ಆ್ಯಪ್ನಗರ

ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಹೈಕೋರ್ಟ್‌ ತಡೆ; ಮೈಸೂರು ಮಹಾನಗರ ಪಾಲಿಕೆಗೆ ಹಿನ್ನಡೆ

ಮೈಸೂರಿನ ಐತಿಹಾಸಿಕ ದೇವರಾಜ ಮಾರುಕಟ್ಟೆಗೆ ಹೈಕೋರ್ಟ್‌ ಮರುಜೀವ ನೀಡಿದೆ. ಹೌದು, ಮಾರುಕಟ್ಟೆಯನ್ನು ನೆಲಸಮಗೊಳಿಸಿ ಪುನರ್‌ ನಿರ್ಮಿಸುವ ಮೈಸೂರು ಪಾಲಿಕೆಯ ಕನಸಿಗೆ ಹೈಕೋರ್ಟ್‌ ತಣ್ಣೀರೆರಚಿದೆ.

Vijaya Karnataka Web 22 Dec 2020, 7:34 pm
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಲ್ಲಿನ ಐತಿಹಾಸಿಕ ದೇವರಾಜ ಮಾರುಕಟ್ಟೆ ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುವ ನಗರ ಪಾಲಿಕೆಯ ಕನಸಿಗೆ ಹೈಕೋರ್ಟ್‌ ತಣ್ಣೀರೆರಚಿದೆ. ಹೌದು, ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.
Vijaya Karnataka Web devaraja market
ಮೈಸೂರು ದೇವರಾಜ ಮಾರುಕಟ್ಟೆ (ಸಂಗ್ರಹ ಚಿತ್ರ)


ಹೈಕೋರ್ಟ್‌ನ ಆದೇಶದಿಂದ ಮೈಸೂರು ಮಹಾನಗರ ಪಾಲಿಕೆಗೆ ಹಿನ್ನಡೆಯಾದಂತಾಗಿದೆ. ದೇವರಾಜ ಮಾರುಕಟ್ಟೆ ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿತ್ತು. ಮಾರುಕಟ್ಟೆ ನೆಲಸಮಗೊಳಿಸುವ ಪಾಲಿಕೆ ನಿರ್ಧಾರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದರು.

ಯದುವೀರ್ ಅಭಿಪ್ರಾಯಕ್ಕೆ ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದರು. ಅದಲ್ಲದೇ ಮಾರುಕಟ್ಟೆ ಪಾರಂಪರಿಕವಾಗಿಯೇ ಉಳಿಸಿಕೊಳ್ಳಬೇಕು ಎಂದು ನಗರದ ನಾಗರಿಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಕಟ್ಟಡ ಕೆಡವುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದೆ.

ಪುನರುಜ್ಜೀವನಗೊಳಿಸಿದರೆ ಮೈಸೂರು ದೇವರಾಜ ಮಾರುಕಟ್ಟೆಗೆ ಇನ್ನೂ 70 ವರ್ಷ!

ದೇವರಾಜ ಮಾರುಕಟ್ಟೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಅದನ್ನು ನೆಲಸಮಗೊಳಿಸಿ ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಬೇಕು ಎಂದು ನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ದೇವರಾಜ ಮಾರುಕಟ್ಟೆಗೆ ಬೇಕಿದೆ 70 ಕೋಟಿ ರೂ., ದಾರಿ ಕಾಣದಾದ ಮೈಸೂರು ಪಾಲಿಕೆ

ಇದಲ್ಲದೇ ಪಾರಂಪರಿಕ ಇಲಾಖೆ ಕೂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಟ್ಟಡ ಕೆಡವಿ ನವೀಕರಣ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಈ ನಿರ್ಣಯಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಮೈಸೂರಿನ ದೇವರಾಜ ಮಾರುಕಟ್ಟೆ ತಳಪಾಯವೇ ಭದ್ರವಾಗಿಲ್ಲ..! ಮಾರ್ಕೆಟ್ ಪುನರ್ ನಿರ್ಮಾಣಕ್ಕೆ ಮಣ್ಣೇ ವಿಘ್ನ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ