ಆ್ಯಪ್ನಗರ

ಮಾವುತರ ಮಕ್ಕಳಿಗೆ ಟೆಂಟ್‌ ಗ್ರಂಥಾಲಯ

ದಸರಾ ಮಹೋತ್ಸವಕ್ಕೆ ಆನೆಗಳೊಂದಿಗೆ ಮೈಸೂರಿಗೆ ಆಗಮಿಸಿರುವ ಮಾವುತರ ಮಕ್ಕಳ ಓದಿಗೆ ಅನುಕೂಲವಾಗುವಂತೆ ಪ್ರತಿ ಬಾರಿಯಂತೆ ಈ ಸಲವೂ ಟೆಂಟ್‌ ಗ್ರಂಥಾಲಯ ಆರಂಭಿಸಲಾಗಿದೆ.

Vijaya Karnataka 27 Sep 2019, 5:00 am
ಮೈಸೂರು: ದಸರಾ ಮಹೋತ್ಸವಕ್ಕೆ ಆನೆಗಳೊಂದಿಗೆ ಮೈಸೂರಿಗೆ ಆಗಮಿಸಿರುವ ಮಾವುತರ ಮಕ್ಕಳ ಓದಿಗೆ ಅನುಕೂಲವಾಗುವಂತೆ ಪ್ರತಿ ಬಾರಿಯಂತೆ ಈ ಸಲವೂ ಟೆಂಟ್‌ ಗ್ರಂಥಾಲಯ ಆರಂಭಿಸಲಾಗಿದೆ.
Vijaya Karnataka Web library for children
ಮಾವುತರ ಮಕ್ಕಳಿಗೆ ಟೆಂಟ್‌ ಗ್ರಂಥಾಲಯ


ಮೈಸೂರು ಅರಮನೆ ಆವರಣದಲ್ಲಿಬೀಡು ಬಿಟ್ಟಿರುವ ಮಾವುತರು, ಅವರ ಕುಟುಂಬ ಹಾಗೂ ಮಕ್ಕಳ ಜ್ಞಾನಾರ್ಜನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಕೇಂದ್ರ ಗ್ರಂಥಾಲಯವು ಟೆಂಟ್‌ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ನಿರ್ಮಿಸಿದೆ. ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪ್ರಪಂಚ ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಟೆಂಟ್‌ ಗ್ರಂಥಾಲಯದಲ್ಲಿಮಕ್ಕಳ ಕಥೆಗಳು, ಸ್ವಾತಂತ್ರ್ಯ ಹೋರಾಟಗಾರರು, ಗೌತಮ ಬುದ್ಧ, ಗಾಂಧೀಜಿ ಇತರೆ ಮಹಾನೀಯರ ಪುಸ್ತಕಗಳಿವೆ.

ದಿನಪತ್ರಿಕೆ ಹಾಗೂ ಮಕ್ಕಳ ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. 200 ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸುವುದರ ಜತೆಗೆ ಮಕ್ಕಳಲ್ಲಿಓದುವ ಹವ್ಯಾಸವನ್ನು ಬೆಳೆಸುವುದು, ಬಳಕೆ, ಸಂಗ್ರಹಣೆ, ಪುಸ್ತಕಗಳನ್ನು ಗುರುತಿಸುವುದು, ಮುಂತಾದ ಹಲವಾರು ವಿಷಯಗಳಲ್ಲಿಮಾಹಿತಿ ನೀಡುವ ಚುಟುವಟಿಕೆ ಗ್ರಂಥಾಲಯದಲ್ಲಿನಡೆಯಲಿದೆ. ಇಲಾಖಾ ಸಿಬ್ಬಂದಿಗಳು, ಹಾಗೂ ಇತರರು ಈ ಸಂಬಂಧ ಪ್ರತಿನಿತ್ಯ ಟೆಂಟ್‌ ಗ್ರಂಥಾಲಯದಲ್ಲಿಮಕ್ಕಳಿಗೆ ವಿಭಿನ್ನ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ