ಆ್ಯಪ್ನಗರ

ಪುರುಷರ ಫ್ರೀ ಸ್ಟೈಲ್‌ ಕುಸ್ತಿ: ಯಶ್ವಂತ್‌ಗೆ ಪ್ರಶಸ್ತಿ

ದಸರಾ ಮಹೋತ್ಸವದ ಪುರುಷರ ಫ್ರೀ ಸ್ಟೈಲ್‌ ಕುಸ್ತಿಯಲ್ಲಿ ಮೈಸೂರಿನ ಆರ್‌ಯಶ್ವಂತ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು

Vijaya Karnataka 15 Oct 2018, 5:00 am
ಮೈಸೂರು: ದಸರಾ ಮಹೋತ್ಸವದ ಪುರುಷರ ಫ್ರೀ ಸ್ಟೈಲ್‌ ಕುಸ್ತಿಯಲ್ಲಿ ಮೈಸೂರಿನ ಆರ್‌.ಯಶ್ವಂತ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.
Vijaya Karnataka Web mens free style wrestling yashwant award
ಪುರುಷರ ಫ್ರೀ ಸ್ಟೈಲ್‌ ಕುಸ್ತಿ: ಯಶ್ವಂತ್‌ಗೆ ಪ್ರಶಸ್ತಿ


ಡಿ.ದೇವರಾಜ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕುಸ್ತಿ ಪಂದ್ಯಾವಳಿಯ 125 ಕೆ.ಜಿ.ವಿಭಾಗದಲ್ಲಿ ಪಟ್ಟು ಬಿಡದೆ ಬಲಾಬಲ ಪ್ರದರ್ಶಿಸಿದ ಯಶ್ವಂತ್‌ ಗೆಲುವಿನ ನಗೆ ಬೀರಿದರು. ಕಡೇ ಹಂತದಲ್ಲಿ ಪರಾಭವಗೊಂಡ ಬಸವರಾಜ ಹದ್ವಾಲಿ ದ್ವಿತೀಯ ಸ್ಥಾನ ಪಡೆದರೆ, ಬೀರೇಶ್‌ ವಿ.ಲಂಗೋಟಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಫಲಿತಾಂಶ : 57 ಕೆಜಿ ವಿಭಾಗದಲ್ಲಿ ದಾವಣಗೆರೆಯ ಎಸ್‌.ಕೆಂಚಪ್ಪ(ಪ್ರ), ಕೆ.ಪ್ರವೀಣ್‌ (ದ್ವಿ), ಗದಗಿನ ಪುಂಡಲೀಕ ಬಿಂಗೇರಿ(ತೃ), 61 ಕೆಜಿ ವಿಭಾಗದಲ್ಲಿ ಸಚಿನ್‌ ಅಬೋಂಜಿ(ಪ್ರ), ದಾವಣಗೆರೆಯ ಡಿ.ಆಕಾಶ್‌(ದ್ವಿ), ಬೆಳಗಾವಿಯ ಸಂತೋಷ್‌ ಬಿ.ಮೆಟ್ರಿ(ತೃ). 65 ಕೆಜಿ ವಿಭಾಗದಲ್ಲಿ ದಾವಣಗೆರೆಯ ವೆಂಕಟೇಶ್‌(ಪ್ರ), ಬಾಗಲಕೋಟೆಯ ಶಿವಾನಂದ ತಲ್ವಾರ್‌(ದ್ವಿ), ಬೆಳಗಾವಿಯ ಮಲ್ಲೇಶ್‌ ಎಸ್‌.ಮೆಟ್ರಿ, ಸದಾಶಿವ (ತೃ). 70 ಕೆಜಿ ವಿಭಾಗದಲ್ಲಿ ಡಿಡಬ್ಲ್ಯೂಆರ್‌ ಎಸ್‌.ಪಿ.ದೀಪಕ್‌(ಪ್ರ), ದಾವಣಗೆರೆಯ ಎಸ್‌.ಪಿ.ದೀಪಕ್‌(ದ್ವಿ), ಮೈಸೂರಿನ ಸುಜೇಂದ್ರ (ತೃ). 74 ಕೆಜಿ ವಿಭಾಗದಲ್ಲಿ ಡಿಡಬ್ಲೂಆರ್‌ ಡಿ.ಅನಿಲ್‌(ಪ್ರ), ಬೆಳಗಾವಿಯ ಹುಸೇನ್‌ ಮುಲ್ಲಾ(ದ್ವಿ), ದಾವಣಗೆರೆಯ ಎಸ್‌.ಪಂಕಜ್‌ಕುಮಾರ್‌(ತೃ).

79 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಮಹೇಶ್‌ ಛಲವಾದಿ(ಪ್ರ), ದಾವಣಗೆರೆಯ ಎಸ್‌.ಕಿರಣ್‌(ದ್ವಿ), ಬೆಳಗಾವಿಯ ಕೆಂಪ್ಪಣ್ಣ ವಿಠಲ್‌(ತೃ), 86 ಕೆಜಿ ವಿಭಾಗದಲ್ಲಿ ಡಿಡಬ್ಲ್ಯೂಆರ್‌ ಬಿ.ಬಸವಂತ್‌(ಪ್ರ), ಡಿಡಬ್ಲ್ಯೂಆರ್‌ ರಿಯಾಜ್‌ ಮುಲ್ಲಾ(ದ್ವಿ), ಬೆಳಗಾವಿಯ ಪವನ್‌ಕುಮಾರ್‌, 92 ಕೆಜಿ ವಿಭಾಗದಲ್ಲಿ ದಾವಣಗೆರೆಯ ಎನ್‌.ಕಿರಣ್‌(ಪ್ರ), ಬೆಳಗಾವಿಯ ಸಾಗರ್‌ ಬಿ.(ದ್ವಿ), ಡಿಡಬ್ಲ್ಯೂಆರ್‌ ಜಿ.ನಾಗಪ್ರಸಾದ್‌(ತೃ), 97 ಕೆಜಿ ವಿಭಾಗದಲ್ಲಿ ಡಿಡಬ್ಲ್ಯೂಆರ್‌ ಸುನಿಲ್‌ ಬಿ.ಪದತಾರೆ(ಪ್ರ). ಬೆಳಗಾವಿಯ ಸಂಗಮೇಶ ಬಿರಾದರ್‌(ದ್ವಿ), ಬಾಗಲಕೋಟೆಯ ಸಾಗರ್‌ ಉಳ್ಳಾಗಡ್ಡಿ(ತೃ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ