ಆ್ಯಪ್ನಗರ

ಅಪ್ರಾಪ್ತ ಬಾಲಕಿ ವಿವಾಹ: ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಮಗು ಜನಿಸಿರುವ ಬಗ್ಗೆ ಬಂದ ದೂರಿನ ಮೇರೆಗೆ ಯುವಕ ಹಾಗೂ ಪೋಷಕರ ವಿರುದ್ಧ ಬಿಳಿಕೆರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Vijaya Karnataka 8 Jul 2018, 5:00 am
ಹುಣಸೂರು: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಮಗು ಜನಿಸಿರುವ ಬಗ್ಗೆ ಬಂದ ದೂರಿನ ಮೇರೆಗೆ ಯುವಕ ಹಾಗೂ ಪೋಷಕರ ವಿರುದ್ಧ ಬಿಳಿಕೆರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
Vijaya Karnataka Web married to a minor girl a pocso case registered
ಅಪ್ರಾಪ್ತ ಬಾಲಕಿ ವಿವಾಹ: ಪೋಕ್ಸೋ ಪ್ರಕರಣ ದಾಖಲು


ಹುಣಸೂರು ತಾಲೂಕಿನ ಯುವಕ ಕುಟುವಾಡಿಯ ನಿವಾಸಿ ಬಾಲಕಿಯ ಪತಿ ರವಿ ಹಾಗೂ ಆತನ ಪೋಷಕರಾದ ಸೋಮಣ್ಣ ಬೋವಿ-ವೆಂಕಟಲಕ್ಷ್ಮಮ್ಮರ ವಿರುದ್ಧ ಪ್ರಕರಣ ದಾಖಲಾಗಿದ್ದು ಮೂವರೂ ಪರಾರಿಯಾಗಿದ್ದಾರೆ.

ಆಗಿರೋದಿಷ್ಟು: ವರ್ಷದ ಹಿಂದೆ ಕುಟುವಾಡಿಯ ಸೋಮಣ್ಣ ಬೋವಿ ಪುತ್ರ ರವಿ ಹಾಗೂ ಅದೇ ಊರಿನ ಬಾಲಕಿಯೊರ್ವಳೊಂದಿಗೆ ವಿವಾಹ ನಿಶ್ಚಯವಾಗಿರುವ ಬಗ್ಗೆ ಮಾಹಿತಿ ತಿಳಿದು ಗ್ರಾಮಕ್ಕೆ ಸಿಡಿಪಿಒ ನವೀನ್‌ ಕುಮಾರ್‌ ಹಾಗೂ ಸಿಬ್ಬಂದಿ ತೆರಳಿ ವಿಚಾರಣೆಗೊಳಪಡಿಸಿದಾಗ ಮೂರು ವರ್ಷದ ನಂತರ ಮದುವೆ ಮಾಡುತ್ತೇವೆಂದು ಹೇಳಿ ಎರಡೂ ಕಡೆಯವರು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಅಧಿಕಾರಿಗಳ ಕಣ್ತಪ್ಪಿಸಿ ಮದುವೆ ಮಾಡಿದ್ದರು. ಜೂ.10ರಂದು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮನೀಡಿದ್ದಳು.

ಈ ಬಗ್ಗೆ ಸಿಡಿಪಿಒಗೆ ಬಂದ ಅನಾಮಧೇಯ ಪತ್ರದಂತೆ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಕಳೆದ ವರ್ಷವೇ ಪಕ್ಕದ ಹನುಮಂತಪುರದ ಗಣಪತಿ ದೇವಾಲಯದಲ್ಲಿ ಮದುವೆ ಮಾಡಿರುವ ಹಾಗೂ ಮಗುವಾಗಿರುವ ಬಗ್ಗೆ ವಿಷಯ ಕಲೆಹಾಕಿದ್ದು, ಬಾಲ್ಯವಿವಾಹ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆಂದು ಸಿಡಿಪಿಒ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ