ಆ್ಯಪ್ನಗರ

ಕೃಷ್ಣರಾಜನಗರ ತಾಪಂಗೆ ಮಲ್ಲಿಕಾ ಅಧ್ಯಕ್ಷೆ

ಇಲ್ಲಿನ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ ರಾಗಿ ಲಾಳಂದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಎ.ಬಿ.ಮಲ್ಲಿಕಾ ರವಿಕುಮಾರ್‌ ಅವಿರೋಧವಾಗಿ ಆಯ್ಕೆಯಾದರು.

Vijaya Karnataka 8 Mar 2019, 5:00 am
ಕೃಷ್ಣರಾಜನಗರ : ಇಲ್ಲಿನ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ ರಾಗಿ ಲಾಳಂದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಎ.ಬಿ.ಮಲ್ಲಿಕಾ ರವಿಕುಮಾರ್‌ ಅವಿರೋಧವಾಗಿ ಆಯ್ಕೆಯಾದರು.
Vijaya Karnataka Web MYR-MYS07KRN1C


ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ರ ಆಯ್ಕೆ ಚುನಾವಣೆಯಲ್ಲಿ ಜಾ.ದಳದ ಶೋಭಾ ಕೋಟೇಗೌಡ ಮತ್ತು ಕಾಂಗ್ರೆಸ್‌ನ ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್‌ ಹಾಗೂ ಎ.ಬಿ.ಮಲ್ಲಿಕಾ ರವಿಕುಮಾರ್‌ ಮೂರು ಮಂದಿ ಅಧ್ಯಕ್ಷ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಕೆ.ಪಿ.ಯೋಗೇಶ್‌ರಿಗೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವಂತೆ ಪಕ್ಷ ದ ವರಿಷ್ಠರು ಮನವೊಲಿಸುವಲ್ಲಿ ಸಫಲರಾದ ಕಾರಣ ಯೋಗೇಶ್‌ ನಾಮಪತ್ರ ಹಿಂಪಡೆದರೆ, ಬಹುಮತವಿಲ್ಲದ ಕಾರಣ ಜಾ.ದಳದ ಶೋಭಾ ಕೋಟೇಗೌಡರೂ ಸಹ ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿ ಉಳಿದ ಎ.ಬಿ.ಮಲ್ಲಿಕಾ ರವಿಕುಮಾರ್‌ ಆಯ್ಕೆಯನ್ನು ಚುನಾವಣಾಧಿಕಾರಿ ಹುಣಸೂರು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಘೋಷಿಸಿದರು.

ಒಟ್ಟು 22 ಸ್ಥಾನಗಳನ್ನು ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ 14 ಕಾಂಗ್ರೆಸ್‌ ಸದಸ್ಯರನ್ನು ಹೊಂದಿದ್ದು, ಜಾ.ದಳ 8 ಸ್ಥಾನಗಳನ್ನು ಹೊಂದಿದ್ದು, ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಫಲವಾಯಿತು. ಅಲ್ಲದೇ ಕಾಂಗ್ರೆಸ್‌ ಸದಸ್ಯರ ಬೆಂಬಲದಲ್ಲೇ ಹೇಗಾದರೂ ಮಾಡಿ ಅಧಿಕಾರ ಹಿಡಿಯಬಹುದು ಎಂದು ನಾಮಪತ್ರ ಸಲ್ಲಿಸಿದ್ದ ಜಾ.ದಳ ಶೋಭಾ ಕೋಟೆಗೌಡ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವ ಮೂಲಕ ಕಾಂಗ್ರೆಸ್‌ನ ಮಲ್ಲಿಕಾ ಅವಿರೋಧವಾಗಿ ಆಯ್ಕೆಯಾಗಲು ನೆರವಾದರು.

ತಾಪಂ ಸದಸ್ಯರಾದ ಎಚ್‌.ಟಿ.ಮಂಜುನಾಥ್‌, ನೀಲಮಣಿ ರೇವಣ್ಣ, ಎಂ.ಎನ್‌.ಕುಮಾರ್‌, ಜಿ.ಡಿ.ಲಲಿತಾ, ಶೋಭಾ, ವೀಣಾ, ಶೋಭಾ ಕೋಟೇಗೌಡ, ಕೆ.ಪಿ.ಯೋಗೇಶ್‌, ಸುನೀತಾ, ಪುಟ್ಟಗೌರಮ್ಮ, ಮಮತಾ, ರತ್ನಮ್ಮ, ಎಸ್‌.ಡಿ.ಚಂದ್ರಶೇಖರ್‌, ಸಾಕಮ್ಮ, ಕೆ.ಎಲ್‌.ಲೋಕೇಶ್‌, ಜಯರಾಮೇಗೌಡ, ಎಂ.ನಾಗರಾಜು, ಮಹದೇವ, ಎ.ಬಿ.ಮಲ್ಲಿಕಾ, ಜಿ.ಎಸ್‌.ಮಂಜುನಾಥ್‌, ಸಿದ್ದಮ್ಮ, ಶ್ರೀನಿವಾಸ ಪ್ರಸಾದ್‌ ಹಾಜರಿದ್ದರು.

ಆಯ್ಕೆಯಾದ ನೂತನ ಅಧ್ಯಕ್ಷ ರನ್ನು ಕಾಂಗ್ರೆಸ್‌ ಮುಖಂಡರಾದ ದೊಡ್ಡಸ್ವಾಮಿಗೌಡ, ಜಿ.ಪಂ.ಸದಸ್ಯ ಅಚ್ಚುತಾನಂದ, ಚೀರ್ನಹಳ್ಳಿ ಶಿವಣ್ಣ, ಹಾಡ್ಯ ಕುಮಾರ್‌, ಹಾಡ್ಯ ಮಹದೇವಸ್ವಾಮಿ, ಹಂಪಾಪುರ ದೇವರಾಜ್‌, ಸಾ.ಮ.ಯೋಗೇಶ್‌, ಸೈಯ್ಯದ್‌ ಜಾಬೀರ್‌, ಮೆಡಿಕಲ್‌ ರವಿಕುಮಾರ್‌, ಲಾಳನಹಳ್ಳಿ ಧರ್ಮ, ಉದಯಕುಮಾರ್‌, ಮಾರಗೌಡನಹಳ್ಳಿ ಮಹದೇವ್‌, ಹೆಬ್ಬಾಳು ವೇಣು, ಅಭಿಸುರೇಶ್‌, ಪ್ರಸನ್ನ, ವಿನಯ್‌, ಶಮಂತ್‌ ಮತ್ತಿತರ ಮುಖಂಡರು ಹಾಜರಿದ್ದು. ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ