ಆ್ಯಪ್ನಗರ

ಪಿರಿಯಾಪಟ್ಟಣದಲ್ಲಿ ಕುಂಡೇ ಹಬ್ಬ ಆಚರಣೆ

ಪಟ್ಟಣದ ಬೀದಿಗಳಲ್ಲಿ ಕುಂಡೇ ಹಬ್ಬದ ಅಂಗವಾಗಿ ಗಿರಿಜನರು ವಿವಿಧ ವೇಷ ಭೂಷಣಗಳನ್ನು ತೊಟ್ಟು ಸಂಭ್ರಮಿಸಿದರು.

Vijaya Karnataka 24 May 2018, 5:00 am
ಪಿರಿಯಾಪಟ್ಟಣ: ಪಟ್ಟಣದ ಬೀದಿಗಳಲ್ಲಿ ಕುಂಡೇ ಹಬ್ಬದ ಅಂಗವಾಗಿ ಗಿರಿಜನರು ವಿವಿಧ ವೇಷ ಭೂಷಣಗಳನ್ನು ತೊಟ್ಟು ಸಂಭ್ರಮಿಸಿದರು.
Vijaya Karnataka Web kunde festival is celebrated in piriyapatna
ಪಿರಿಯಾಪಟ್ಟಣದಲ್ಲಿ ಕುಂಡೇ ಹಬ್ಬ ಆಚರಣೆ


ಕೊಡಗಿನ ಗಡಿ ಭಾಗವಾಗಿರುವ ಪಿರಿಯಾಪಟ್ಟಣದಲ್ಲಿ 32ಕ್ಕೂ ಹೆಚ್ಚು ಹಾಡಿಗಳಿದ್ದು, ಇವುಗಳಲ್ಲಿನ ಗಿರಿಜನರು ಸಾಂಪ್ರದಾಯಿಕವಾಗಿ ಆಚರಿಸುವ ಕುಂಡೇ ಹಬ್ಬ ಗಿರಿಜನರ ಪ್ರಮುಖ ಹಬ್ಬವಾಗಿದ್ದು, ಈ ಹಬ್ಬದ ಅಂಗವಾಗಿ ನೂರಾರು ಗಿರಿಜನರು ತಂಡೋಪ ತಂಡವಾಗಿ ಪಿರಿಯಾಪಟ್ಟಣಕ್ಕೆ ಆಗಮಿಸಿದರು. ಹೆಣ್ಣಿನ ವೇಷ, ಕಾಡು ಮೃಗಗಳ ವೇಷ, ಹೀಗೆ ಅನೇಕ ವೇಷ ಭೂಷಣಗಳನ್ನು ತೊಟ್ಟ ತಂಡ ತಗಡಿನ ಡ್ರಮ್ಮು, ಸೋರೆ ಬುಂಡೆ ಮುಂತಾದವುಗಳನ್ನು ಹಿಡಿದುಕೊಂಡು ವಾದ್ಯನುಡಿಸುತ್ತಾ ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಹಾಡಿ ಕುಣಿದು ಬೈಯುವ ಮೂಲಕ ಕುಂಡೇ, ಕುಂಡೇ ಎಂದು ಹೇಳುತ್ತಾ ಹಾಡಿ ಅಂಗಡಿ ಮಾಲೀಕರಿಂದ ಹಣ ಪಡೆಯುವುದು ಮಾಮೂಲಿಯಾಗಿತ್ತು.

ಪಟ್ಟಣದ ಜನತೆ ಖುಷಿ: ವಿವಿಧ ಗಿರಿಜನಹಾಡಿಗಳಿಂದ ಆಗಮಿಸಿದ ವಿವಿಧ ವೇಷಭೂಷಣಗಳನ್ನು ತೊಟ್ಟ ಗಿರಿಜನರನ್ನು ನೋಡುವುದೇ ಪಟ್ಟಣದ ಜನರಿಗೆ ಸಂಭ್ರಮ ತಂಡೋಪ ತಂಡವಾಗಿ ಆಗಮಿಸುವ ಗಿರಿಜನರನ್ನು ಅಚ್ಚರಿಯ ಕಣ್ಣಿನಿಂದ ನೋಡಿದ ಪಟ್ಟಣದ ಜನತೆ ಅವರ ಫೋಟೋ, ವಿಡಿಯೋ ತೆಗೆದು ಸಂಭ್ರಮಿಸಿದರು.

ಗಿರಿಜನರ ಪ್ರಮುಖ ಹಬ್ಬಗಳಲ್ಲಿ ಕುಂಡೇ ಹಬ್ಬ ಸಹ ಒಂದಾಗಿದ್ದು ನಮ್ಮ ಹಿರಿಯರು ಇದನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಇದನ್ನು ನಾವು ಕೂಡ ಮುಂದುವರಿಸುತ್ತಿದ್ದು ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಈ ಆಚರಣೆಯಲ್ಲಿ ತೊಡಗಿದ್ದೇವೆ.

- ನಾಗೇಶ್‌ ಅಯ್ಯನಕೆರೆ ಹಾಡಿ.

ಕುಂಡೇ ಹಬ್ಬದ ಅಂಗವಾಗಿ ಜನರಿಂದ ವಸೂಲಿ ಮಾಡಲಾದ ಹಣವನ್ನು ಕುಂಡೇ ಹಬ್ಬದ ಆಚರಣೆಯ ಅಂಗವಾಗಿ ದೇವರಿಗೆ ಅರ್ಪಿಸಲಾಗುತ್ತದೆ. ಗಿರಿಜನರೆಲ್ಲರೂ ಸಂಭ್ರಮದಿಂದ ಆಚರಿಸುವ ಕುಂಡೇ ಹಬ್ಬ ನಮ್ಮ ವೇಷಭೂಷಣಗಳು ಎಲ್ಲವೂ ದೇವರಿಗೆ ಅರ್ಪಿತವಾದವು.

- ನಂದೀಶ ಅಯ್ಯನಕೆರೆಹಾಡಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ