ಆ್ಯಪ್ನಗರ

ಮುಂಜಾಗ್ರತಾ ಕ್ರಮಗಳ ಸಹಿತ ಮೈಸೂರಿನಲ್ಲಿ ಆರಂಭವಾದ ಬಸ್‌ ಸಂಚಾರ

ಮೈಸೂರು ನಗರದ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ 7ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಾಗಿದೆ. 100 ಬಸ್‌ಗಳು ಸಂಚಾರಕ್ಕೆ ತಯಾರಿಗಿ ನಿಂತಿದೆ.

Vijaya Karnataka Web 19 May 2020, 1:37 pm
ಮೈಸೂರು: ಸೋಮವಾರದಿಂದ ಲಾಕ್‌ ಡೌನ್‌ 4.0 ರೂಲ್ಸ್‌ ಗಳಲ್ಲಿ ಸಡಿಲಿಕೆಗೊಂಡಿದ್ದು, ರಾಜ್ಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಬಸ್‌ ಸಂಚಾರಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆ ಮೈಸೂರು ನಗರದ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ 7ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಾಗಿದೆ. ನಗರದಿಂದ ವಿವಿಧ ತಾಲೂಕುಗಳು ಹಾಗೂ ಜಿಲ್ಲೆಗಳಿಗೆ ಬಸ್‌ ಸಂಚಾರ ಶುರುವಾಗಿದೆ.
Vijaya Karnataka Web mysuru


ಬೆಳಿಗ್ಗೆ 7 ರಿಂದ ಈವರೆಗೂ 100 ಬಸ್‌ಗಳು ಸಂಚಾರಕ್ಕೆ ತಯಾರಿಗಿ ನಿಂತಿದೆ. ಇವುಗಳು ಪ್ರಯಾಣಿಕರ ಬೇಡಿಕೆ ಆಧಾರದಲ್ಲಿ ಸಂಚರಿಸಲಿವೆ. ಬೆಂಗಳೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರ, ಮಡಿಕೇರಿ, ಹಾಸನ ಮೊದಲಾದ ಜಿಲ್ಲೆಗಳಿಗೆ ಬಸ್‌ಗಳು ತೆರಳುತ್ತಿವೆ. ಅಲ್ಲದೇ ಬಸ್‌ ನಿಲ್ದಾಣದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಅಲ್ಲದೆ ಬಸ್‌ ಹತ್ತುವಾಗ ಸ್ಯಾನಿಟೈಸರ್‌ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕಿದೆ..

ಇದು ರಾಜ್ಯದೊಳಗಣ ಚಿತ್ರಣವಾದರೆ ನಗರದೊಳಗಿನ ಪ್ರಮುಖ ಬಡಾವಣೆಗಳಿಗೆ ಬಸ್ 50 ದಿನಗಳ ಬಳಿಕ ಎಂದಿನಂತೆ ಸಂಚರಿಸುತ್ತಿದೆ. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು ಮಾತನಾಡಿ, ನಗರದಲ್ಲಿ 68 ಬಸ್ ಗಳು ಸಂಚರಿಸಲಿದೆ. ಪ್ರತಿಬಸ್ ನಲ್ಲಿ 30ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರು ಇಳಿಯುವ ಸ್ಥಳಗಳಲ್ಲಿಯೇ ಅವರನ್ನು ಇಳಿಸಲಾಗುವುದು. ಬಸ್ ನಲ್ಲಿ ಪ್ರಯಾಣಿಸುವವರಿಗೆ ಸೀಟ್ ಗಳನ್ನು ನಿಗದಿಪಡಿಸಲಾಗಿದೆ. ಸೀಟ್ ಇದ್ದಲ್ಲಿ ಮಾತ್ರ ಅವರನ್ನು ಕರೆದೊಯ್ಯಲಾಗುತ್ತದೆ. ಇಲ್ಲದಿದ್ದಲ್ಲಿ ಕರೆದೊಯ್ಯಲಾಗುವುದಿಲ್ಲ ಎಂದರು.

ಮಂಡ್ಯದಲ್ಲಿ ಮುಂಬೈ ಕೊರೊನಾ ಬಾಂಬ್‌ ಸ್ಫೋಟ..! ಒಂದೇ ದಿನ ಭರ್ತಿ 62 ಹೊಸ ಕೇಸ್

ಇದಾದ ಬಳಿಕ ಬಸ್ ಡಿಪೋದಿಂದ ಹೋಗುವ ಮುನ್ನ ಮತ್ತು ಬಸ್ ಸಾಯಂಕಾಲ ಮರಳಿದಾಗ ಬಸ್ ನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಇನ್ನು ಖಾಸಗಿ ಬಸ್‌ ಸಂಚಾರಕ್ಕೆ ಅನುಮತಿ ನೀಡಿದ್ದರೂ ತಮಗೆ ನಷ್ಟವಾಗುವ ಭೀತಿಯಿಂದ ಬಸ್‌ ಸಂಚಾರವನ್ನು ಜಿಲ್ಲೆಯಲ್ಲಿ ಸ್ಥಗಿತಗೊಳಿಸಿದ್ದು, ಇದರಿಂದ ಜನರು ಪರದಾಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ