ಆ್ಯಪ್ನಗರ

​ ಕಡೆ ಕಾರ್ತಿಕ: ನಂಜನಗೂಡಿಗೆ ಭಕ್ತರ ದಂಡು

ಕಾರ್ತಿಕ ಮಾಸದ ಕೊನೆ ಸೋಮವಾರದ ಅಂಗವಾಗಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಕ ಸುದ್ದಿಲೋಕ 29 Nov 2016, 5:15 am
ನಂಜನಗೂಡು: ಕಾರ್ತಿಕ ಮಾಸದ ಕೊನೆ ಸೋಮವಾರದ ಅಂಗವಾಗಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
Vijaya Karnataka Web kartik hand nanjangud flocks of believers
​ ಕಡೆ ಕಾರ್ತಿಕ: ನಂಜನಗೂಡಿಗೆ ಭಕ್ತರ ದಂಡು


ಜಲ, ಎಳನೀರು, ಪಂಚಾಮತ ಇನ್ನಿತರ ಪದಾರ್ಥ ಗಳಿಂದ ಅಭಿಷೇಕ ನಡೆಸಿ ಮಹಾಮಂಗಳಾರತಿ ನೆರವೇರಿಸಿ ದರು. ಬೆಳಗಿನ ಜಾವ 5 ಗಂಟೆಗೇ ದೇವಾಲಯದ ಬಾಗಿಲು ತೆರೆದು ನಂಜುಂಡೇಶ್ವರನ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಗಿತ್ತು.

ವಿಶೇಷ ರುದ್ರ ಪಾರಾಯಣಗಳು ಬೆಳಗ್ಗೆಯಿಂದ ಸಂಜೆ ವರೆಗೂ ಜರುಗಿದವು. ಜನರು ಕಪಿಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ತುಲಾಭಾರ ಇನ್ನಿತರ ಹರಕೆಗಳನ್ನು ತೀರಿಸಿದರು. ನೂರಾರು ಸಂಖ್ಯೆಯ ಮಹಿಳೆಯರು ದೇವಾಲಯದ ಒಳಾವರಣದಲ್ಲಿರುವ ಧ್ವಜಸ್ಥಂಭದ ಬಳಿ ದೀಪಗಳನ್ನು ಹಚ್ಚಿ ದೇವರಿಗೆ ಆರತಿ ಎತ್ತುವ ಮೂಲಕ ಭಕ್ತಿ ಸಮರ್ಪಿಸಿದರು.

ನೂಕು ನುಗ್ಗಲು: ಬೆಳಗ್ಗೆ 7 ಗಂಟೆ ನಂತರ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ದೇವಾಲಯದ ಒಳ ಪ್ರವೇಶಕ್ಕ ನೂಕು ನುಗ್ಗಲು ಉಂಟಾಗಿತ್ತು. 30 ರೂ. ಹಾಗೂ 100 ರೂ. ನೀಡಿ ತೆರಳುವ ವಿಶೇಷ ದರ್ಶನದ ಸಾಲುಗಳೂ ಜನರಿಂದ ಗಿಜಿಗುಡುತ್ತಿದ್ದವು.

ವಸತಿ ಸಚಿವ ಎಂ.ಕಷ್ಣಪ್ಪ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಮುಜರಾಯಿ ಇಲಾಖೆ ಆಯುಕ್ತ ಷಡಕ್ಷರಸ್ವಾಮಿ ಸೇರಿದಂತೆ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯದ ಕಾರ‌್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್, ಎಇಓ ಗಂಗಯ್ಯ ಉಪಸ್ಥಿತರಿದ್ದರು. ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಚೇತನ್ ನೇತತ್ವದ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನೋಡಿಕೊಂಡರು.
ತಾಲೂಕಿನ ಸಂಗಮದಲ್ಲಿರುವ ಮಹದೇವತಾತನವರ ಗದ್ದುಗೆ, ಸುತ್ತೂರಿನ ಶಿವರಾತ್ರೀಶ್ವರ ಗದ್ದುಗೆ ಆವರಣದಲ್ಲೂ ವಿಶೇಷ ಧಾರ್ಮಿಕ ಪೂಜಾ ಕಾರ‌್ಯಗಳು ಜರುಗಿದವು. ಇಲ್ಲಿಯೂ ನೂರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ