ಆ್ಯಪ್ನಗರ

ಕೆಎಸ್ಓಯು ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ !

ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಆರಂಭವಾಗುವ ತನ್ನ ಕೋರ್ಸ್ ಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗಾಗಿ ಫೋನ್‌ ಅಪ್ಲಿಕೇಷನ್‌ ಹೊರತಂದಿದೆ. ಪಠ್ಯಕ್ಕಿಂತ ಹೆಚ್ಚಿನ ವಿಷಯಗಳು ಈ ಆ್ಯಪ್ ನಲ್ಲಿ ಸಿಗಲಿದೆ.

Vijaya Karnataka Web 2 Nov 2019, 2:26 pm
ಮೈಸೂರು: ಹಲವು ಹೊಸತನವನ್ನು ಪರಿಚಿಸುವ ಕೆಎಸ್ ಓಯು ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ಬಹುದಿನದ ದೂರ ಶಿಕ್ಷಣದ ಕುರಿತಾದ ಒಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೊಬೈಲ್‌ ಫೋನ್‌ ಅಪ್ಲಿಕೇಷನ್‌ ಹೊರತಂದಿದೆ.
Vijaya Karnataka Web mysuru


ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಆರಂಭವಾಗುವ ತನ್ನ ಕೋರ್ಸ್ ಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ವಿವಿ ನೀಡಿದ ಪಠ್ಯವನ್ನು ಓದಬೇಕಿತ್ತು ಹಾಗಾಗಿ ಅದಕ್ಕಾಗಿಯೇ ಕಾಯಬೇಕಿತ್ತು. ಇದರ ಜೊತೆ- ಜೊತೆಗೆ ಕೆಎಸ್ ಓಯು ವಿದ್ಯಾರ್ಥಿಗಳಿಗೆ ಜೆರಾಕ್ಸ್ ಸೆಂಟರ್ ನಲ್ಲಿ ಸಿಗುವ ಪಠ್ಯ ಅನುಸರಿಸಬೇಕಿತ್ತು. ಇವೆಲ್ಲವನ್ನು ಗಮನಿಸಿದ ವಿಶ್ವವಿದ್ಯಾಲಯದ ತಂಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಗೈನಲ್ಲೇ ಎಲ್ಲಾ ಪಠ್ಯವನ್ನು ಹಾಗೂ ಸಾಕಷ್ಟು ಕಲಿಕಾ ಸಾಮಾಗ್ರಿಯನ್ನು ಆ್ಯಪ್ ಮೂಲಕ ನೀಡಿದೆ. ಇದನ್ನು ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಂಡರೆ ಸಾಕು, ತಾವು ಕುಳಿತ ಜಾಗದಲ್ಲಿಯೇ ಪಠ್ಯವನ್ನು ಓದಬಹುದು. ಅಲ್ಲದೇ ಪಠ್ಯಕ್ಕಿಂತ ಹೆಚ್ಚಿನ ವಿಷಯಗಳು ಈ ಆ್ಯಪ್ ನಲ್ಲಿ ಸಿಗಲಿದೆ ಎಂಬುದು ಸಂತಸದ ಸಂಗತಿ.

ಕೇವಲ ಪಠ್ಯದ ಓದುವಿಕೆಗೆ ಇಲ್ಲಿ ಸೀಮಿತಗೊಳಿಸದೆ ವಿಶ್ವವಿದ್ಯಾಲಯದ ನುರಿತ ಅಧ್ಯಾಪಕರು ಆಯಾ ವಿಷಯಗಳ ವಿಡಿಯೋ ಮಾಡಿ ಉಪನ್ಯಾಸವನ್ನು ನೀಡಲಿದ್ದಾರೆ. ಅಲ್ಲದೇ ಈಗಾಗಲೇ ವಿ.ವಿ.ಯಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳ ಕುರಿತುಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೊ ಉಪನ್ಯಾಸಗಳನ್ನು ಚಿತ್ರೀಕರಿಸಲಿದೆ. ಈ ವಿಡಿಯೋಗಳನ್ನು ಕೆಎಸ್‌ಒಯು ಅಪ್ಲಿಕೇಷನ್ ಮೂಲಕ ವಿದ್ಯಾರ್ಥಿಗಳು ವೀಕ್ಷಿಸಬಹುದು.

ಇನ್ನು ಕೆಎಸ್‌ಒಯುನ ವೆಬ್‌ಸೈಟನ್ನು ಸಹ ಈಗಿನ ಯುಗದಂತೆ ಮರು ವಿನ್ಯಾಸಗೊಳಿಸಲಾಗುತ್ತಿದೆ. ಅಲ್ಲದೇ ಕೆಲವೇ ದಿನದಲ್ಲಿ ವೆಬ್‌ಸೈಟ್‌ ಮೂಲಕವೂ ಪಠ್ಯವನ್ನು ಡೌನ್‌ಲೋಡ್‌ ಮಾಡುವ ವ್ಯವಸ್ಥೆ ನೀಡಲಾಗಿದೆ. ಹಿಂದಿನ ಕಲಿಕಾ ಪದ್ಧತಿ ದಿನ ಕಳೆದಂತೆ ಬೆಲೆ ಕಳೆದುಕೊಳ್ಳುತ್ತದೆ. ಹಾಗಾಗಿ ನಮ್ಮ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆ ಇಲ್ಲವೆಂಬಂತೆ ಈ ಯೋಜನೆ ರೂಪಿಸಲಾಗುತ್ತಿದೆ. ಮೊಬೈಲ್‌ ಅಪ್ಲಿಕೇಷನ್‌ ಈ ನಿಟ್ಟಿನಲ್ಲಿ ನಮ್ಮ ವಿಶ್ವಿದ್ಯಾಲಯದ ಮೊದಲ ಪ್ರಯತ್ನ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ‍ ತಿಳಿಸಿದ್ದಾರೆ.
ಇದಾದ ಬಳಿಕ ಮುಂದಿನ ವರ್ಷ 2020ರಿಂದ ಕೆಎಸ್ಓಯುನಲ್ಲಿ ಹೊಸ ಆನ್‌ಲೈನ್‌ ಕೋರ್ಸ್‌ಗಳು ಸಹ ಪ್ರಾರಂಭವಾಗಲಿದ್ದು, ಇದು ಹೆಚ್ಚು ಅನುಕೂಲಕರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ