ಆ್ಯಪ್ನಗರ

ಕಾರು ಅಪಘಾತದಲ್ಲಿ ಕೇರಳ ಮೂಲದ ದಂಪತಿ ಸಾವು

ಹುಣಸೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಿಳಿಕೆರೆ ಸಮೀಪದ ಹುಲ್ಲೇನಹಳ್ಳಿ ಗೇಟ್‌ ಬಳಿ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಯ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕೇರಳ ಮೂಲದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ಪುತ್ರ ಸೇರಿದಂತೆ ಮೂವರು ತೀವ್ರ ಗಾಯಗೊಂಡಿದ್ದಾರೆ.

Vijaya Karnataka 15 Jan 2020, 5:00 am
ಹುಣಸೂರು-ಮೈಸೂರು ಹೆದ್ದಾರಿಯ ಹುಲ್ಲೇನಹಳ್ಳಿ ಬಳಿ ದುರ್ಘಟನೆ
Vijaya Karnataka Web MYS14HUN11_45
ಹುಣಸೂರು-ಮೈಸೂರು ಹೆದ್ದಾರಿಯ ಹುಲ್ಲೇನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿನುಜ್ಜುಗುಜ್ಜಾದ ಡಿಸೈರೋ ಕಾರು.


ಹುಣಸೂರು:
ಹುಣಸೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಿಳಿಕೆರೆ ಸಮೀಪದ ಹುಲ್ಲೇನಹಳ್ಳಿ ಗೇಟ್‌ ಬಳಿ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಯ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕೇರಳ ಮೂಲದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ಪುತ್ರ ಸೇರಿದಂತೆ ಮೂವರು ತೀವ್ರ ಗಾಯಗೊಂಡಿದ್ದಾರೆ.

ಕೇರಳ ರಾಜ್ಯದ ಕಣ್ಣಾನೂರು ಜಿಲ್ಲೆಯ ತಳಿಪರಂಬ ತಾಲೂಕಿನ ನಡಿಯಂಗ ಗ್ರಾಮದ ಮ್ಯಾಥ್ಯೂ(58) ಮತ್ತು ಪತ್ನಿ ಲಿಲ್ಲಿಕುಟ್ಟಿ(54) ಮೃತರು. ಕಾರು ಚಲಾಯಿಸುತ್ತಿದ್ದ ಇವರ ಪುತ್ರ ಲೀನ್ಸ್‌ ಮ್ಯಾಥ್ಯೂ ಅವರ ಎರಡೂ ಕಾಲುಗಳು ತೀವ್ರ ಜಖಂಗೊಂಡಿದೆ. ಹಾಗೂ ಮತ್ತೊಂದು ಕಾರಿನಲ್ಲಿದ್ದ ಮೈಸೂರಿನ ಸದಾನಂದ, ಮಂಜುನಾಥ್‌ ಗಾಯಗೊಂಡಿದ್ದಾರೆ.

ಆಗಿದ್ದಿಷ್ಟು: ಮ್ಯಾಥ್ಯೂ ಅವರ ಪುತ್ರಿ ಬೆಂಗಳೂರಿನ ಕಾಲೇಜೊಂದರಲ್ಲಿಎಂಬಿಬಿಎಸ್‌ ಮುಗಿಸಿದ್ದು, ಘಟಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮಂಗಳವಾರ ಮುಂಜಾನೆ ಬೆಂಗಳೂರಿನಿಂದ ಕೇರಳಕ್ಕೆ ಶಿಪ್ಟ್‌ ಡಿಸೈರೋ ಕಾರಿನಲ್ಲಿಪುತ್ರನೊಂದಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬೆಳಗ್ಗೆ 9.30ಕ್ಕೆ ಹುಲ್ಲೇನಹಳ್ಳಿ ಗೇಟ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿಚಿಕ್ಕಮಗಳೂರಿನಿಂದ ಮೈಸೂರಿನತ್ತ ತೆರಳುತ್ತಿದ್ದ ಮಂಜುನಾಥ್‌ ಹಾಗೂ ಸದಾನಂದ ಅವರಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಮತ್ತೆ ರಸ್ತೆಯ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಈ ವೇಳೆ ತೀವ್ರ ಪೆಟ್ಟು ಬಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಲೀನ್ಸ್‌ ಮ್ಯಾಥ್ಯೂ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋವಾ ಕಾರಿನಲ್ಲಿದ್ದವರಿಗೂ ತೀವ್ರ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಿಂದ ಹೆದ್ದಾರಿ ಸ್ವಲ್ಪ ಹೊತ್ತು ಬಂದ್‌ ಆಗಿತ್ತು. ತಕ್ಷಣವೇ ಬಿಳಿಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್‌ ಬಳಸಿ ಕಾರುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಸ್ಥಳಕ್ಕೆ ಡಿವೈಎಸ್‌ಪಿ ಸುಂದರರಾಜ್‌ ಭೇಟಿ ನೀಡಿದ್ದರು. ಬಿಳಿಕೆರೆ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಮೈಸೂರಿನಲ್ಲಿಶವ ಪರೀಕ್ಷೆ ನಂತರ ದಂಪತಿ ಶವವನ್ನು ಅವರ ಸಂಬಂಧಿಕರು ಕೇರಳಕ್ಕೆ ಕೊಂಡೊಯ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ