂ ಯಾವುದೇ ತೊಂದರೆಯಾಗಿಲ್ಲವೇ? ಸೂಕ್ತ ಬೆಲೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ ಸಚಿವರು, ಸಮಸ್ಯೆ ಇದ್ದರೆ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಿದರು.

ಕ್ವಾರೆಂಟೈನ್‌ ಮನೆಗಳ ತ್ಯಾಜ್ಯ ವಿಂಗಡಣೆ ಹೇಗೆ ನಡೆಯುತ್ತದ.

ಇನ್ನು ಎಪಿಎಂಸಿಗೆ ಭೇಟಿ ನೀಡಿ ಸದ್ಯದಲ್ಲೇ ಕೋಲ್ಡ್ ಸ್ಟೋರೇಜ್ ಸಿಸ್ಟಮ್ ಅಳವಡಿಸಬೇಕಿದೆ. ಆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ‌ ಕೈಗೊಳ್ಳುತ್ತೇನೆ. ಕೋಲ್ಡ್ ಸ್ಟೋರೆಜ್ ಇದ್ದರೆ ತರಕಾರಿ ಇಟ್ಟು ಮಾರಲು ರೈತರಿಗೆ ಅನುಕೂಲ ಆಗಲಿದೆ. ಇದರಿಂದ ತರಕಾರಿ ಕೊಳೆಯುವಿಕೆಗೆ ಬ್ರೇಕ್ ಬೀಳಲಿದೆ ಎಂದರು.

ಜ್ಯುಬಿಲಿಯೆಂಟ್ ವಿರುದ್ಧ ಪ್ರಕರಣ ದಾಖಲಿಸುವುದು ಕಾನೂನಿನಡ...

ರೈತರ ಬೆಳೆಗಳನ್ನು ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಕೆಲವೆಡೆ ಈಗಾಗಲೇ ಆ ಕೆಲಸ‌ ಆಗುತ್ತಿದೆ. ರೈತರಿಂದ ಪಡೆದು ಹಾಪ್ ಕಾಮ್ಸ್ ಮೂಲಕ ಮಾರಾಟದ ಬಗ್ಗೆ ಚಿಂತನೆ ಇದೆ. ಜನಪ್ರತಿನಿಧಿಗಳು ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ‌ ಕೈಗೊಳ್ಳುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ