ಆ್ಯಪ್ನಗರ

ಮೈಸೂರು ರೇಸ್‌ ಕ್ಲಬ್‌ಗೆ 139 ಎಕರೆ ಭೂಮಿ ಗುತ್ತಿಗೆ; ಹೈಕೋರ್ಟ್‌ನಿಂದ ಸರಕಾರಕ್ಕೆ ನೋಟಿಸ್‌

ಮೈಸೂರಿನ ರೇಸ್‌ ಕ್ಲಬ್‌ಗೆ ಸರಕಾರ ಕುರುಬರಹಳ್ಳಿ ಗ್ರಾಮದಲ್ಲಿ 139 ಎಕರೆ ಜಮೀನು ಗುತ್ತಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ನಿಗದಿತ ಆದಾಯವನ್ನು ಕ್ಲಬ್‌ ತಲುಪದಿದ್ದರೆ ಬಾಡಿಗೆ ಪಾವತಿಸುವಂತಿಲ್ಲವೇ ಎಂದು ಸರಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ.

Vijaya Karnataka Web 27 Nov 2020, 5:52 pm
ಮೈಸೂರು: ಮೈಸೂರು ರೇಸ್ ಕ್ಲಬ್‌ಗೆ ಭೂಮಿಯನ್ನು ಗುತ್ತಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಯಾವ ಆಧಾರದಲ್ಲಿ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ ಎಂಬುದನ್ನು ತಿಳಿಸುವಂತೆ ಸೂಚಿಸಿದೆ.
Vijaya Karnataka Web karnataka high court


ಕುರುಬರಹಳ್ಳಿ ಗ್ರಾಮದಲ್ಲಿ 139 ಎಕರೆ ಸರಕಾರಿ ಭೂಮಿಯನ್ನು ಮೈಸೂರು ರೇಸ್ ಕ್ಲಬ್‌ಗೆ 30 ವರ್ಷಗಳ ಕಾಲ ಗುತ್ತಿಗೆ ನೀಡಿದ್ದನ್ನು ಪ್ರಶ್ನಿಸಿ ವಕೀಲ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದೆ.

ರೇಸ್‌ ಕ್ಲಬ್‌ಗೆ ಯಾವ ಆಧಾರದಲ್ಲಿ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂಬ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. ಇನ್ನು, ಮೈಸೂರು ಕ್ಲಬ್‌ನ ಗಳಿಕೆಯ ಶೇ.2ರಷ್ಟು ಹಣವನ್ನು ಬಾಡಿಗೆ ರೂಪದಲ್ಲಿ ಸಂಗ್ರಹಿಸಲಾಗುವುದು ಎಂಬ ಒಪ್ಪಂದ ಮಾಡಿಕೊಂಡಿದ್ದೀರಿ. ಆದರೆ, ನಿಗದಿತ ಗುರಿಯ ಆದಾಯವನ್ನು ಕ್ಲಬ್‌ ಪಡೆಯದಿದ್ದರೆ ಬಾಡಿಗೆ ಪಾವತಿಸುವಂತಿಲ್ಲವೇ ಎಂದು ನ್ಯಾಯಾಲಯ ಸರಕಾರವನ್ನು ಪ್ರಶ್ನಿಸಿದೆ.

ಮೈಸೂರು: ತಲಕಾಡು ಪಂಚಲಿಂಗ ದರ್ಶನಕ್ಕೆ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ

ಜಯಚಾಮರಾಜೇಂದ್ರ ಗಾಲ್ಫ್‌ ಕ್ಲಬ್‌ನ್ನು ಕೂಡ ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರಿಗೆ ಸೂಚಿಸಿ ಹೈಕೋರ್ಟ್‌ ವಿಚಾರಣೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ