ಆ್ಯಪ್ನಗರ

ಮರೆಗುಳಿತನಕ್ಕೆ ಅಧಿಕ ಒತ್ತಡ, ಧೂಮಪಾನ ಕಾರಣ

ಅಧಿಕ ಒತ್ತಡ, ಧೂಮಪಾನ ಸೇರಿದಂತೆ ಇನ್ನಿತರ ವಿಷಯಗಳು ಮರೆಗುಳಿತನಕ್ಕೆ ಕಾರಣವಾಗುತ್ತವೆ ಎಂದು ಮೈಸೂರು ಮೆಡಿಕಲ್‌ ಕಾಲೇಜಿನ ಡೀನ್‌ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್‌ ಆಂತಕ ವ್ಯಕ್ತಪಡಿಸಿದರು.

Vijaya Karnataka 26 Apr 2019, 5:00 am
ಮೈಸೂರು: ಅಧಿಕ ಒತ್ತಡ, ಧೂಮಪಾನ ಸೇರಿದಂತೆ ಇನ್ನಿತರ ವಿಷಯಗಳು ಮರೆಗುಳಿತನಕ್ಕೆ ಕಾರಣವಾಗುತ್ತವೆ ಎಂದು ಮೈಸೂರು ಮೆಡಿಕಲ್‌ ಕಾಲೇಜಿನ ಡೀನ್‌ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್‌ ಆಂತಕ ವ್ಯಕ್ತಪಡಿಸಿದರು.
Vijaya Karnataka Web medical collage
ಮರೆಗುಳಿತನಕ್ಕೆ ಅಧಿಕ ಒತ್ತಡ, ಧೂಮಪಾನ ಕಾರಣ


ನಗರದ ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಅಲ್‌ಜೈಮರ್‌ ಅಂಡ್‌ ರಿಲೇಟೆಡ್‌ ಡಿಸಾರ್ಡರ್ಸ್‌ ಸೊಸೈಟಿ ಆಫ್‌ ಇಂಡಿಯಾ ಮೈಸೂರು ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಡಿಕಲ್‌ ಕಾಲೇಜು, ಸರಕಾರಿ ನರ್ಸಿಂಗ್‌ ಕಾಲೇಜು ಆಶ್ರಯದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳಿಗಾಗಿ ಆಯೋಜಿಸಿದ್ದ 'ಬುದ್ಧಿ ಮಾಂದ್ಯತೆಯ ನಿರ್ವಹಣೆ' ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

''ಪ್ರಸ್ತುತ ಮರೆಗುಳಿತನ ಸಮಸ್ಯೆ ಸಾಕಷ್ಟು ವ್ಯಾಪಿಸುತ್ತಿದ್ದು, ಅದು ಹೆಚ್ಚಾದರೆ ಬುದ್ಧಿ ಮಾಂಧ್ಯತೆಗೂ ಒಳಗಾಗುವ ಸಾಧ್ಯತೆಗಳಿವೆ. ಮರೆಗುಳಿತನ ಕಾಯಿಲೆಯಿಂದ ನೆನಪಿನ ಶಕ್ತಿಯೂ ಕ್ರಮೇಣ ಕುಂದುತ್ತಾ ಹೋಗುತ್ತದೆ. ಇಂಥವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಅರಿತಿರುವುದು ಅಗತ್ಯ,'' ಎಂದರು.

ಮೈಸೂರು ಮೆಡಿಕಲ್‌ ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಆರ್‌.ದಾಕ್ಷಾಯಿಣಿ ಪೋಸ್ಟರ್‌ ಬಿಡುಗಡೆ ಮಾಡಿ, ಮರೆಗುಳಿತನಕ್ಕೆ ಒಳಗಾದವರನ್ನು ಪತ್ತೆ ಹಚ್ಚಿ ಅವರಿಗೆ ಅಗತ್ಯ ಚಿಕಿತ್ಸೆ ಹಾಗೂ ಜನ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಅಲ್‌ಜೈಮರ್‌ ಅಂಡ್‌ ರಿಲೇಟೆಡ್‌ ಡಿಸಾರ್ಡರ್ಸ್‌ ಸೊಸೈಟಿ ಆಫ್‌ ಇಂಡಿಯಾ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷ ಡಾ.ಹನುಮಂತಾಚಾರ್‌ ಜೋಶಿ, ಮೈಸೂರು ಮೆಡಿಕಲ್‌ ಕಾಲೇಜಿನ ಕಮ್ಯುನಿಟಿ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ಮುದಸ್ಸಿರ್‌ ಅಜೀಜ್‌ಖಾನ್‌, ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ನಂದಪ್ರಕಾಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ