ಆ್ಯಪ್ನಗರ

ರಾಮೇಶ್ವರಪ್ಪ ಸಸ್ಪೆಂಡ್‌ಗೆ ಕೆಎಟಿ ತಡೆ

ನಂಜನಗೂಡಿನ ಗೋದಾಮಿನಲ್ಲಿ ಅನ್ನ ಭಾಗ್ಯ ಯೋಜನೆಯ ಆಹಾರ ಧಾನ್ಯಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಅವರನ್ನು ಅಮಾನತುಪಡಿಸಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ.

Vijaya Karnataka 21 Jul 2018, 5:00 am
ಮೈಸೂರು : ನಂಜನಗೂಡಿನ ಗೋದಾಮಿನಲ್ಲಿ ಅನ್ನ ಭಾಗ್ಯ ಯೋಜನೆಯ ಆಹಾರ ಧಾನ್ಯಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಅವರನ್ನು ಅಮಾನತುಪಡಿಸಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ.
Vijaya Karnataka Web kat barrier to rameshwarappa suspend
ರಾಮೇಶ್ವರಪ್ಪ ಸಸ್ಪೆಂಡ್‌ಗೆ ಕೆಎಟಿ ತಡೆ


ಡಾ.ರಾಮೇಶ್ವರಪ್ಪ ತಮ್ಮ ಸಸ್ಪೆಂಡ್‌ ಆದೇಶವನ್ನು ಕೆಎಟಿನಲ್ಲಿ ಪ್ರಶ್ನಿಸಿದ್ದರು. ಈ ಕುರಿತು ಕೆಎಟಿ ಗುರುವಾರ ತಡೆಯಾಜ್ಞೆ ನೀಡಿದೆ. ನಂಜನಗೂಡಿನ ಉಗ್ರಾಣದಿಂದ ಸುಮಾರು 37 ಲಕ್ಷ ರೂ. ಮೌಲ್ಯದ ಅಕ್ಕಿ, ಬೇಳೆ ದುರುಪಯೋಗವಾಗಿರುವ ಬಗ್ಗೆ ರಾಮೇಶ್ವರಪ್ಪ ಅವರೇ ಜು. 13ರಂದು ನಂಜನಗೂಡಿನ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ರಾಮೇಶ್ವರಪ್ಪ ಹಾಗೂ ಇತರ ಇಬ್ಬರು ನೌಕರರನ್ನು ಸೇವೆಯಿಂದ ಸಸ್ಪೆಂಡ್‌ ಮಾಡಲಾಗಿತ್ತು. ಉಗ್ರಾಣದ ವ್ಯವಸ್ಥಾಪಕ ಮೈಲಾರಯ್ಯ, ಸಹಾಯಕ ಬಸವರಾಜು ಸೇವೆಯಿಂದ ಅಮಾನತುಗೊಂಡ ಇತರ ಇಬ್ಬರು ನೌಕರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ